ಜಗತ್ತಿನ ಕಣಕಣದಲ್ಲೂ ಪರಮಾತ್ಮ ಇದ್ದಾನೆ

KannadaprabhaNewsNetwork |  
Published : Mar 04, 2025, 12:32 AM IST
48 | Kannada Prabha

ಸಾರಾಂಶ

ಪರಮಾತ್ಮ ಜಗತ್ತಿನ ಕಣಕಣದಲ್ಲೂ ಇದ್ದಾನೆ. ಪರಮಾತ್ಮ ಇಲ್ಲದ ವಸ್ತು, ಸ್ಥಳಗಳೇ ಇಲ್ಲ.

ಫೋಟೋ- 3ಎಂವೈಎಸ್‌ 48ಕನ್ನಡಪ್ರಭ ವಾರ್ತೆ ಮೈಸೂರುತ್ರಿಮೂರ್ತಿ ಶಿವಜಯಂತಿ ಮಹೋತ್ಸವ ಅಂಗವಾಗಿ ಜ್ಞಾನ ವಿಜ್ಞಾನ ದಿವ್ಯ ದರ್ಶನ ಮೇಳದಲ್ಲಿ ವಾರಣಾಸಿಯ ಕಾಶಿ ವಿಶ್ವನಾಥ ಮಂದಿರದ ಮಾದರಿ ಪ್ರತಿರೂಪ, ನವ ಚೈತನ್ಯ ದೇವಿಯರ ದರ್ಶನ, ದ್ವಾದಶ ಜ್ಯೋತಿರ್ಲಿಂಗವನ್ನು ಸಾವಿರಾರು ಮಂದಿ ದರ್ಶನ ಪಡೆಯುವ ಮೂಲಕ ಸಂಪನ್ನಗೊಂಡಿತು.ನಿವೃತ್ತ ಪೊಲೀಸ್ ಮಹಾನಿರ್ದೇಶಕ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಶಂಕರ ಎಂ. ಬಿದರಿ ಮಾತನಾಡಿ, ಪರಮಾತ್ಮ ಜಗತ್ತಿನ ಕಣಕಣದಲ್ಲೂ ಇದ್ದಾನೆ. ಪರಮಾತ್ಮ ಇಲ್ಲದ ವಸ್ತು, ಸ್ಥಳಗಳೇ ಇಲ್ಲ. ನನ್ನ ವೃತ್ತಿ ಜೀವನದಲ್ಲಿ ಅನೇಕ ಕಷ್ಟ- ಸುಖದ ದಿನಗಳಲ್ಲೂ ಕಂಡಿದ್ದೇನೆ. ಒಳ್ಳೆಯ ಸಮಾಜ ನಿರ್ಮಾಣಕ್ಕಾಗಿ ಸಮಾಜ ಘಾತುಕರನ್ನು ಕೊನೆಗಾಣಿಸಿದ್ದೇನೆ. ಈ ವೇಳೆ ನನ್ನ ಜೀವ ಉಳಿದಿರುವುದು ನಿಮ್ಮಂತ ಲಕ್ಷಾಂತರ ಮಂದಿರ ಪ್ರಾರ್ಥನೆಯಿಂದ ಎಂದ ಹೇಳಿದರು.ವೃತ್ತಿ ಜೀವನದ ಕಠಿಣ ಸಂದರ್ಭದಲ್ಲಿ ನನ್ನ ಮುಂದೆ- ಹಿಂದೆ, ಅಕ್ಕ-ಪಕ್ಕ ಇದ್ದವರೂ ಹತರಾದರೂ ಆದರೆ, ನಾನು ಗಟ್ಟಿಯಾಗಿ ಉಳಿಯಲು ನಿಮ್ಮಂತಹವರು ಪ್ರಾರ್ಥಿಸಿದ ಫಲ ನಿಮ್ಮ ಮುಂದೆ ಜೀವಂತವಾಗಿದ್ದೇನೆ ಎಂದರೆ ತಪ್ಪಾಗಲಾರದು ಎಂದರು.ಉತ್ತಮ ಆಧ್ಯಾತ್ಮ ಸೇವೆಗೆ ಬ್ರಹ್ಮಕುಮಾರಿಯರ ಪಾತ್ರವಿದೆ: ಜ್ಞಾನ ವಿಜ್ಞಾನ ದಿವ್ಯ ದರ್ಶನ ಮೇಳದಲ್ಲಿ ವಾರಣಾಸಿಯ ‘ಕಾಶಿ ವಿಶ್ವನಾಥ ಮಂದಿರದ ಮಾದರಿ ಪ್ರತಿರೂಪ, ನವಚೈತನ್ಯ ದೇವಿಯರ ದರ್ಶನ, ದ್ವಾದಶ ಜ್ಯೋತಿರ್ಲಿಂಗದ ಪ್ರತಿರೂಪವನ್ನು ಸ್ಥಾಪಿಸಿ, ಹನ್ನೆರಡು ದಿನಗಳು ಯಾವುದೇ ದೇಣಿಗೆ ಸ್ವೀಕರಿಸದೆ ಸಾವಿರಾರು ಮಂದಿಗೆ ದೇವರ ದರ್ಶನ ಮಾಡಿಸಿದ್ದಾರೆ. ಇದರ ಹಿಂದೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯ ಮಹಿಳಾ ಸಾಧ್ವಿಗಳ ಶ್ರಮಿವಿದೆ. ಪ್ರಾಮಾಣಿಕ ದುಡಿಮೆಯಿದೆ ಎಂದು ಬಣ್ಣಿಸಿದರು.