- ರಾಮಕೃಷ್ಣ ಹೆಗಡೆ ನಗರ ಸಂತ್ರಸ್ತರ ಬದುಕು ಇನ್ನೂ ದುಸ್ತರ । ಡಿಸಿ ಸೇರಿ ಯಾವ ಅಧಿಕಾರಿಗಳ ಸುಳಿವೇ ಇಲ್ಲ! - ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಿದ್ದ ಜಿಲ್ಲಾಡಳಿತ । ರಾತ್ರೋರಾತ್ರಿ ಪುನಃ ಹೆಗಡೆ ನಗರಕ್ಕೆ ಮರಳಿದ ಸಂತ್ರಸ್ತರು - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ದಾವಣಗೆರೆ ನಗರ, ಜಿಲ್ಲಾದ್ಯಂತ ವಿವಿಧೆಡೆ ಗುರುವಾರ ಸಂಜೆ 4 ಗಂಟೆಗೆ ಶುರುವಾದ ಮಳೆ ಬಿಟ್ಟೂಬಿಡದೇ ಸುರಿದಿದೆ. ಆಗಾಗ ಮಿಂಚು, ಗುಡುಗು, ಸಿಡಿಲಿನ ಆರ್ಭಟದ ಮಧ್ಯೆ ಜೋರು ಗಾಳಿ ಎದ್ದಿದೆ. ಹೀಗಾಗಿ, ರಾಮಕೃಷ್ಣ ಹೆಗಡೆ ನಗರದ ಸುಮಾರು 500 ಕುಟುಂಬಗಳ ನಿವಾಸಿಗಳು ತಮ್ಮನ್ನು ಸ್ಥಳಾಂತರಿಸಿದ್ದ ಸ್ಥಳದಲ್ಲಿಯೇ ರಾತ್ರಿ ಇಡೀ ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ವಿದ್ಯುತ್ ಕಂಬಗಳು ಧರೆಗುರುಳಿ, ಶೆಡ್‌ಗಳ ಶೀಟುಗಳು ಕಿತ್ತು ಹೋಗಿವೆ. ಇದರಿಂದ ದಿಕ್ಕು ತೋಚದಂತಾಗಿ, ಹಲವಾರು ಕುಟುಂಬಗಳು ರಾತ್ರೋರಾತ್ರಿ ರಾಮಕೃಷ್ಣ ಹೆಗಡೆ ನಗರಕ್ಕೆ ಮರಳಿವೆ.
ಏಳೆಂಟು ತಿಂಗಳ ಹಿಂದಷ್ಟೇ ಸ್ಥಳಾಂತರ:ಐದು ತಿಂಗಳ ಹಿಂದೆ ಜಿಲ್ಲಾಡಳಿತ, ಮಹಾನಗರ ಪಾಲಿಕೆಯಿಂದ ಪೊಲೀಸ್ ಬಂದೋಬಸ್ತ್‌ನಲ್ಲಿ ಇಲ್ಲಿನ ವರ್ತುಲ ರಸ್ತೆಯ ರಾಮಕೃಷ್ಣ ಹೆಗಡೆ ನಗರದ ನಿವಾಸಿಗಳನ್ನು ಜಿಲ್ಲಾ ಕೇಂದ್ರದಿಂದ ಏಳೆಂಟು ಕಿಮೀ ದೂರದ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಮನೆ ಕಟ್ಟಿಸಿ ಕೊಡುವವರೆಗೆ ತಾತ್ಕಾಲಿಕವಾಗಿ ತಗಡಿನ ಶೆಡ್‌ಗಳನ್ನು ನಿರ್ಮಿಸಿ, ಸಂತ್ರಸ್ತರಿಗೆ ಉಳಿಯಲು ವ್ಯವಸ್ಥೆ ಮಾಡಲಾಗಿತ್ತು. ಬೇಸಿಗೆಯಲ್ಲಿ ಉರಿಬಿಸಿಲಿನಲ್ಲೂ ಜೀವನ ನಡೆಸಿದ್ದ ಸಂತ್ರಸ್ತರು ಗುರುವಾರ ಸಂಜೆಯಿಂದ ಶುರುವಾದ ಮಳೆಯಿಂದಾಗಿ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಹ ಸ್ಥಿತಿಗೆ ತಲುಪಿದ್ದಾಗಿ ಅಳಲು ತೋಡಿಕೊಂಡಿದ್ದಾರೆ.
ನೆರಳು ಬೀಡಿ ಕಾರ್ಮಿಕರ ಯೂನಿಯನ್ ಕಾರ್ಯದರ್ಶಿ ಜಬೀನಾ ಖಾನಂ ಮಾತನಾಡಿ, 2-3 ದಿನಗಳಿಂದ ಭಾರೀ ಸಿಡಿಲು, ಗುಡುಗು, ಗಾಳಿ ಸಮೇತ ಮಳೆಯಾಗುತ್ತಿದೆ. ತಾತ್ಕಾಲಿಕವಾಗಿ ನಮಗೆ ನೀಡಿದ್ದ ತಾಡಾಪಾಲು ಹರಿದುಹೋಗಿವೆ. ತಗಡುಗಳೇ ಗಾಳಿ ಹೊಡೆತಕ್ಕೆ ಕಿತ್ತು ಹೋಗಿವೆ. ಆಕಸ್ಮಾತ್ ಹೀಗೆ ನಾವು ಇರುವಂತಹ ಪ್ರದೇಶದಲ್ಲಿ ಏನಾದರೂ ಅನಾಹುತ, ಅಪಾಯ, ಸಾವು-ನೋವು ಸಂಭವಿಸಿದರೆ ಯಾರು ಹೊಣೆ? ರಾಮಕೃಷ್ಣ ಹೆಗಡೆ ನಗರ ನಿವಾಸಿಗಳನ್ನು ಇಲ್ಲಿಗೆ ಬಲವಂತವಾಗಿ ಸ್ಥಳಾಂತರಿಸಿದ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಪಾಲಿಕೆ ಆಯುಕ್ತರು ಸೇರಿದಂತೆ ಇಲಾಖೆಗಳ ಅಧಿಕಾರಿಗಳು ಒಂದು ದಿನ ಬಂದು, ರಾಮಕೃಷ್ಣ ಹೆಗಡೆ ನಗರ ಸಂತ್ರಸ್ತರಿಗೆ ಕಳಿಸಿರುವ ನಿರ್ಜನ ಪ್ರದೇಶದಲ್ಲಿ ಜೀವನ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾನೂನು ಹೋರಾಟದ ಎಚ್ಚರಿಕೆ:
ಈ ಸಂದರ್ಭ ಸಂತ್ರಸ್ತ ಕುಟುಂಬಸ್ಥರು ಇದ್ದರು.
