ಗುಂಡಾಪುರ ಬೆಟ್ಟದ ಅರಸಮ್ಮ ದೊಡ್ಡ ಜಾತ್ರೆಗೆ ಸಕಲ ಸಿದ್ಧತೆ

KannadaprabhaNewsNetwork |  
Published : Mar 25, 2024, 12:45 AM IST
24ಕೆಎಂಎನ್ ಡಿ28 | Kannada Prabha

ಸಾರಾಂಶ

ಗುಂಡಾಪುರ ಹಾಗೂ ಹಲಗೂರು ಸೇರಿದಂತೆ ಹೆಚ್. ಬಸಾಪುರ, ಹಗಾದೂರು, ಕೆಂಪಯ್ಯನ ದೊಡ್ಡಿ, ನಂದಿಪುರ, ಬಾಳೆಹೊನ್ನಿಗ, ದಳವಾಯಿ ಕೋಡಿಹಳ್ಳಿ, ಹೊನ್ನಿಗನಹಳ್ಳಿ ಗ್ರಾಮಗಳ ಆರಾಧ್ಯ ದೇವತೆಯಾದ ಬೆಟ್ಟದ ಅರಸಮ್ಮ ಜಾತ್ರೆಯು ಮಾ.20 ರಿಂದ ಪ್ರಾರಂಭಗೊಂಡಿದೆ. ಜಾತ್ರೆಯಲ್ಲಿ ದಿನನಿತ್ಯ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ಮಂಗಳವಾರ ದೊಡ್ದ ಜಾತ್ರೆ ನಡೆಯುವುದರಿಂದ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.

ಎಚ್.ಎನ್.ಪ್ರಸಾದ್

ಕನ್ನಡಪ್ರಭ ವಾರ್ತ ಹಲಗೂರುಗುಂಡಾಪುರದ ಬಸವನ ಬೆಟ್ಟದ ತಪ್ಪಲಿನಲ್ಲಿರುವ ಆರಾಧ್ಯ ದೇವತೆ ಬೆಟ್ಟದರಸಮ್ಮನ ದೊಡ್ಡ ಜಾತ್ರೆ ಮಾ.26 ರಂದು ಭಕ್ತಿ ಪೂರಕವಾಗಿ ನಡೆಸಲು ನಡೆಸಲು ಸಕಲ ಸಿದ್ಧತೆ ಮಾಡಲಾಗಿದೆ.

ಗುಂಡಾಪುರ ಹಾಗೂ ಹಲಗೂರು ಸೇರಿದಂತೆ ಹೆಚ್. ಬಸಾಪುರ, ಹಗಾದೂರು, ಕೆಂಪಯ್ಯನ ದೊಡ್ಡಿ, ನಂದಿಪುರ, ಬಾಳೆಹೊನ್ನಿಗ, ದಳವಾಯಿ ಕೋಡಿಹಳ್ಳಿ, ಹೊನ್ನಿಗನಹಳ್ಳಿ ಗ್ರಾಮಗಳ ಆರಾಧ್ಯ ದೇವತೆಯಾದ ಬೆಟ್ಟದ ಅರಸಮ್ಮ ಜಾತ್ರೆಯು ಮಾ.20 ರಿಂದ ಪ್ರಾರಂಭಗೊಂಡಿದೆ.

ಜಾತ್ರೆಯಲ್ಲಿ ದಿನನಿತ್ಯ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ಮಂಗಳವಾರ ದೊಡ್ದ ಜಾತ್ರೆ ನಡೆಯುವುದರಿಂದ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ. ಜಾತ್ರೆಗೆ ಬರುವ ಭಕ್ತರಿಗೆ ಬಿಸಿಲಿನ ತಾಪ ನೀಗಿಸಿಕೊಳ್ಳಲು ಬೆಲ್ಲದ ಪಾನಕ ನಿಂಬೆಹಣ್ಣಿನ ಸರವತ್ತು ಮಜ್ಜಿಗೆ ಕೋಸಂಬರಿ ನೀಡಲು ಸಿದ್ಧತೆ ಮಾಡಲಾಗುತ್ತಿದೆ.

ಬಾಳೆಹೊನ್ನಿಗ ಗ್ರಾಮಸ್ಥರಿಂದ ವಿವಿಧ ಪ್ರಾಣಿಗಳ ವೇಷಗಳನ್ನು ಧರಿಸಿ ಹಾಗೂ ಹರಿದ ಬಟ್ಟೆಗಳು ಗೋಣಿಚೀಲದ ಬಟ್ಟೆಗಳನ್ನು ತೊಟ್ಟು ಬೇವಿನಸೊಪ್ಪನ್ನು ಹಿಡಿದು ಕುಣಿದು ಕುಪ್ಪಳಿಸುತ್ತಾ ನಡೆಸುವ ಪರದೇಶಿ ಕುಣಿತ ದೇವಿಗೆ ಅಚ್ಚುಮೆಚ್ಚಿನ ಕುಣಿತವಾಗಿದೆ.

ಇವರು ಬಂದ ನಂತರವೇ ಗುಂಡಾಪುರದ ಕರಗದ ಮನೆಯಿಂದ ಕರಗದ ದೇವರು ಬೆಟ್ಟದ ತಪ್ಪಲಿನ ದೇವಸ್ಥಾನಕ್ಕೆ ಹೊರಡುವುದು ಪದ್ಧತಿ, ಬಾಯಿ ಬೀಗ ಮತ್ತು ಪೂರ್ಣ ಕುಂಭಗಳನ್ನು ಹೊತ್ತ ಗೃಹಿಣಿಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ.