ಈಶ್ವರೀಯ ವಿವಿಯ ಮೈಸೂರು ವಲಯ ಸಂಚಾಲಕಿ ರಾಜಯೋಗಿನಿ ಲಕ್ಷ್ಮೀಜಿ ಅವರು ಲಕ್ಷಾಂತರ ಮಂದಿಗೆ ಈ ಮೇಳದ ಮೂಲಕ ಜಾಗೃತಿಗೊಳಿಸಿರುವುದು ಅಪರಿಮಿತ ಸಾಧನೆ. ನಮ್ಮ ಕಾಯಕದಲ್ಲಿ ದೇವರಿದ್ದಾನೆ ಎಂದು ನಂಬುವುದಾದರೆ, 140 ಕೋಟಿ ಜನರೂ ತಮ್ಮ ದುಡಿಮೆ ಮೂಲಕ ದೇವರಾಗಬಹುದು ಎಂದು ಕೊಂಡಾಡಿದರು.ನೆಲಮಂಗಲ ಬೇಲಿಮಠದ ಶ್ರೀ ಶಿವರುದ್ರಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಯಾರೂ ಚಿರಂಜೀವಿಗಳಲ್ಲ. ಇಲ್ಲಿಯೇ ಇರಬೇಕೆಂದೂ ಯಾರೂ ಬಂದಿಲ್ಲ. ಒಂದಿಲ್ಲೊಂದು ದಿನ ಈ ಭೂಮಿಯಿಂದ ಜಾಗ ಖಾಲಿ ಮಾಡಲೇಬೇಕು. ಸಾವು ನಿಜವೆಂದ ಮೇಲೆ ಸಾಧನೆಯ ಶರಣರಾಗಿಯೇ ಜೀವ ಬಿಡಬೇಕು ಎಂದು ಅವರು ಅಭಿಪ್ರಾಯಪಟ್ಟರು.ಎಡಿಸಿ ಪಿ. ಶಿವರಾಜು ಮಾತನಾಡಿ, ಇಡೀ ಜಿಲ್ಲೆಯ ಅಧಿಕಾರಿ, ಸಿಬ್ಬಂದಿ ಪ್ರತಿನಿಧಿಯಾಗಿ ಬಂದಿದ್ದೇನೆ. ನಾವು ಯಾವುದೇ ಧರ್ಮ, ಜಾತಿ ಎಂಬುದನ್ನು ಸ್ವಾರ್ಥದಿಂದ ಕೂಡಿದೆ. ಅದರಿಂದ ಹೊರಗಿದ್ದು, ನಾವೆಲ್ಲರೂ ಒಂದೇ. ಆತ್ಮವೆಂಬುದು ದೇವರು. ಆತ್ಮವೇ ದೇಹ ದೇಗುಲ ಎಂಬ ಮನೋಭಾವನೆಯಲ್ಲಿ ಎಲ್ಲರೂ ಇರಬೇಕು ಎಂದು ಅವರು ಕಿವಿಮಾತು ಹೇಳಿದರು.ಶಂಕರ ಎಂ.ಬಿದರಿ ಅವರು, ಸೇವೆಯಲ್ಲಿದ್ದಾಗ ಕಠಿಣ ಸಂದರ್ಭದಲ್ಲಿ ಮಾಡಿರುವ ಕರ್ತವ್ಯ ನಿರ್ವಹಣೆ ಇಂದಿನ ಎಲ್ಲಾ ಅಧಿಕಾರಿ, ಸಿಬ್ಬಂದಿಗೆ ಆದರ್ಶ ಪ್ರಾಯವಾಗಿದೆ. ಅವರು ಈ ಜಿಲ್ಲೆಯಲ್ಲಿದ್ದಾಗ ನಿರ್ವಹಿಸಿದ್ದ ಕಠಿಣ ಸಂದರ್ಭವನ್ನು ಎಂದಿಗೂ ಮರೆಯಲಾಗುದು. ಪೊಲೀಸ್ ಇಲಾಖೆಯ ಸಾಧಕರ ಪಟ್ಟಿಯನ್ನು ನೆನೆಯುವಾಗ ಅವರ ಹೆಸರು ಹೇಳದೆ ಆ ಪಟ್ಟಿ ಪೂರ್ಣವಾಗುವುದಿಲ್ಲ ಎಂದರು.ವೇದಿಕೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀಜಿ, ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಮಹಾಸ್ವಾಮೀಜಿ, ನ್ಯಾಯಾಧೀಶೆ ಎಸ್. ರೇಖಾ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