- - - ಕೋಟ್ ದಾವಣಗೆರೆಯ ರಿಂಗ್ ರಸ್ತೆಯ ರಾಮಕೃಷ್ಣ ಹೆಗಡೆ ನಗರದ ಸಂತ್ರಸ್ತರನ್ನು ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಿ, ಕೈ ತೊಳೆದುಕೊಂಡ ಅಧಿಕಾರಿಗಳು ಸೌಜನ್ಯಕ್ಕೂ ಅಲ್ಲಿಗೆ ಭೇಟಿ ನೀಡಿ, ಸಂತ್ರಸ್ತರ ಅಹವಾಲು ಆಲಿಸಿಲ್ಲ. ಏಪ್ರಿಲ್, ಮೇ ತಿಂಗಳ ಬಿಸಿಲಿಗೆ ಅಲ್ಲಿ ಜನ ತತ್ತರಿಸಿದ್ದಾರೆ. ಈಗ ಮಳೆ ಆಗುತ್ತಿದ್ದು, ಸಮಸ್ಯೆ ಹೇಳತೀರದು. ನೀತಿ ಸಂಹಿತೆ ಹೆಸರಿನಲ್ಲಿ ನೆಹ ಹೇಳುವ ಅಧಿಕಾರಿಗಳು ಮೊದಲು ಜನರ ಸಮಸ್ಯೆಗೆ ಸ್ಪಂದಿಸುವುದನ್ನು ಕಲಿಯಲಿ
ನೆರಳು ಬೀಡಿ ಕಾರ್ಮಿಕರ ಯೂನಿಯನ್
* ಸಂತ್ರಸ್ತರ ಹಕ್ಕೊತ್ತಾಯ
- ದಾವಣಗೆರೆ ಹೆಗಡೆ ನಗರದ 500 ಕುಟುಂಬಗಳ ಸಂತ್ರಸ್ತರಿಗೆ ತಕ್ಷಣವೇ ಮನೆ ಕಟ್ಟಿಕೊಡಲಿ- ರಸ್ತೆ, ಚರಂಡಿ, ಒಳಚರಂಡಿ, ನೀರು, ನ್ಯಾಯಬೆಲೆ ಅಂಗಡಿ, ಆಸ್ಪತ್ರೆಗಳ ವ್ಯವಸ್ಥೆ ಕಲ್ಪಿಸಬೇಕು
- ಸಂತ್ರಸ್ತರಿಗೆ ತಕ್ಷಣವೇ ಜಾಗ, ಮನೆಗಳ ಹಕ್ಕುಪತ್ರವನ್ನು ಒದಗಿಸಬೇಕು- ಮನೆ ಕೊಡುವವರೆಗೂ ಬಾಡಿಗೆ ಮನೆ ಮಾಡಿ, ಸಂತ್ರಸ್ತರಿಗೆ ಒದಗಿಸಿ, ಪಾಲಿಕೆಯಿಂದಲೇ ಬಾಡಿಗೆಯ ಹಣ ಭರಿಸಬೇಕು
- ಎಷ್ಟು ದಿನಗಳಲ್ಲಿ ಸಂತ್ರಸ್ತರಿಗೆ ಮನೆ ಕಟ್ಟಿಕೊಡುತ್ತೇವೆಂಬ ಬಗ್ಗೆ ಲಿಖಿತ ರೂಪದಲ್ಲಿ ಪಾಲಿಕೆಯಿಂದ ನೀಡಬೇಕು- ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ ಸಮ್ಮುಖ ಸಂತ್ರಸ್ತರ ಕುಂದುಕೊರತೆ ಸಭೆ ಆಯೋಜಿಸಬೇಕು
- - - -17ಕೆಡಿವಿಜಿ11, 12, 13, 14, 15, 16:ದಾವಣಗೆರೆ ವರ್ತುಲ ರಸ್ತೆ ರಾಮಕೃಷ್ಣ ಹೆಗಡೆ ನಗರದಿಂದ ಹೊರಭಾಗಕ್ಕೆ ಸ್ಥಳಾಂತರಗೊಂಡಿದ್ದ ಜನರು ತಾತ್ಕಾಲಿಕ ಶೆಡ್ಡುಗಳು ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಕಿತ್ತುಹೋಗಿದ್ದು, ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಅತಂತ್ರರಾಗಿರುವುದು. -17ಕೆಡಿವಿಜಿ17:
ದಾವಣಗೆರೆ ವರ್ತುಲ ರಸ್ತೆ ರಾಮಕೃಷ್ಣ ಹೆಗಡೆ ನಗರಕ್ಕೆ ಮರಳಿ ಬಂದು, ಪಾಲಿಕೆ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಂತ್ರಸ್ತ ಕುಟುಂಬಗಳು.