ಸಂಘದ ನಿರ್ದೇಶಕರೊಬ್ಬರು ರಸಗೊಬ್ಬರದ ಅಂಗಡಿ ಬಿಲ್‌ಬುಕ್‌ನ್ನು ಸಹಕಾರ ಸಂಘದ ನಿಯಮಗಳನ್ನು ಮೀರಿ ಎಂಟು ಹತ್ತು ದಿನ ಮನೆಯಲ್ಲಿಟ್ಟಿಕೊಂಡಿರುವ ವಿರುದ್ದ ಸಹಕಾರ ಸಂಘದ ಅಧಿಕಾರಿಗಳು ದೂರು ದಾಖಲಿಸಿ ಆಗತ್ಯ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸಹಕಾರ ಸಂಘದ ನಿಯಮಗಳನ್ನು ಕಡೆಗಣಿಸಿ ಕಾನೂನು ಉಲ್ಲಂಘಿಸಿದ ಟಿಎಪಿಸಿಎಂಎಸ್ ನಿರ್ದೇಶಕನನ್ನು ರಕ್ಷಣೆ ಮಾಡುವ ಉದ್ದೇಶದಿಂದ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಸರಿಯಲ್ಲಿ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಲಿಂಗರಾಜು ಹೇಳಿದರು.
ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಎಪಿಸಿಎಂಎಸ್‌ನಲ್ಲಿ ವ್ಯತ್ಯಾಸವಾಗಿರುವ ಹಣವನ್ನು ಅಧಿಕಾರಿಗಳಿಂದ ಮರುಪಾವತಿ ಮಾಡಿಸುವ ಜೊತೆಗೆ ಆಡಳಿತ ಮಂಡಳಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ವಷ್ಟಪಡಿಸಿದರು.
ಸಂಘದ ನಿರ್ದೇಶಕರೊಬ್ಬರು ರಸಗೊಬ್ಬರದ ಅಂಗಡಿ ಬಿಲ್‌ಬುಕ್‌ನ್ನು ಸಹಕಾರ ಸಂಘದ ನಿಯಮಗಳನ್ನು ಮೀರಿ ಎಂಟು ಹತ್ತು ದಿನ ಮನೆಯಲ್ಲಿಟ್ಟಿಕೊಂಡಿರುವ ವಿರುದ್ದ ಸಹಕಾರ ಸಂಘದ ಅಧಿಕಾರಿಗಳು ದೂರು ದಾಖಲಿಸಿ ಆಗತ್ಯ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾರೆ ಎಂದರು.
ಈ ಪ್ರಕರಣವನ್ನು ದಿಕ್ಕು ತಪ್ಪಿಪಿ ಆರೋಪ ಇರುವ ನಿರ್ದೇಶಕರನ್ನು ರಕ್ಷಣೆ ಮಾಡುವ ಉದ್ದೇಶದಿಂದ ವಿವಿಧ ವಿಷಯಗಳನ್ನಿಟ್ಟು ಟಿಎಪಿಸಿಎಂಎಸ್ ಮುಂದೆ ಪ್ರತಿಭಟನೆ ಮುಂದಾಗುತ್ತಿರುವುದು ಸರಿಯಲ್ಲ ಎಂದರು.
ನಿರ್ದೇಶಕ ಎಂ.ಮಾದಯ್ಯ(ಮಲ್ಲು) ಮಾತನಾಡಿ, ಪ್ರಸಕ್ತ ಸಾಲಿನ ಅಧಿಕಾರದ ಅವಧಿಯಲ್ಲಿ ಹೆಚ್ಚು ಸಾಲ ಮರುಪಾವತಿ ಮಾಡಲಾಗಿದೆ. 2014ರಲ್ಲಿ ಸದಸ್ಯರೇ ಅಲ್ಲದವರಿಗೆ ಸಾಲ ನೀಡಿದ್ದಾಗ ಇವರದೇ ಆಡಳಿತ ಮಂಡಳಿ ಅಧಿಕಾರದಲ್ಲಿತ್ತು. ಅದು ಭ್ರಚ್ಟಾಚಾರ ಅಲ್ಲವೇ ಎಂದು ಪ್ರಶ್ನಿಸಿದರು.
