ರೈಲಿನಲ್ಲಿ ಹಲ್ಲೆಕೋರನ ಪತ್ತೆಗೆ ತಂಡಗಳ ರಚನೆ

KannadaprabhaNewsNetwork | Published : May 18, 2024 12:33 AM

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿಖಾನಾಪುರ ತಾಲೂಕಿನ ಲೋಂಡಾ ಬಳಿ ಚಲಿಸುತ್ತಿದ್ದ ಪುದುಚೇರಿ-ದಾದರ್ ಎಕ್ಸಪ್ರೆಸ್‌ ರೈಲಿನಲ್ಲಿ ಅನಾಮಿಕ ಮುಸುಕುದಾರಿ ವ್ಯಕ್ತಿಯಿಂದ 5 ಜನರಿಗೆ ಚಾಕು ಇರಿತ ಮಾಡಿದ್ದಾನೆ. ಇದರಲ್ಲಿ ಓರ್ವ ಮೃತಪಟ್ಟಿದ್ದು, ಮೃತನ ಕುಟುಂಬಕ್ಕೆ ರೈಲ್ವೆ ಇಲಾಖೆಯಿಂದ ಪರಿಹಾರ ನೀಡಲಾಗುವುದು ಎಂದು ರೈಲ್ವೆ ವಿಭಾಗದ ಡಿಐಜಿ ಶರಣಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿಖಾನಾಪುರ ತಾಲೂಕಿನ ಲೋಂಡಾ ಬಳಿ ಚಲಿಸುತ್ತಿದ್ದ ಪುದುಚೇರಿ-ದಾದರ್ ಎಕ್ಸಪ್ರೆಸ್‌ ರೈಲಿನಲ್ಲಿ ಅನಾಮಿಕ ಮುಸುಕುದಾರಿ ವ್ಯಕ್ತಿಯಿಂದ 5 ಜನರಿಗೆ ಚಾಕು ಇರಿತ ಮಾಡಿದ್ದಾನೆ. ಇದರಲ್ಲಿ ಓರ್ವ ಮೃತಪಟ್ಟಿದ್ದು, ಮೃತನ ಕುಟುಂಬಕ್ಕೆ ರೈಲ್ವೆ ಇಲಾಖೆಯಿಂದ ಪರಿಹಾರ ನೀಡಲಾಗುವುದು ಎಂದು ರೈಲ್ವೆ ವಿಭಾಗದ ಡಿಐಜಿ ಶರಣಪ್ಪ ಹೇಳಿದರು.

ನಗರದಲ್ಲಿರುವ ಬೆಳಗಾವಿ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಟಿಟಿ ಸೇರಿ ನಾಲ್ವರು ಗಾಯಾಳುಗಳ ಆರೋಗ್ಯ ವಿಚಾರಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲ್ವೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಐಪಿಸಿ 302,307,332,353 ರಡಿಯಲ್ಲಿ ಪ್ರಕರಣ ದಾಖಲಾಗಿದೆ. ಚಲಿಸುತ್ತಿದ್ದ ರೈಲಿನಲ್ಲಿ ಮುಸುಕುಧಾರಿ ಟಿಕೆಟ್‌ ವಿಚಾರಕ್ಕೆ ಟಿಸಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಆಗ ಅವರ ಸಹಾಯಕ್ಕೆ ಬಂದ ಕೋಚ್ ಹೆಲ್ಪಿಂಗ್ ಸ್ಟಾಪ್ ಮೇಲೆ ಹಲ್ಲೆಯಾಗಿದೆ‌. ಅದರಲ್ಲಿ ಓರ್ವ ಮೃತಪಟ್ಟಿದ್ದಾನೆ. ಈಗಾಗಲೇ ರೈಲ್ವೆ ಇಲಾಖೆಯೊಂದಿಗೆ ಮಾತನಾಡಲಾಗಿದೆ‌. ಮೃತ ದೇವರ್ಷಿ ವರ್ಮಾ ಕುಟುಂಬಕ್ಕೆ ರೈಲ್ವೆ ಇಲಾಖೆಯಿಂದ ಪರಿಹಾರ ನೀಡಲಾಗುತ್ತಿದೆ ಎಂದು ಭರವಸೆ ನೀಡಿದರು.ಹಲ್ಲೆ ಮಾಡಿದ ಆರೋಪಿ ಪತ್ತೆಗೆ ಆರ್‌ಪಿಎಫ್, ಜಿಆರ್‌ಪಿ ಮತ್ತು ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ಈಗಾಗಲೇ ರಚನೆ ಮಾಡಲಾಗಿದೆ. ಅವರು ತನಿಖೆ ಕೈಗೊಂಡಿದ್ದಾರೆ. ಜಿಆರ್‌ಪಿ ಪೊಲೀಸ್ ಸಿಬ್ಬಂದಿಗಳ ಸಂಖ್ಯೆ ಕಡಿಮೆ ಇದೆ. ಅದನ್ನು ಹೆಚ್ಚಿಸಲು ಕ್ರಮ ಕೈಗೊಳುತ್ತೇವೆ. ಆರೋಪಿಯು ಚಲಿಸುವ ಟ್ರೇನ್‌ನಲ್ಲಿ ಇಳಿದಿರುವ ಮಾಹಿತಿ ಇದೆ. ಆರ್‌ಪಿಎಫ್ ಪೊಲೀಸರು ಘಟನೆ ಆದಾಗ ಇರಲಿಲ್ಲ. ನಮ್ಮ ರಾಜ್ಯದಲ್ಲಿ ದಿನಕ್ಕೆ 1400 ಟ್ರೇನ್ ಓಡಾಡುತ್ತವೆ. ಆದರೆ ಸಿಬ್ಬಂದಿ ಇರುವುದು ಕೇವಲ 830 ಮಾತ್ರ, ಒಂದು ಟ್ರೇನ್‌ಗೆ ಒಬ್ಬ ಸಿಬ್ಬಂದಿಯನ್ನೂ ಹಾಕಲು ನಮಗೆ ಆಗದ ಪರಿಸ್ಥಿತಿ ಇದೆ. ಅಪರಾಧ ಹಾಗೂ ಸೂಕ್ಷ್ಮಪ್ರದೇಶಗಳ ಆಧಾರದ ಮೇಲೆ ಸಿಬ್ಬಂದಿಯನ್ನು ನಿಯೋಜನೆ ಮಾಡುತ್ತಿದ್ದೇವೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರೈಲ್ವೆ ವಿಭಾಗದ ಎಸ್ಪಿ ಸೌಮ್ಯಲತಾ ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

Share this article