ಕನ್ನಡಪ್ರಭ ವಾರ್ತೆ ತುಮಕೂರು
ತುಮಕೂರು ವಿಶ್ವವಿದ್ಯಾನಿಲಯದ ತುಮಕೂರು ಇನ್ನೋವೇಷನ್ ಇನ್‌ಕ್ಯುಬೇಷನ್ ಆ್ಯಂಡ್ ಎಂಟರ್‌ಪ್ರೆನ್ಯೂರ್‌ಶಿಪ್ ಕೌನ್ಸಿಲ್ ವತಿಯಿಂದ ಮಂಗಳವಾರ ದಂದು ಉನ್ನತ ಶಿಕ್ಷಣದಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಬೆಳೆಸುವ ಸಲುವಾಗಿ "ಐಡಿಯಾಸ್ ಟು ಇಂಪ್ಯಾಕ್ಟ್ " ಎಂಬ ವಿಷಯದ ಕುರಿತು ಪಿಎಂ-ಉಷಾ ಪ್ರಾಯೋಜಿತ ಎರಡು ದಿನಗಳ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಬ್ಬ ಉದ್ಯಮಿ ಅಡಗಿರುತ್ತಾನೆ. ಅವನಿಗೆ ಸರಿಯಾದ ಮಾರ್ಗದರ್ಶನ, ಇನ್‌ಕ್ಯುಬೇಷನ್ ಸೆಂಟರ್‌ಗಳ ಬೆಂಬಲ ಸಿಕ್ಕಾಗ, ಆತನೊಂದು ನವೋದ್ಯಮದ ಸ್ಥಾಪಕನಾಗಬಲ್ಲನು. ಇದು ನಮ್ಮ ದೇಶದ ಆರ್ಥಿಕತೆಯನ್ನು ಬಲಪಡಿಸುವುದಲ್ಲದೆ, ನೂರಾರು ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದರು. ಒಂದು ಒಳ್ಳೆಯ ಕಲ್ಪನೆಗೆ ಜಗತ್ತನ್ನೇ ಬದಲಾಯಿಸುವ ಶಕ್ತಿ ಇರುತ್ತದೆ. ಆದರೆ ಆ ಕಲ್ಪನೆ ಪ್ರಯೋಗಾಲಯದಿಂದ ಹೊರಬಂದು, ಜನಸಾಮಾನ್ಯರ ಬದುಕನ್ನು ಸುಧಾರಿಸಿದಾಗ ಮಾತ್ರ ಅದು ನಿಜವಾದ ''''''''ಇಂಪ್ಯಾಕ್ಟ್'''''''' ಆಗುತ್ತದೆ. ಹವಾಮಾನ ಬದಲಾವಣೆ, ಕೃಷಿ ಸಮಸ್ಯೆಗಳು, ಆರೋಗ್ಯ ಕ್ಷೇತ್ರ ಹಾಗೂ ತಂತ್ರಜ್ಞಾನದ ಸವಾಲುಗಳಿಗೆ ಇಂದಿನ ಯುವ ವಿದ್ಯಾರ್ಥಿಗಳು ವಿಭಿನ್ನ ಆಲೋಚನೆಗಳೊಂದಿಗೆ ಮುಂದೆ ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಬೆಂಗಳೂರಿನ ಎಚ್‌ಸಿಜಿ ಗ್ರೂಪ್ ಆಫ್ ಹಾಸ್ಪಿಟಲ್ಸ್ನ ಮುಖ್ಯ ನಾವೀನ್ಯತಾ ಅಧಿಕಾರಿ ಡಾ. ಶಿವಕಿರಣ್ ಎಸ್. ಮಕಾಮ್, ಅನಂತಪುರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಅಟಲ್ ಇನ್‌ಕ್ಯುಬೇಷನ್ ಸೆಂಟರ್‌ನ ಸಿಇಒ ಡಾ. ಚಂದ್ರಮೌಳಿ ಸಿ. ಅವರು ಉಪನ್ಯಾಸ ನೀಡಿದರು.ಬೆಂಗಳೂರಿನ ಬಯೋಇನ್ನೋವೇಶನ್ ಸೆಂಟರ್‌ನ ಉಪಾಧ್ಯಕ್ಷ ಡಾ. ಸಂತೋಷ್ ಎಸ್., ಹಾಗೂ ಸ್ಟಾರ್ಟ್ಅಪ್ ಸಲಹೆಗಾರ ರಾಜ ಕಿರಣ್ ಅವರು ಇಂದು ಅ. ೭ ಬುಧವಾರದಂದು ಉಪನ್ಯಾಸ ನೀಡುವರು.