ಮಾರುಕಟ್ಟೆಯಲ್ಲಿಯೇ ಹೂ ಬಿಸಾಡಿ ಹೋದ ಬೆಳೆಗಾರರು

KannadaprabhaNewsNetwork |  
Published : Oct 07, 2026, 01:15 AM IST
ಸಿಕೆಬಿ-1 ಹೂ ಮಾರಾಟ ಮಾಡಲು ಮಾರುಕಟ್ಟೆಗೆ ಹೂ ತಂದ ರೈತರು ಹೂ ಕೇಳೋರಿಲ್ಲದೆ, ಖರೀದಿ ಮಾಡೋವರಿಲ್ಲದೆ ಎಲ್ಲಂದರಲ್ಲಿ ಬಿಸಾಡಿ ಹೋಗಿದ್ದಾರೆ | Kannada Prabha

ಸಾರಾಂಶ

ರಾಶಿ ರಾಶಿ ಹೂಗಳನ್ನು ಬಿಕರಿಯಾಗದೆ ಕಾರಣ ಹೂ ಬೆಳೆಗಾರರು ಸುಖಾಸುಮ್ಮನೆ ಹೂವಿನ ಮಾರುಕಟ್ಟೆಯಲ್ಲಿಯೇ ಬಿಸಾಡಿ ಹೋಗುವಂತಹ ಘಟನೆ ಚಿಕ್ಕಬಳ್ಳಾಪುರ ಹೂವಿನ ಮಾರುಕಟ್ಟೆಯಲ್ಲಿ ನಡೆದಿದೆ.

ಬಿಕರಿಯಾಗದೆ ರಾಶಿ ರಾಶಿ ಹೂಗಳನ್ನು ಎಸೆದು ಹೋದ ರೈತರು । ಹಬ್ಬದಲ್ಲಿ 300 ರು.ಗೆ ಮಾರಾಟವಾಗಿದ್ದ ಚೆಂಡು ಹೂ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬಯಲು ಸೀಮೆಯ ಬರಪೀಡಿತ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹಗಲು ರಾತ್ರಿ ಅನ್ನದೆ ಪಾತಾಳದಿಂದ ಅಂರ್ತಜಲ ಬಗೆದು ಹನಿ ಹನಿ ನೀರುಣಿಸಿ ಬಂಗಾರದಂತಹ ಹೂಗಳನ್ನ ಬೆಳೆದಿದ್ದಾರೆ. ಆದರೆ ಈ ನಡುವೆ ಸುರಿದದ ಮಳೆ ಈಗ ಆ ಜಿಲ್ಲೆಯ ಹೂ ಬೆಳಗಾರರಿಗೆ ಬರೆ ಹಾಕುವಂತೆ ಮಾಡಿದೆ.

ರಾಶಿ ರಾಶಿ ಹೂಗಳನ್ನು ಬಿಕರಿಯಾಗದೆ ಕಾರಣ ಹೂ ಬೆಳೆಗಾರರು ಸುಖಾಸುಮ್ಮನೆ ಹೂವಿನ ಮಾರುಕಟ್ಟೆಯಲ್ಲಿಯೇ ಬಿಸಾಡಿ ಹೋಗುವಂತಹ ಘಟನೆ ಚಿಕ್ಕಬಳ್ಳಾಪುರ ಹೂವಿನ ಮಾರುಕಟ್ಟೆಯಲ್ಲಿ ನಡೆದಿದೆ. ಹೂವಿನ ಬೆಲೆಯಲ್ಲಿ ಭಾರೀ ಕುಸಿತ ಕಂಡಿದ್ದು, ಹೂ ಮಾರಾಟ ಮಾಡಲು ಮಾರುಕಟ್ಟೆಗೆ ಹೂ ತಂದ ರೈತರು ಹೂ ಕೇಳೋರಿಲ್ಲದೆ, ಖರೀದಿ ಮಾಡೋವರಿಲ್ಲದೆ ಎಲ್ಲಂದರಲ್ಲಿ ಬಿಸಾಡಿ ಹೋಗಿದ್ದಾರೆ.

ಕಳೆದ 1 ತಿಂಗಳ ಹಿಂದೆ ಅದರಲ್ಲೂ ವರ ಮಹಾಲಕ್ಷ್ಮೀ ಮತ್ತು ಗಣೇಶ ಹಬ್ಬಕ್ಕೆ ಭಾರೀ ಏರಿಕೆ ಕಂಡಿದ್ದ ಹೂವಿನ ದರ ಈಗ ಪಾತಾಳಕ್ಕೆ ಕುಸಿದಿದೆ. ವರಮಹಾಲಕ್ಷ್ಮೀ ಮತ್ತು ಗಣೇಶ ಹಬ್ಬಗಳಂದು 1 ಕೆಜಿ ಚೆಂಡು ಹೂ 60 ರಿಂದ 100 ರುಪಾಯಿಗೆ ಮಾರಾಟವಾಗಿತ್ತು. ಆದರೆ ಈಗ ಚೆಂಡು ಹೂ ಖರೀದಿ ಮಾಡುವವರೇ ಇಲ್ಲ. 1 ಕೆಜಿ ಚೆಂಡು ಹೂ 1 ರು. 2 ರೂಪಾಯಿ ಹೀಗಾಗಿ ರೈತರು ಮಾರಾಟಕ್ಕೆ ತಂದಿದ್ದ ಹೂವನ್ನ ಮಾರುಕಟ್ಟೆಯಲ್ಲೆ ಎಲ್ಲಂದರಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಚೆಂಡು ಹೂ ಕೇಳೋರಿಲ್ಲ.