ರಾತ್ರಿ ವೇಳೆ ವಿದ್ಯುತ್ ದೀಪ ಅಲಂಕಾರ, ದಾನಿಗಳಿಂದ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಬೆಟ್ಟದರಸಮ್ಮ ಸತ್ಯದೇವತೆಯಾಗಿದ್ದು, ಇಲ್ಲಿಗೆ ಬರುವ ಭಕ್ತರ ಕಷ್ಟಕಾರ್ಪಣ್ಯಗಳನ್ನು ನಿವಾರಿಸುತ್ತಾ ಜಿಲ್ಲೆಯಲ್ಲಿ ಅಪಾರ ಭಕ್ತಾದಿಗಳನ್ನು ಒಳಗೊಂಡಿದೆ. ದೇವರ ಕರಗವನ್ನು ಅರ್ಚಕ ವೀರಭದ್ರಪ್ಪ ಮತ್ತು ಬೆಟ್ಟದ ತಪ್ಪಲಿಂದ ದೇವಸ್ಥಾನಕ್ಕೆ ಕೊಂಡಯ್ಯಲಾಗುತ್ತದೆ. ರಾಜ್ಯದಲ್ಲಿ ಮಳೆ ಅಭಾವ ನೀಗಿಸುವಂತೆ ದೇವರಲ್ಲಿ ಪ್ರಾರ್ಥಿಸಿ ವಿಶೇಷ ಪೂಜೆ ನಡೆಸಲಾಗುತ್ತದೆ.

ಮತ್ತೆ ರಾತ್ರಿ ಕರಗವನ್ನು ಹೊತ್ತು ಗ್ರಾಮದ ಕರಗದ ಮನೆಗೆ ತರುವಾಗ ಭಕ್ತರು ತಂಬಿಟ್ಟಿನ ಆರತಿ ಮೂಲಕ ಬರ ಮಾಡಿಕೊಳ್ಳುತ್ತಾರೆ ಇದೇವೇಳೆ ಉರ್ಜಿ ಆಡಿಸುವುದು ವಿಶೇಷವಾಗಿದೆ ಎಂದು ಅರ್ಚಕ ವೀರತಪ್ಪ ತಿಳಿಸಿದ್ದಾರೆ.ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವಮಂಡ್ಯ:ತಾಲೂಕಿನ ಸಂತೆಕಸಲಗೆರೆ ಗ್ರಾಮದಲ್ಲಿ ಮಾ.26 ಮತ್ತು 27ರಂದು ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ, ಹೆಬ್ಬಾರೆ ಮತ್ತು ಕರಗ ಹಾಗೂ ಸಿಡಿ ಹಬ್ಬ ನಡೆಯಲಿದೆ.ಮಾ.26ರ ರಾತ್ರಿ ಹೆಬ್ಬಾರೆ ಉತ್ಸವ, ಅನ್ನಸಂತರ್ಪಣೆ, ಮನರಂಜನೆ ಕಾರ್ಯಕ್ರಮ ಮತ್ತು ಕರಗ ಉತ್ಸವ, ಮಾ.27 ರಂದು ಮಧ್ಯಾಹ್ನ 12.30ಕ್ಕೆ ಸಿಡಿ ಉತ್ಸವ ಜರುಗಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಭಾನುವಾರ ಚೌಡೇಶ್ವರಿ ಜಾತ್ರೆ ಹಾಗೂ ಸಿಡಿ ಮಹೋತ್ಸವದ ಅಂಗವಾಗಿ ಕಾರಸವಾಡಿ ಗ್ರಾಮಕ್ಕೆ ಆಗಮಿಸಿದ ಶ್ರೀ ಚೌಡೇಶ್ವರಿ ಮತ್ತು ಶ್ರೀ ಹೊಂಬಾಳಮ್ಮ ದೇವಿಯ ಕರಗಗಳನ್ನು ಗ್ರಾಮಕ್ಕೆ ಸ್ವಾಗತಿಸಿ, ಪೂಜೆ ಸಲ್ಲಿಸಿ, ಬೀಳ್ಕೊಡಲಾಯಿತು.ಶ್ರೀಶನೇಶ್ವರಸ್ವಾಮಿ 72 ನೇ ವರ್ಷದ ವಿಶೇಷ ಪೂಜಾ ಕಾರ್ಯಕ್ರಮಭಾರತೀನಗರ:ಮೆಳ್ಳಹಳ್ಳಿ ಶ್ರೀಶನೇಶ್ವರಸ್ವಾಮಿಯ 72 ನೇ ವರ್ಷದ ವಿಶೇಷಪೂಜಾಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.ದೇವಸ್ಥಾನದಲ್ಲಿ ನವಗ್ರಹಪೂಜೆ, ಗಣಪತಿ ಹೋಮ ಸೇರಿದಂತೆ ಪೂಜಾಕೈಂಕರ್ಯಗಳು ಇಂದು ಬೆಳಗ್ಗೆಯಿಂದ ರಾತ್ರಿಯವರೆವಿಗೂ ಜರುಗಿತು. ಶನಿದೇವರ ಮೂರ್ತಿ ಮತ್ತು ದೇವಸ್ಥಾನವನ್ನು ವಿವಿಧ ಪುಪ್ಪಗಳಿಂದ ಅಲಂಕರಿಸಲಾಗಿತ್ತು.ಭಕ್ತಾದಿಗಳಿಂದ ಬಾಯಿಬೀಗ, ಮುಡಿಸೇವೆ ಮತ್ತು ಶ್ರೀಶನೇಶ್ವರ ಸ್ವಾಮಿಯ ಪಲ್ಲಕ್ಕಿಉತ್ಸವ ಭಕ್ತಾಧಿಗಳ ನಡುವೆ ವಿಜೃಂಭಣೆಯಿಂದ ಜರುಗಿತು. ಮಧ್ಯಾಹ್ನ 2.30 ಕ್ಕೆ 2 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