ಪುತ್ರನ ವಿರುದ್ಧ ಸುಖಾಸುಮ್ಮನೆ ಆರೋಪ: ಸಂಸದ ದೇವೇಂದ್ರಪ್ಪ

KannadaprabhaNewsNetwork | Published : Nov 18, 2023 1:00 AM

ಸಾರಾಂಶ

ಕೊಳಾಳ್ ಗ್ರಾಮದ ಕಲ್ಲೇಶ್ ಎನ್ನುವನು ಆ ಯುವತಿಯನ್ನು ನನ್ನ ಪುತ್ರನಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಬಳಿಕ ಈ ರೀತಿ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಆಕೆ ಯಾರು ಎಂದು ನನಗೆ ಗೊತ್ತಿಲ್ಲ. ನಾನು ಬೆಂಗಳೂರಿನಿಂದ ಕರೆ ಮಾಡಿದ್ದು ಎಂದಿದ್ದಾರೆ. ಎಂಟು ದಿನಗಳ ಹಿಂದೆ ಆಕೆ ನನಗೆ ಕರೆ ಮಾಡಿದ್ದು, ಈಗ ಚುನಾವಣೆ ಹತ್ತಿರ ಬರುತ್ತಿದೆ. ಆದ್ದರಿಂದ ಈ ರೀತಿ ಕುಮ್ಮಕ್ಕು ಮಾಡಿದ್ದಾರೆ. ನನ್ನ ಘನತೆಗೆ ಕುಂದು ತರಲು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಹೊಸಪೇಟೆತಮ್ಮ ಪುತ್ರನ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಸತ್ಯಾಸತ್ಯತೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಿ. ಕಾನೂನಿನ ಮುಂದೆ ಎಲ್ಲರೂ ಒಂದೇ. ಚುನಾವಣೆ ನೆರಳು ಹಿಡಿದುಕೊಂಡು ಕೆಲವರು ಹೀಗೆ ಮಾಡುತ್ತಿದ್ದಾರೆ. ನನ್ನ ಮಕ್ಕಳು ಈ ರೀತಿ ಅನ್ಯಾಯ ಮಾಡಿಲ್ಲ ಎಂದು ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ತಿಳಿಸಿದರು.

ತಮ್ಮ ಪುತ್ರ ಯುವತಿಯೊಬ್ಬರಿಗೆ ಮದುವೆಯಾಗುವುದಾಗಿ ವಂಚಿಸಿದ್ದಾರೆ ಎಂಬ ಆರೋಪಕ್ಕೆ ಹರಪನಹಳ್ಳಿ ತಾಲೂಕಿನ ಅರಸಿಕೇರೆಯ ತಮ್ಮನಿವಾಸದಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಈಗ ಚುನಾವಣೆ ಸಮಯದಲ್ಲಿ ಸುಖಾಸುಮ್ಮನೆ ಆರೋಪ ಮಾಡಲಾಗಿದೆ. ಕುಮ್ಮಕ್ಕು ನೀಡಿದ್ದಾರೆ ಎಂದರು.ಸಾಮಾಜಿಕ ನ್ಯಾಯ ಸಮಿತಿ ಸಭೆಗೆ ದೆಹಲಿಗೆ ತೆರಳಿದ್ದೆ. ರೈಲಿನಲ್ಲಿ ಬರುವಾಗ ಆರೋಪ ಮಾಡಿರುವ ಯುವತಿ ನನಗೆ ಕರೆ ಮಾಡಿದ್ದರು. ನನ್ನ ಮಗನ ಬಗ್ಗೆ ಆಕೆ ಆರೋಪ ಮಾಡಿದರು. ಅನ್ಯಾಯ ಆಗಿದ್ದರೆ ಕಾನೂನು ಪ್ರಕಾರ ಮಾಡಿಕೊಳ್ಳಿ ಎಂದಿದ್ದೇನೆ. ಆರೋಪ ಕುರಿತು ಮಗನನ್ನು ಕೂಡ ಕೇಳಿದೆ. ಆತ ಆ ಯುವತಿಯು ಬ್ಲಾಕ್‌ಮೇಲ್ ಮಾಡುತ್ತಿದ್ದಾಳೆ ಅಂತ ಹೇಳಿದ್ದಾನೆ ಎಂದರು. ಆ ಯುವತಿ ನನ್ನ ಮಗನ ಒಡವೆಗಳನ್ನು ಕಸಿದುಕೊಂಡಿದ್ದಾಳೆ. ಆಕೆ ಬ್ಲಾಕ್‌ಮೇಲ್ ಮಾಡುತ್ತಿದ್ದಾಳೆ. ಬೆಂಗಳೂರಿನಲ್ಲಿ ಆ ರೀತಿಯ ಗ್ಯಾಂಗ್ ಇವೆ ಎಂದರು.

ಕೊಳಾಳ್ ಗ್ರಾಮದ ಕಲ್ಲೇಶ್ ಎನ್ನುವನು ಆ ಯುವತಿಯನ್ನು ನನ್ನ ಪುತ್ರನಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಬಳಿಕ ಈ ರೀತಿ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಆಕೆ ಯಾರು ಎಂದು ನನಗೆ ಗೊತ್ತಿಲ್ಲ. ನಾನು ಬೆಂಗಳೂರಿನಿಂದ ಕರೆ ಮಾಡಿದ್ದು ಎಂದಿದ್ದಾರೆ. ಎಂಟು ದಿನಗಳ ಹಿಂದೆ ಆಕೆ ನನಗೆ ಕರೆ ಮಾಡಿದ್ದು, ಈಗ ಚುನಾವಣೆ ಹತ್ತಿರ ಬರುತ್ತಿದೆ. ಆದ್ದರಿಂದ ಈ ರೀತಿ ಕುಮ್ಮಕ್ಕು ಮಾಡಿದ್ದಾರೆ. ನನ್ನ ಘನತೆಗೆ ಕುಂದು ತರಲು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Share this article