ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಮತಗಟ್ಟೆಯ ವಿವರ, ಅಭ್ಯರ್ಥಿಗಳ ವಿವರ, ಚುನಾವಣಾ ವೇಳಾಪಟ್ಟಿ ಸೇರಿ ಹಲವು ಮಾಹಿತಿಗಳನ್ನು ಕುಳಿತಲ್ಲೇ ಮತದಾರರು ಬೆರಳ ತುದಿಯಲ್ಲಿ ಮೊಬೈಲ್ ಅಪ್ಲಿಕೇಷನ್ ಗಳ ಮೂಲಕ ಪಡೆಯಬಹುದಾಗಿದೆ.
ಗೂಗಲ್ ಪ್ಲೇಸ್ಟೋರ್‌ನಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಲಭ್ಯವಿದ್ದು, ಮತದಾರರು ತಮ್ಮ ಕ್ಷೇತ್ರ, ಮತದಾನದ ಬೂತ್, ತಲುಪುವ ಬಗ್ಗೆ, ದೂರ ಇತ್ಯಾದಿ ಎಲ್ಲ ರೀತಿಯ ಮಾಹಿತಿ ಪಡೆದುಕೊಳ್ಳುವಂತೆ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ ಎನ್ನುತ್ತಾರೆ ಚುನಾವಣಾ ಶಾಖೆ ಅಧಿಕಾರಿಗಳು.cVIGIL ಆ್ಯಪ್ :
cVIGIL ಆ್ಯಪ್‌ನ ಸಹಾಯದಿಂದ ಮತದಾರರು ಮತಗಟ್ಟೆಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಮತ್ತು ಅಕ್ರಮ ನಡೆಯುತ್ತಿದ್ದರೆ ಅದನ್ನು ಸುಲಭದಲ್ಲಿ ದೂರು ನೀಡಬಹುದು. ಅಭ್ಯರ್ಥಿ ಯಾರನ್ನಾದರೂ ಆಮಿಷ ಒಡ್ಡುತ್ತಿದ್ದರೆ ಇದನ್ನು ಸಹ ಬಹಿರಂಗ ಪಡಿಸಬಹುದು. ಫೋಟೋ, ವಿಡಿಯೋ, ಆಡಿಯೋ ಅಪ್‌ಲೋಡ್ ಮಾಡುವ ಮತ್ತು ತಕ್ಷಣ ದೂರು ದಾಖಲಿಸುವ ಫೀಚರ್ಸ್ ಇದರಲ್ಲಿದೆ. ಇದು ದೂರು ಸ್ವೀಕರಿಸಿದ 100 ನಿಮಿಷಗಳಲ್ಲಿ ಪ್ರತಿಕ್ರಿಯೆಯನ್ನು ನೀಡುತ್ತದೆ.(ಫೋಟೋ 19ಕೆಆರ್ ಎಂಎನ್ 3.ಜೆಪಿಜಿ)KYC ಆಪ್ :
(ಫೋಟೋ 19ಕೆಆರ್ ಎಂಎನ್ 4.ಜೆಪಿಜಿ)
ವಿಕಲಚೇತನ ಮತದಾರರು ಈಗ ಸುಲಭವಾಗಿ ಮತ ಚಲಾಯಿಸಬಹುದು. ಇದಕ್ಕಾಗಿ, ಈ ಅಪ್ಲಿಕೇಶನ್ ಅವರಿಗೆ ಸಹಾಯ ಮಾಡುತ್ತದೆ. ಇದರ ಮೂಲಕ, ವಿಕಲಾಂಗ ವ್ಯಕ್ತಿಗಳು ನೋಂದಾಯಿಸಿಕೊಳ್ಳಬಹುದು ಮತ್ತು ತಿದ್ದುಪಡಿಗಳನ್ನು ಮಾಡಬಹುದು. ಇದಲ್ಲದೇ ಈ ಆ್ಯಪ್ ಮೂಲಕ ಅಂಗವಿಕಲರು ತಮ್ಮ ಮನೆಯಲ್ಲೇ ಕುಳಿತು ಮತದಾನ ಮಾಡುವ ಸೌಲಭ್ಯವನ್ನು ಹೊಂದಿದ್ದಾರೆ.
