ಲಕ್ಷ್ಮೇಶ್ವರ: ಸಮೀಪದ ಪು.ಬಡ್ನಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರತಿಷ್ಠಾಪಿಸಿರುವ ಗಾಂಧೀಜಿ ಮೂರ್ತಿಯ ತಲೆಯ ಭಾಗ ಒಡೆದು, ಬಣ್ಣ ಮಾಸಿದ್ದರೂ ಮುಖ್ಯೋಪಾಧ್ಯಾಯರು ಮೂರ್ತಿ ದುರಸ್ತಿಗೆ ಮುಂದಾಗದೆ ರಾಷ್ಟ್ರಪಿತನಿಗೆ ಅವಮಾನ ಮಾಡಿದ್ದಾರೆ ಎಂದು ಗ್ರಾಮಸ್ಥರ ಆರೋಪಿಸಿದ್ದಾರೆ.
ಅ. 2ರಂದು ಗಾಂಧೀಜಿ ಜಯಂತಿ ಇದ್ದರೂ ಈ ಮೂರ್ತಿಯ ದುರಸ್ತಿ ಮಾಡಿಸುವ ಗೋಜಿಗೆ ಮುಖ್ಯೋಪಾಧ್ಯಾಯರು ಮುಂದಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೆಲ ತಿಂಗಳುಗಳ ಹಿಂದೆ ಗಾಂಧೀಜಿ ಮೂರ್ತಿಯ ತಲೆಯ ಭಾಗದ ಸಿಮೆಂಟ್ ಒಡೆದಿದೆ. ಅಲ್ಲದೇ ಮೂರ್ತಿಯ ಬಣ್ಣ ಮಾಸಿದೆ. ಮೂರ್ತಿಯ ದುರಸ್ತಿ ಯಾಕೆ ಮಾಡಿಸಿಲ್ಲ ಎನ್ನುವುದು ಗ್ರಾಮಸ್ಥರ ಪ್ರಶ್ನೆಯಾಗಿದೆ. ಶೀಘ್ರದಲ್ಲಿ ಮೂರ್ತಿ ದುರಸ್ತಿ ಮಾಡಿಸದೆ ಹೋದಲ್ಲಿ ಶಾಲೆಯ ಮುಂಭಾಗದಲ್ಲಿ ಸತ್ಯಾಗ್ರಹ ಮಾಡುವುದಾಗಿ ಗ್ರಾಪಂ ಸದಸ್ಯರಾದ ಮುತ್ತಣ್ಣ ಚೋಟಗಲ್ ಹಾಗೂ ಸಾರ್ವಜನಿಕರು ಎಚ್ಚರಿಸಿದ್ದಾರೆ.ಇಂದು ಭಕ್ತ ಹಿತಚಿಂತನಾ ಸಭೆನರಗುಂದ: ತಾಲೂಕಿನ ಶಿರೋಳ ಗ್ರಾಮದ ಯಚ್ಚರ ಸ್ವಾಮಿಗಳ ಜಾತ್ರಾ ಮಹೋತ್ಸವ ನಿಮಿತ್ತ ಅ. 4ರಂದು ಸಂಜೆ 6.30ಕ್ಕೆ ಗವಿಮಠದ ಆವರಣದಲ್ಲಿ ಭಕ್ತ ಹಿತಚಿಂತನಾ ಸಭೆ ಜರುಗಲಿದೆ.ಸಾನಿಧ್ಯ ಪುಣ್ಯಾರಣ್ಯ ಪತ್ರಿವನಮಠದ ಡಾ. ಸಿದ್ದವೀರ ಶಿವಯೋಗಿ ಶಿವಾಚಾರ್ಯ ಶ್ರೀಗಳು, ಸವದತ್ತಿಯ ಚಿದಂಬರೇಶ್ವರ ಸಂಸ್ಥಾನದ ಧರ್ಮಾಧಿಕಾರಿ ಪ್ರಸನ್ನ ಸುಂದರೇಶ ದೀಕ್ಷಿತರು, ಅಭಿನವ ಯಚ್ಚರ ಶ್ರೀಗಳು ವಹಿಸುವರು.ಮುಖ್ಯ ಅತಿಥಿಗಳಾಗಿ ಕೊಪ್ಪಳ ಜಿಲ್ಲೆಯ ಮೊರನಾಳದ ತೊಗಲಗೊಂಬೆ ಪ್ರದರ್ಶಕರು ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕತರಾದ ಭೀಮವ್ವ ಶಿಳ್ಳೆಕ್ಯಾತರ, ಜಾನಪದ ವಿದ್ವಾಂಸರಾದ ಡಾ. ಶಂಭು ಬಳಿಗಾರ, ಡಾ. ರವಿ ಗುಂಜಿಕರ, ಡಾ. ಬಸವರಾಜ ಬಳ್ಳಾರಿ, ವಿಜಯಕುಮಾರ ಪತ್ತಾರ, ಸರ್ವೇಶ ಆಚಾರ, ಮೋಹನ ನರಗುಂದ, ಚಂದ್ರಕಾಂತ ಸೋನಾರ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆಂದು ಶ್ರೀಮಠದ ಸದ್ಭಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.