ಕನ್ನಡಪ್ರಭ ವಾರ್ತೆ, ತರೀಕೆರೆ
ತಿಮ್ಮನಬೈಲು ಗ್ರಾಮದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆದಿದ್ದು, ಗ್ರಾಮದ ಮುಖಂಡರು ಯುವಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ದಾನಿಗಳ ಮಾರ್ಗದರ್ಶನ ಹಾಗೂ ಆರ್ಥಿಕ ಸಹಕಾರಗಳೇ ಮುಖ್ಯವಾಗಿದ್ದು, ಶಿಕ್ಷಣ ಇಲಾಖೆ ಮುಂದಿನ ದಿನಗಳಲ್ಲಿ ನಡೆಯಲಿರುವ ಯಾವುದೇ ಕ್ರೀಡಾಕೂಟ, ಕಲೋತ್ಸವ, ಜಾನಪದ ಕಾರ್ಯಕ್ರಮಗಳು ಸೇರಿದಂತೆ ಶಾಲೆಗೆ ಸಂಬಂದ ಪಟ್ಟ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ಮಾಡಲಾಗುವುದು ಎಂದು ತಿಮ್ಮನ ಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶರಣ್ ರಾಜ್ ತಿಳಿಸಿದರು.ತಿಮ್ಮನಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಬಳ್ಳಾವರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಹಿಂದೆ ಶಾಲಾ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸಿದ್ದ ಎನ್.ಎಸ್. ನಾಗರಾಜಪ್ಪ, ಈಗ ಕಾರ್ಯ ನಿರ್ವಹಿಸುತ್ತಿರುವ ಎಲ್ ಆರ್ ಓಂಕಾರಪ್ಪ ಗ್ರಾಮದಲ್ಲಿನ ಬಡ ಕೂಲಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಪೂರಕ ಚಟುವಟಿಕೆ ನಡೆಸುವ ಮೂಲಕ ಜನ ಮೆಚ್ಚಿರುವ ಮಾದರಿ ಶಿಕ್ಷಕರಾಗಿದ್ದಾರೆ ಎಂದು ಹೇಳಿದರು. ತರೀಕೆರೆ ತಾಲೂಕು, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಂ.ಬಿ. ರಾಮಚಂದ್ರಪ್ಪ ಮಾತನಾಡಿ ತರೀಕೆರೆ ಶೈಕ್ಷಣಿಕ ವಿಭಾಗದಲ್ಲಿ ಈಗಾಗಲೇ ಕ್ಲಸ್ಟರ್ ಮಟ್ಟದಿಂದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳೆಲ್ಲವೂ ಮುಗಿದಿದ್ದು ಇದೇ 28 ರಂದು ಕಳಸದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಗೆ ವಿದ್ಯಾರ್ಥಿಗಳು ತಯಾರಿ ನಡೆಸುತ್ತಿದ್ದಾರೆ. ಆದರೆ ವಿವಿಧ ಕ್ರೀಡಾ ಕೂಟಗಳೂ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆದ ಕಾರಣ ಬೀರೂರು ಶೈಕ್ಷಣಿಕ ವಲಯದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ವಿಳಂಬವಾಗಿದ್ದು ಇಲ್ಲಿನ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲ್ಲುವ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದವರೆಗೂ ಹೋಗುವ ಅವಕಾಶ ಸಿಗಲಿ ಎಂದು ಶುಭ ಹಾರೈಸಿದರು.
ಬೀರೂರು ಶೈಕ್ಷಣಿಕ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಮಹೇಶ್ ಮಾತನಾಡಿ ಪ್ರತಿಭಾ ಕಾರಂಜಿ ಪ್ರಾರಂಭದ ದಿನಗಳಲ್ಲಿ ಅನೇಕ ಸ್ಪರ್ಧೆಗಳನ್ನು ನಡೆಸಲಾಗುತ್ತಿತ್ತಾದರೂ ನಂತರ ಬಂದ ಕೊರೋನಾ ಕಾರಣದಿಂದ ಕಿರಿಯ ಪ್ರಾಥಮಿಕ ಶಾಲಾ ವಿಭಾಗಕ್ಕೆ 12 ಹಾಗೂ ಹಿರಿಯ ಪ್ರಾಥಮಿಕ ಶಾಲಾ ವಿಭಾಗಕ್ಕೆ 15 ಸ್ಪರ್ಧೆಗಳನ್ನಷ್ಟೆ ನಡೆಸಲು ಅವಕಾಶ ನೀಡಿದ್ದು ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು. ಈ ಸಂಧರ್ಭದಲ್ಲಿ ತಿಮ್ಮನ ಬೈಲು ಶಾಲಾ ಮುಖ್ಯ ಶಿಕ್ಷಕರಾದ ಎಲ್.ಆರ್. ಓಂಕಾರಪ್ಪ, ಎಸ್.ಎಲ್. ನಾಗರಾಜಪ್ಪ, ಸಿ.ಆರ್.ಪಿ. ಗಂಗಾಧರನಾಯ್ಕ, ಶಿಕ್ಷಕರಾದ ಶೇಖರಪ್ಪ, ಅರುಣ್ ಕುಮಾರ್, ಸುರೇಶ್, ರಂಗನಾಥಪ್ಪ, ಶೇಖರಪ್ಪ, ಗಿರೀಶ್ ನಾಗರಾಜಪ್ಪ, ನಂದಿಬಟ್ಟಲು ಗ್ರಾಪಂ ಅಧ್ಯಕ್ಷ ಅಬುಬಕರ್ ಕುಟ್ಟಿ, ಮಾಜಿ ಅಧ್ಯಕ್ಷೆ ಸೌಮ್ಯ ಪುಷ್ವಾಧರ್, ಗ್ರಾಪಂ ಸದಸ್ಯೆ ವಾಣಿ ರಾಜೇಶ್, ಸುನೀಲ್ ಅಚ್ಚಣ್ಣ, ಮನೋಜ್ ರಘು, ಆಂಡ್ರೋಸ್, ಪುಷ್ವಾಧರ, ಶರಣ್ ರಾಜ್, ಬಳ್ಳಾವರ ಕ್ಲಸ್ಟರ್‌ನ 13 ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. :17ಕೆಟಿಆರ್.ಕೆ 01ಃತರೀಕೆರೆ ಸಮೀಪದ ತಿಮ್ಮನಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಬಳ್ಳಾವರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ನಂದಿಬಟ್ಟಲು ಗ್ರಾಪಂ ಅಧ್ಯಕ್ಷ ಅಬುಬಕರ್ ಕುಟ್ಟಿ, ಮಾಜಿ ಅಧ್ಯಕ್ಷೆ ಸೌಮ್ಯ, ಸದಸ್ಯೆ ವಾಣಿ ರಾಜೇಶ್, ಶಿಕ್ಷಕರಾದ ಎಲ್.ಆರ್.ಓಂಕಾರಪ್ಪ, ನಾಗರಾಜಪ್ಪ ಮುಂತಾದವರು ಜ್ಯೋತಿ ಬೆಳೆಗುವ ಮೂಲಕ ಉದ್ಘಾಟನೆ ನೆರವೇರಿಸಿದರು.