SUVIDHA CANDIDATE ಆಪ್ :
Voter Helpline ಆಪ್ :
VOTER ಅಪ್ಲಿಕೇಶನ್ :
(ಫೋಟೋ 19ಕೆಆರ್ ಎಂಎನ್ 8.ಜೆಪಿಜಿ)
Voter Turnout ಆಪ್ :ಈ ಆ್ಯಪ್ ಮೂಲಕ ಸಾಮಾನ್ಯ ಜನರು ಮತದಾನದ ದಿನದಂದು ಮತದಾನದ ಶೇಕಡಾವಾರು ಪ್ರಮಾಣವನ್ನು ಪರಿಶೀಲಿಸಬಹುದು. ಇದರಿಂದ ಮತದಾನದ ಮಾದರಿ ತಿಳಿಯಲಿದೆ.
(ಫೋಟೋ 19ಕೆಆರ್ ಎಂಎನ್ 9.ಜೆಪಿಜಿ)ಬಾಕ್ಸ್..................ಪ್ರಮುಖ ಅಂಶಗಳು
-ಆಪ್ ಮೂಲಕ ಇಡೀ ರಾಜ್ಯದ ಭೌಗೋಳಿಕ ಮಾಹಿತಿ ವ್ಯವಸ್ಥೆ ನೋಡಲು ಸಾಧ್ಯವಿದೆ-ಮತ ಕೇಂದ್ರಗಳು ಮತ್ತು ಅವುಗಳ ಮ್ಯಾಪ್ (ನಕಾಶೆ) ನೋಡಬಹುದು
-ಎಪಿಕ್ ಕಾರ್ಡ್ ನಲ್ಲಿರುವ ಮಾಹಿತಿಗಳನ್ನು ನಮೂದಿಸಿ ನಿಮ್ಮ ಮತಗಟ್ಟೆಯನ್ನು ತಿಳಿದುಕೊಳ್ಳುವುದರ ಜೊತೆಗೆ ತಲುಪುವ ಮಾರ್ಗವನ್ನು ತಿಳಿಸಿಕೊಡುತ್ತದೆ.-ಮತಗಟ್ಟೆಯಲ್ಲಿರುವ ದಟ್ಟಣೆ ಮತ್ತು ಸರದಿ ಸಾಲಿನ ಮಾಹಿತಿಗಳನ್ನು ಪಡೆದುಕೊಳ್ಳಬಹುದು.
-ಬೂತ್ ಮಟ್ಟದ ಅಧಿಕಾರಿಗಳಿಂದ ಹಿಡಿದು ವಿವಿಧ ಶ್ರೇಣಿಯ ಅಧಿಕಾರಿಗಳ ಮಾಹಿತಿ ಲಭ್ಯ.-ಹಿರಿಯ ನಾಗರೀಕರು ಮತ್ತು ವಿಶೇಷಚೇತನರಿಗಾಗಿ ವ್ಹೀಲ್ ಚೇರ್ ಅನ್ನು ಕಾಯ್ದಿರಿಸಲು ಅವಕಾಶ
-ನಿಮ್ಮ ಹತ್ತಿರದ ಪೊಲೀಸ್ ಠಾಣೆ ಮತ್ತು ಆರೋಗ್ಯ ಕೇಂದ್ರದ ಮಾಹಿತಿ-ನಿಮ್ಮ ಮತ ಕ್ಷೇತ್ರದಲ್ಲಿ ನಡೆಯುವ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಮಾಹಿತಿ
ಕೋಟ್ .........ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸಲು ಸಾರ್ವಜನಿಕರ ಸಹಕಾರವೂ ಅಗತ್ಯ. ಚುನಾವಣಾ ಅಕ್ರಮಗಳನ್ನು ನಿಯಂತ್ರಿಸಿ, ನೈತಿಕ ಚುನಾವಣೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹೊರತಂದಿರುವ ಸಿ-ವಿಜಿಲ್, ಸುವಿಧಾ ಆ್ಯಪ್ ಸೇರಿ ಎಲ್ಲ ಚುನಾವಣಾ ಆಪ್ ಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
- ಅವಿನಾಶ್, ಚುನಾಣಾಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ.