ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಸಕಲ ಸಿದ್ಧತೆ: ರವಿ ದಳವಾಯಿ

KannadaprabhaNewsNetwork |  
Published : Mar 17, 2026, 01:15 AM IST
17 ರಂದು 19ನೇ ತಾ.ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತರೀಕೆರೆ ಪಟ್ಟಣದಲ್ಲಿ  ಸಕಲ ಸಿದ್ದತೆ | Kannada Prabha

ಸಾರಾಂಶ

ತರೀಕೆರೆಕನ್ನಡ ಸಾಹಿತ್ಯ ಪರಿಷತ್ತು ತರೀಕೆರೆ ತಾಲೂಕ ಘಟಕದಿಂದ ಮಾ.17ರಂದು 19ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸಿ ಯಶಸ್ವಿಗೊಳಿಸಲು ಸಕಲ ಸಿದ್ಧತೆ ನಡೆದಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ಹೇಳಿದ್ದಾರೆ.

31 ಸಾಧಕರಿಗೆ ಕನ್ನಡ ಸಿರಿ ಪ್ರಶಸ್ತಿ । ಇಬ್ಬರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ

ಕನ್ನಡಪ್ರಭ ವಾರ್ತೆ, ತರೀಕೆರೆ

ಕನ್ನಡ ಸಾಹಿತ್ಯ ಪರಿಷತ್ತು ತರೀಕೆರೆ ತಾಲೂಕ ಘಟಕದಿಂದ ಮಾ.17ರಂದು 19ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸಿ ಯಶಸ್ವಿಗೊಳಿಸಲು ಸಕಲ ಸಿದ್ಧತೆ ನಡೆದಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ಹೇಳಿದ್ದಾರೆ.

ಸೋಮವಾರ ಕಸಾಪದಿಂದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪಟ್ಟಣದ ಶ್ರೀ ಸಪ್ತಗಿರಿ ಕನ್ವೆನ್ಷನ್‌ ಹಾಲ್‌ ನಲ್ಲಿ ಕಾರ್ಯಕ್ರಮ ಆಯೊಜಿಸಲಾಗಿದೆ.ಬೆಳಿಗ್ಗೆ 8 ಕ್ಕೆ ರಾಷ್ಟ್ರ ದ್ವಜಾರೋಹಣ, ನಾಡ ದ್ವಜಾರೋಹಣ, ಪರಿಷತ್ತು ದ್ವಜಾರೋಹಣದ ನಂತರ ಪ್ರವಾಸಿ ಮಂದಿರ ಮುಂಭಾಗದ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ, ಹಂಜಿ ರುದ್ರಪ್ಪ ವೇದಿಕೆ ಕುವೆಂಪು ಮಹಾದ್ವಾರದವರಗೆ ಸಮ್ಮೇಳಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಜಿ.ಎಚ್.ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.ಕೇಂದ್ರ ಕಸಾಪ ಅಡಳಿತಾಧಿಕಾರಿ ಕೆ.ಎ.ದಯಾನಂದ್ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಸದಾಶಯ ನುಡಿ ನುಡಿಯಲಿದ್ದು, ಪುರಸಭೆ ಅಧ್ಯಕ್ಷ ಟಿ.ಎಸ್.ವಸಂತಕುಮಾರ್ ಮಹಾದ್ವಾರ ಉದ್ಘಾಟಿಸುವರು. ಪುಸ್ತಕ ಮಳಿಗೆಯನ್ನು ಪುರಸಭೆ ಉಪಾಧ್ಯಕ್ಷೆ ಗೀತಾ ಗಿರಿರಾಜ್ ಉದ್ಘಾಟಿಸುವರು. ಬೆಂಗಳೂರು ಅಕಾಶವಾಣಿ ಕಾರ್ಯಕ್ರಮ ನಿರ್ದೇಶಕ ಡಾ.ಎ.ಎಸ್.ಶಂಕರನಾರಾಯಣ ಸಮ್ಮೇಳನಾಧ್ಯಕ್ಷತೆ ವಹಿಸಿ ಭಾಷಣ ಮಾಡಲಿದ್ದಾರೆ ಎಂದು ವಿವರಿಸಿದರು.ಮಧ್ಯಾನ್ಹ 12ಕ್ಕೆ ಮಾಧ್ಯಮ ಗೋಷ್ಠಿ, 2ಕ್ಕೆ ಕವಿಗೋಷ್ಠಿ, 3ಕ್ಕೆ ಮಹಿಳಾ ಗೋಷ್ಠಿ, 4.30ಕ್ಕೆ ಬಹಿರಂಗ ಅಧಿವೇಶನ, 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಸಮ್ಮೇಳನದಲ್ಲಿ 31 ಸಾಧಕರಿಗೆ ಕನ್ನಡ ಸಿರಿ ಪ್ರಶಸ್ತಿ, ಇಬ್ಬರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.ಕಸಾಪ ಪ್ರಧಾನ ಕಾರ್ಯದರ್ಶಿ ಮಿಲಿಟರಿ ಶ್ರೀನಿವಾಸ್, ಕನ್ನಡಶ್ರೀ ಬಿ.ಎಸ್.ಭಗವಾನ್, ಡಾ.ಎಚ್.ಎಂ.ಮರುಳಸಿದ್ದಯ್ಯ ಪಟೇಲ್, ಸ.ನೌ.ಸಂಘ ಅಧ್ಯಕ್ಷ ಸಿ.ಆರ್.ಅನಂತಪ್ಪ, ಕಸಾಪ ಮಹಿಳಾ ಘಟಕ ಅಧ್ಯಕ್ಷೆ ಸುನಿತಾ ಕಿರಣ್, ನಾಗೇನಹಳ್ಳಿ ತಿಮ್ಮಯ್ಯ ಮತ್ತಿತರರು ಭಾಗವಹಿಸಿದ್ದರು.-16ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಸಾಪ ಅಧ್ಯಕ್ಷ ರವಿ ದಳವಾಯಿ ಮಾತನಾಡಿದರು. ಕನ್ನಡಶ್ರೀ ಬಿ.ಎಸ್.ಭಗವಾನ್, ಮಿಲಿಟರಿ ಶ್ರೀನಿವಾಸ್ ಡಾ.ಎಚ್.ಎಂ.ಮರುಳಸಿದ್ದಯ್ಯ, ಸುನಿತಾ ಕಿರಣ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೌದೆ ಒಲೆ ಮೊರೆ ಹೋದ ಹೋಟೆಲ್ ಮಾಲೀಕರು
ಸಿಲಿಂಡರ್ ದರ ಹೆಚ್ಚಳ: ಮಹಿಳಾ ಕಾಂಗ್ರೆಸ್ ಪ್ರತಿಭಟನೆ