ದಾವಣಗೆರೆ: ರಾಜಕೀಯ ವ್ಯವಸ್ಥೆಯಲ್ಲಿ ಕೆಲವೊಂದಿಷ್ಟು ಅಭಿಮಾನಿಗಳು, ಜನರು ಬೆಂಕಿ ಹಚ್ಚಿಕೊಳ್ಳುವುದು, ಪೆಟ್ರೋಲ್ ಸುರಿಯುವುದು ಕಾಮನ್. ತಮ್ಮ ನಾಯಕರ ಮೇಲಿನ ಅಭಿಮಾನದಲ್ಲಿ ಅಭಿಮಾನಿಗಳು ಮಾತನಾಡಿರುತ್ತಾರೆ. ಅಂತಹ ಮಾತುಗಳಲ್ಲಿ ತಪ್ಪೇನಿಲ್ಲ. ತಾವೆಲ್ಲಾ ಹಿಂದೆ ಇತಿಹಾಸವನ್ನೂ ನೋಡಿದ್ದೀರಿ ಎಂದು ಮುಖ್ಯಮಂತ್ರಿ ಬದಲಾವಣೆಯಾದರೆ ರಕ್ತಕ್ರಾಂತಿ ಆಗುತ್ತದೆಂದು ಸಿದ್ದರಾಮಯ್ಯ ಅಭಿಮಾನಿಗಳ ಹೇಳಿಕೆ ಕುರಿತಂತೆ ಡಿಸಿಎಂ ಡಿ.ಕೆ. ಶಿವಕುಮಾರ ಆಪ್ತ, ಚನ್ನಗಿರಿ ಕ್ಷೇತ್ರ ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದರು.
ಮಾಜಿ ಸಿಎಂ ದಿವಂಗತ ಡಿ.ದೇವರಾಜ ಅರಸು ಅವರು ದಾಖಲೆ ಬರೆದ ವರ್ಷದಲ್ಲೇ ನಾನು ಹುಟ್ಟಿದ್ದು. ಅಂತಹ ದಾಖಲೆಯನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ. ಸಿಎಂ ಹೊಸ ದಾಖಲೆ ರಚಿಸಿದ್ದಕ್ಕೆ ಶುಭ ಕೋರುತ್ತೇನೆ. ಪೂರ್ಣಾವಧಿ ಮುಖ್ಯಮಂತ್ರಿ ಆಗುವ ವಿಶ್ವಾಸವನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. ಅವರೇ ಮುಖ್ಯಮಂತ್ರಿಯಾಗಲಿ, ತಪ್ಪೇನಿದೆ? ನಮ್ಮ ಹೈಕಮಾಂಡ್ ಏನು ಹೇಳುತ್ತದೋ ಅದಕ್ಕೆ ನಾವೆಲ್ಲರೂ ಬದ್ಧ ಎಂದರು.
- - -(ಟಾಪ್ ಕೋಟ್) ನಾನು ಸಂಕ್ರಾಂತಿ ಬಳಿಕವೇ ಮಾತನಾಡುತ್ತೇನೆ. ಜನವರಿ ತಿಂಗಳಲ್ಲೇ ಮಾತನಾಡುತ್ತೇನೆ. ಮತ್ತೆ ನೀವು ಜ.15ಕ್ಕೆ ಬರಬೇಡಿ. ಜ.15ರ ನಂತರವೇ ನಿಮ್ಮ ಪ್ರಶ್ನೆಗೆ ಉತ್ತರ ಕೊಡುತ್ತೇನೆ. ಇವತ್ತು ಅಂಗಾರಕ ಸಂಕಷ್ಟಿ. ರಾಜ್ಯದ ಜನರಿಗೆ ಒಳ್ಳೆಯದಾಗಲಿ, ದೇವರಲ್ಲಿ ಶುಭ ಸುದ್ದಿಗೂ ಪ್ರಾರ್ಥನೆ ಮಾಡಿ, ಉಪವಾಸ ಮಾಡಿದ್ದೇನೆ. ಶೀಘ್ರವೇ ಶುಭ ಸುದ್ದಿ ಸಿಗುವ ವಿಶ್ವಾಸವಿದೆ.
- ಬಸವರಾಜ ವಿ. ಶಿವಗಂಗಾ, ಶಾಸಕ, ಚನ್ನಗಿರಿ ಕ್ಷೇತ್ರ.- - -
-6ಕೆಡಿವಿಜಿ15, 16: ಬಸವರಾಜ ಶಿವಗಂಗಾ