2008೮ರಲ್ಲೂ ಸಹ ದಾಸ್ತಾನು ಹಣ ದುರುಪಯೋಗ ಪಡಿಸಿಕೊಂಡಿದನ್ನು ಏಕೆ ಇವರ ಕೈಯಲ್ಲಿ ಆಗಲಿಲ್ಲ. ನಾವು ಅಧಿಕಾರಕ್ಕೆ ಬಂದ ನಂತರ ಅಕ್ರಮ ಕಂಡುಹಿಡಿದು ತಪ್ಪಿಸ್ಥರಿಗೆ ಶಿಕ್ಷೆ ನೀಡಿದ್ದೇವೆ ಎಂದರು.
ನಿರ್ದೇಶಕ ದಿಲೀಪ್ ಕುಮಾರ್(ವಿಶ್ವ) ಮಾತನಾಡಿ, ತಾಲೂಕಿನ ತಳವಾದಿ ಗ್ರಾಮದ ಡೇರಿಯ ಅಧ್ಯಕ್ಷ ಹಾಗೂ ಕಾರ್ಯದರ್ಶಿ ನಿವೇಶನ ಮುಂಗಡದ ರೂಪದಲ್ಲಿ 6 ತಿಂಗಳ ಹಿಂದೆ 5 ಲಕ್ಷ ರು. ತೆಗೆದುಕೊಂಡಿದ್ದಾರೆ. ಸಂಘಕ್ಕೆ ಮರುಪಾವತಿ ಮಾಡಿಲ್ಲ. ಜೊತೆಗೆ ನಿವೇಶನವನ್ನು ಖರೀದಿ ಮಾಡಿಲ್ಲ. ಮಾಜಿ ಶಾಸಕ ಅನ್ನದಾನಿ ಅವರು ಸಹಕಾರ ಸಂಘವನ್ನು ಉಳಿಸಲು ಡೈರಿ ಮುಂದೆ ಶಾಮಿಯಾನ ಹಾಕಿ ಯಾವಾಗ ಪ್ರತಿಭಟನೆ ಮಾಡುತ್ತಾರೆಂದು ಪ್ರಶ್ನಿಸಿದರು.
2018-19ರಲ್ಲಿ ಕಟ್ಟದ ನಿರ್ಮಾಣ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಅನೇಕ ಅವ್ಯವಸ್ಥೆಗಳು ನಿಮ್ಮಲ್ಲಿಯೇ ಇರುವಾಗ ಬೇರೆಯವರನ್ನು ಪ್ರಶ್ನೆ ಮಾಡುವ ಹಕ್ಕಿದ್ದೀಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿರ್ದೇಶಕ ಸತೀಶ್ ಮಾತನಾಡಿ, ಹಿಂದೆ ನಿಡಘಟ್ಟ ಸಂಘದಲ್ಲಿ ಭ್ರಷ್ಟಾಚಾರ ನಡೆದಿದ್ದಾಗ ಪಿ.ಎಂ.ನರೇಂದ್ರಸ್ವಾಮಿ ಅವರೇ ಅದನ್ನು ಕಂಡು ಹಿಡಿದು ಬಡ್ಡಿ ಸಮೇತ ಹಣವನ್ನು ವಾಪಸ್ ಕಟ್ಟುವಂತೆ ಮಾಡಿದ್ದಾರೆ. ಟಿಎಪಿಸಿಎಂಎಸ್ ನಲ್ಲೂ ದುರುಪಯೋಗ ಹಣವನ್ನು ಮತ್ತೆ ಸಂಸ್ಥೆಗೆ ವಾಪಸ್ ಬರುವಂತೆ ಕ್ರಮ ವಹಿಸಿದ್ದಾರೆ. ಕೇವಲ ಪ್ರಚಾರಕ್ಕಾಗಿ ಪ್ರತಿಭಟನೆ ಮಾಡುವುದು ಶೋಭೆಯಲ್ಲ ಎಂದರು. ಈ ವೇಳೆ ನಿರ್ದೇಶಕ ವಿ.ಎನ್.ಮನು, ಮುಖಂಡ ಟಿ.ಎಂ.ಪ್ರಕಾಶ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.