ಕೆಬಿಎನ್‌ ವಿವಿಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ: ಪ್ರೊ ಅಶಫಾಕ್‌ ಅಹ್ಮದ್‌

KannadaprabhaNewsNetwork |  
Published : Oct 07, 2026, 01:30 AM IST
ಫೋಟೋ- ಕೆಬಿಎನ್‌ ಕೆಬಿಎನ | Kannada Prabha

ಸಾರಾಂಶ

ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಾಗುತ್ತದೆ. ಒತ್ತಡದ ಬದುಕಿನ ಮಧ್ಯೆ ಮನಸ್ಸು ಉಲ್ಲಾಸಿತಗೊಳಿಸಲು ಯಾವುದೇ ಕ್ರೀಡೆ ಪರಿಣಾಮಕಾರಿ. ಕೆಬಿಎನ್‌ ವಿವಿಯಲ್ಲಿ ಎಲ್ಲ ರೀತೀಯ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ಬೆಳವಣಿಗೆ ಸಾಧ್ಯ ಎಂದು ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಸಮ ಉಪಕುಲಪತಿ ಪ್ರೊ ಅಶಫಾಕ್‌ ಅಹ್ಮದ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಾಗುತ್ತದೆ. ಒತ್ತಡದ ಬದುಕಿನ ಮಧ್ಯೆ ಮನಸ್ಸು ಉಲ್ಲಾಸಿತಗೊಳಿಸಲು ಯಾವುದೇ ಕ್ರೀಡೆ ಪರಿಣಾಮಕಾರಿ. ಕೆಬಿಎನ್‌ ವಿವಿಯಲ್ಲಿ ಎಲ್ಲ ರೀತೀಯ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ಬೆಳವಣಿಗೆ ಸಾಧ್ಯ ಎಂದು ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಸಮ ಉಪಕುಲಪತಿ ಪ್ರೊ ಅಶಫಾಕ್‌ ಅಹ್ಮದ್‌ ಹೇಳಿದರು.ಖಾಜಾ ಬಂದಾನವಾಜ ವಿಶ್ವವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.ಕೆಬಿಎನ್ ಟರ್ಫ್ ಅಂತಾರಾಷ್ಟ್ರೀಯ ಸೌಲಭ್ಯಗಳನ್ನು ಹೊಂದಿದೆ. ವಿವಿಯ ಕುಲಾಧಿಪತಿ ಡಾ ಸಯ್ಯದ್‌ ಮುಹಮ್ಮದ್‌ ಅಲಿ ಅಲ್ ಹುಸ್ಸೇನಿ ಸಾಹೇಬರು ಕ್ರೀಡೆಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದಾರೆ ಎಂದರು.ಕೆಬಿಎನ್ ವಿವಿಯ ಕುಲಸಚಿವ ಮಿರ ವಿಲಾಯತ ಅಲಿ ಮಾತನಾಡಿ, ಕ್ಯಾಂಪಸ್ ನಿರ್ದೇಶಕ ಜನಾಬ ಡಾ ಸಯ್ಯದ ಮುಸ್ತಫಾ ಹುಸ್ಸೇನಿ ಕ್ರೀಡೆಗೆ ಪ್ರೊತ್ಸಾಹಿಸುತ್ತಾರೆ. ಕೆಬಿಎನ್ ಟರ್ಫ್ ಗ್ರೌಂಡನಲ್ಲಿ ಕ್ರಿಕೆಟ್, ಫುಟ್ಬಾಲ್, ಹಾಕಿ ಕ್ರೀಡೆಗಳು ನಡೆಯಲಿವೆ. ನವೆಂಬರನಿಂದ ಕೆಬಿಎನ್‌ ಗೋಲ್ಡ್ ಕಪ್ ಆರಂಭವಾಗಲಿದೆ ಎಂದರು. ಕ್ರೀಡಾ ಜ್ಯೋತಿ ಸಂಚಾರದ ಬಳಿಕ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧೀಸಲಾಯಿತು. ಆರು ದಿನಗಳ ಕಾಲ ವಿದ್ಯಾರ್ಥಿಗಳಿಗೆ ಕ್ಯಾರಮ್, ಚೆಸ್‌, ಬ್ಯಾಡ್ಮಿಂಟನ್‌, ವಾಲಿಬಲ್‌, ಥ್ರೋ ಬಾಲ್‌, ಶಾಟ್‌ಪುಟ್‌, ರಂಗೋಲಿ, ಮೆಹಂದಿ, ಪೇಂಟಿಂಗ್‌, ಪೋಸ್ಟರ್‌, ಗಾಯನ, ನೃತ್ಯ ಸೇರಿದಂತೆ ವಿವಿಧ ಕ್ರೀಡೆ ಮತ್ತು ಸಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಖಾಜಾ ಬಂದಾನವಾಜ ವಿವಿಯ ಅಕ್ಯಡೆಮಿಕ ಡೀನ ಡಾ ಜಮಾ ಮೂಸ್ವಿ, ಮೆಡಿಕಲ ಡೀನ ಡಾ. ಗುರು ಪ್ರಸಾದ, ಐಕ್ಯೂ ಎಸಿ ನಿರ್ದೇಶಕ ಡಾ ಅಬ್ದುಲ್ ಬಸೀರ, ಇಂಜಿನಿಯರಿಂಗ ಡೀನ ಪ್ರೊ ಸುಭಾಸ ಕಮಲ, ಶಿಕ್ಷಣ ಡೀನ ಮೊಹ್ಮದ ಇಕ್ಬಲ, ವಾಣಿಜ್ಯ ಡೀನ ಪ್ರೊ ಶ್ರೀನಿವಾಸ ಹಾಗೂ ಎಲ್ಲ ಮುಖ್ಯ ಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ವಿದ್ಯಾರ್ಥಿ ಕಲ್ಯಾಣ ಡೀನನ್‌ ಡಾ.ಅನೂಪ ಸ್ವಾಗತಿಸಿದರು. ಸ್ಟೂಡೆಂಟ್ ಕೌನ್ಸಿಲ್ ಬಗ್ಗೆ ಮೆಡಿಕಲ್ ವಿದ್ಯಾರ್ಥಿ ಅಫ್ರೋಜ್ ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಾಕ ಡಾ. ಮಾರೂಫ ವಂದಿಸಿದರು. ವಿದ್ಯಾರ್ಥಿಗಳಾದ ಆಯೇಷಾ ಫಾತಿಮಾ ಮತ್ತು ಸನಾ ಮೆಹಕ ನಿರೂಪಿಸಿದರು.

---ಫೋಟೊ-----ಫೋಟೋ- ಕೆಬಿಎನ್‌ ಕೆಬಿಎನ್‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯಪುರ ಶಾಸಕ ಯತ್ನಾಳ್ ವಿರುದ್ಧ ದಾವಣಗೆರೆ ಕಾಂಗ್ರೆಸ್ ದೂರು
ಶಿಥಿಲ, ಹಳೇ ಪಶು ವೈದ್ಯಕೀಯ ಆಸ್ಪತ್ರೆಗಳ ಪಟ್ಟಿ ನೀಡಿ: ಶಾಂತನಗೌಡ