ವರಮಹಾಲಕ್ಷ್ಮೀ ಮತ್ತು ಗೌರಿ-ಗಣೇಶ ಹಬ್ಬದ ಸಮಯದಲ್ಲಿ ಸೇವಂತಿಗೆ ಹೂ 300 ರಿಂದ 600 ರುಪಾಯಿಗೂ ಮಾರಾಟವಾಗಿದೆ. ಆದರೆ ಈಗ 5 ರೂಪಾಯಿ 10 ರೂಪಾಯಿಗೆ ಬೆಲೆ ಇಳಿದಿದೆ. ಇನ್ನೂ ಮಳೆಯಿಂದ ನೆನೆದು ಒದ್ದೆಯಾದ ಹೂಗಳನ್ನ ಖರೀದಿ ಮಾಡುವವರೇ ಇಲ್ಲ. ಹೀಗಾಗಿ ಸೇವಂತಿಗೆ ಹೂಗಳನ್ನ ಸಹ ರೈತರು ಎಲ್ಲೆಂದರಲ್ಲಿ ಬಿಸಾಡಿಹೋಗುವಂತಾಗಿದೆ.ಮತ್ತೊಂದೆಡೆ 150 ರುಪಾಯಿಯಿಂದ 250 ರು.ಗೆ ಮಾರಾಟವಾಗುತ್ತಿದ್ದ ಗುಲಾಬಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು 10 ರಿಂದ 20 ರು.ಗೆ ಮಾರಾಟವಾಗುತ್ತಿದೆ.

ಪಿತೃ ಪಕ್ಷ ವಾದ ಕಾರಣ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಮತ್ತು ತಮಿಳುನಾಡಿನಲ್ಲಿ ಈಗ ಮದುವೆ ಸೇರಿದಂತೆ ಯಾವುದೇ ಶುಭ ಕಾರ್ಯಗಳು ನಡೆಯುತ್ತಿಲ್ಲ. ಇದರಿಂದ ಆಂಧ್ರಪ್ರದೇಶ,ತೆಲಂಗಾಣ ಮತ್ತು ತಮಿಳುನಾಡಿನಿಂದ ವರ್ತಕರು ಹೂ ಕೊಳ್ಳಲು ಬರುತ್ತಿಲ್ಲಾ. ಇನ್ನೂ ಮಳೆಯಿಲ್ಲದೆ ಓಣ ಹವೆ ಇದ್ದ ಚಿಕ್ಕಬಳ್ಳಾಪುರದಲ್ಲಿ ಈಗ ಧಿಡೀರ್ ಮಳೆ ಬಂದ ಕಾರಣ ಹೂಗಳ ಇಳುವರಿಯಲ್ಲಿ ಹೆಚ್ಚಳವಾಗಿ ಹೂ ಬೆಲೆ ಕುಸಿದಿದೆ ಎನ್ನತ್ತಾರೆ ವರ್ತಕರು.

ಹೂ ಮಾರಾಟ ಮಾಡಲು ಮಾರುಕಟ್ಟೆಗೆ ಹೂ ತಂದ ರೈತರು ಹೂ ಬೆಲೆ ಕುಸಿತದಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹೂ ಬಿಸಾಡಿ ಬರಿಗೈಯಲ್ಲೇ ಮನೆಗೆ ಹೋಗುವಂತಾಗಿದೆ.

ನದಿ ನಾಲಾಗಳಿಲ್ಲದ ಬರಡು ಜಿಲ್ಲೆ ನಮ್ಮದು. ನೀರಿಗಾಗಿ ಹೆಂಡತಿ ಮಕ್ಕಳ ಮೈಮೇಲಿನ ಒಡವೆಗಳನ್ನು ಮಾರಿ, ಸಾಲ -ಸೋಲ ಮಾಡಿ ಬೋರ್ ವೆಲ್ ಹಾಕಿಸಿ, ಸಮೃದ್ದ ಬೆಳೆ ಬೆಳೆದರೂ ಮಾರುಕಟ್ಟೆಯಲ್ಲಿ ಕೊಳ್ಳುವರಿಲ್ಲಾ. 40 ಕೆಜಿ ಹೂವಿನ ಬ್ಯಾಗ್ ಮಾರಿದರೂ ರು. 200 ರಿಂದ 400 ಬರುತ್ತದೆ. ಹೂ ಕೀಳುವ ಕೂಲಿ ಸಹಾ ಬರುವುದಿಲ್ಲಾ. ಈಗಲಾದರೂ ಸರ್ಕಾರ ನಮ್ಮ ನೆರವಿಗೆ ಬರಬೇಕಿದೆ ಎಂದು ಅರೂರಿನ ಹೂ ಬೆಳೆಗಾರ ನಾರಾಯಣಸ್ವಾಮಿ ಆಗ್ರಹಿಸಿದರು.

ಸಿಕೆಬಿ-1 ಹೂ ಮಾರಾಟ ಮಾಡಲು ಮಾರುಕಟ್ಟೆಗೆ ಹೂ ತಂದ ರೈತರು ಹೂ ಕೇಳೋರಿಲ್ಲದೆ, ಖರೀದಿ ಮಾಡೋವರಿಲ್ಲದೆ ಎಲ್ಲಂದರಲ್ಲಿ ಬಿಸಾಡಿ ಹೋಗಿದ್ದಾರೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶ್ವ ಮೆಚ್ಚಿದ ಹೆಮ್ಮೆಯ ಭಾರತೀಯ ಕ್ಯಾಪ್ಟನ್ ಸ್ಮಿತ್: ಬಸವ ಮಹಾಲಿಂಗ ಶ್ರೀ
ಯುವ ಆಲೋಚನೆಗಳೇ ಸಮಾಜದ ಬಲ: ಡಾ. ಚಂದ್ರಶೇಖರ್‌