ಡಿಸಿಎಂಸಿ ಶಾಲೆಯಲ್ಲಿ ವಾರ್ಷಿಕೋತ್ಸವ ಸಮಾರಂಭ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮನೆಯಲ್ಲಿ ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುತ್ತಾ ಬಂದರೆ ಮಕ್ಕಳ ಸರ್ವತೋಮುಖ ಬೆಳವಣಿಗೆ ಯಾಗಲಿದೆ ಎಂದು ಶೃಂಗೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಚ್.ಎ.ಪ್ರಕಾಶ್ ಹೇಳಿದರು.ಪಟ್ಟಣದ ಡಿಸಿಎಂಸಿ ಪ್ರೌಢಶಾಲೆ (ಸಿಬಿಎಸ್ಇ ಪಠ್ಯಕ್ರಮ)ಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಅನ್ಯ ವಿಚಾರ ಗಳಿಂದ ಮಕ್ಕಳ ಮನಸ್ಸಿಗೆ ಘಾಸಿಯಾಗದಂತೆ ತಿಳುವಳಿಕೆ ಮತ್ತು ಅವರಲ್ಲಿ ಸೃಜನ ಶೀಲತೆ ಗಮನಿಸಿ ಅದಕ್ಕನುಗುಣವಾಗಿ ಕಾರ್ಯಯೋಜನೆ ರೂಪಿಸಬೇಕು. ಮಕ್ಕಳು ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಾದರೆ ಅವರಲ್ಲಿರುವ ಗಟ್ಟಿತನ ಸದೃಢ ಗೊಳಿಸಬೇಕು. ಮಕ್ಕಳಿಗೆ ಪ್ರೀತಿ ತುಂಬಿ ಅವರಲ್ಲಿನ ಸದ್ಗುಣಗಳಿಂದ ಸಮಾಜ ಮುಖಿ ಕಾರ್ಯಗಳನ್ನು ಕೈಗೊಳ್ಳುವಂತೆ ಪ್ರೇರೆಪಿಸಿದಾಗ ಅವರು ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು.
ಶಿವಮೊಗ್ಗ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಮಾತನಾಡಿ, ಯಾವುದೇ ಒಂದು ಸಂಸ್ಥೆ ಉತ್ತುಂಗಕ್ಕೆ ಏರಬೇಕಾದರೆ ಅನೇಕ ಹಂತಗಳನ್ನು ದಾಟಬೇಕಾಗುತ್ತದೆ. ಅಂತಹ ಕಾರ್ಯದಲ್ಲಿ ನಿಸ್ಪಾರ್ಥದಿಂದ ತಮ್ಮನ್ನು ತಾವು ಅರ್ಪಿಸಿಕೊಂಡು ಉತ್ತಮ ಶಿಕ್ಷಣ ನೀಡುವ ತಾಲೂಕು ಒಕ್ಕಲಿಗ ಸಂಘದ ಕಾರ್ಯ ಶ್ಲಾಘನೀಯ ಎಂದರು.ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಟಿ.ರಾಜೇಂದ್ರ ಮಾತನಾಡಿ, ಮನುಷ್ಯ ಸಂಘ ಜೀವಿಯಾಗಿದ್ದು ತನ್ನ ಅಭಿವೃದ್ಧಿಗೆ ಅಗತ್ಯ ಮೂಲ ಸೌಕರ್ಯವಾದ ಶಿಕ್ಷಣ ಬಹಳ ಮುಖ್ಯ. ಹಿಂದೆ ಉತ್ತಮ ಶಿಕ್ಷಣ ನಗರ ಪ್ರದೇಶದಲ್ಲಿ ಮಾತ್ರ ಲಭಿಸುತ್ತಿತ್ತು. ಗ್ರಾಮೀಣ ಪ್ರದೇಶದಲ್ಲಿ ಕೃಷಿಯನ್ನೆ ಅವಲಂಭಿಸಿರುವ ವರ್ಗಕ್ಕೆ ನಗರ ಪ್ರದೇಶದಂತೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಒಕ್ಕಲಿಗರ ಸಂಘದಿಂದ ಎಲ್ ಕೆಜಿಯಿಂದ ಪಿಯುಸಿ ಹಂತದವರೆಗೆ ಶಿಕ್ಷಣ ಸಂಸ್ಥೆ ಅಭಿವೃದ್ಧಿ ಪಡಿಸಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಅವರನ್ನು ಸನ್ಮಾನಿಸಲಾಯಿತು.ಅತಿಥಿಗಳಾಗಿ ತಾಲೂಕು ಒಕ್ಕಲಿಗರ ಸಂಘದ ನಿಕಟಪೂರ್ವ ಅಧ್ಯಕ್ಷ ಡಿ.ಸಿ.ದಿವಾಕರ, ಸಂಘದ ಉಪಾಧ್ಯಕ್ಷ ಎಲ್.ಎಂ . ಸತೀಶ್, ಶಾರದ ಬೋರ್ಡಿಂಗ್ ಸಮಿತಿ ಅಧ್ಯಕ್ಷೆ ಎಂ.ಬಿ.ವನಮಾಲ, ಭದ್ರಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬೆಮ್ಮನೆ ಮೋಹನ್, ಉಪಾಧ್ಯಕ್ಷ ಬಿ.ವಿ.ಉಪೇಂದ್ರ, ತಾಲೂಕು ಒಕ್ಕಲಿಗರ ಸಂಘದ ಖಜಾಂಚಿ ಎಸ್.ಎಸ್.ಲೋಕೇಶ್, ಸಂಘದ ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್, ಜಂಟಿ ಕಾರ್ಯದರ್ಶಿ ಪಿ.ಕೆ.ಬಸವರಾಜ್, ಲಕರ ವಸತಿ ನಿಲಯದ ಮುಖ್ಯಸ್ಥ ಎಚ್.ಡಿ.ವಿನಯ, ಜಂಟಿ ಕಾರ್ಯದರ್ಶಿ ಪಿ.ಕೆ. ಬಸವರಾಜ್, ಬಾಲಕರ ವಸತಿ ನಿಲಯದ ಮುಖ್ಯಸ್ಥ ಎಚ್.ಡಿ.ವಿನಯ, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶಾಮಲಾ ಸತೀಶ್, ಮೀನಾಕ್ಷಿ ಕಾಂತರಾಜ್, ಬಿ.ಕೆ.ಜಾನಕೀರಾಂ, ಅಶ್ವನ್, ಪ್ರಾಂಶುಪಾಲೆ ಪದ್ಮರಮೇಶ್ ಮತ್ತಿತರರಿದ್ದರು.