ರಾಜ್ಯ ಬಜೆಟ್‌ನಲ್ಲಿ ಅನೆಕಾರಿಡಾರ್ ಸ್ಥಾಪನೆಗೆ 10 ಸಾವಿರ ಕೋಟಿ ಅನುದಾನ ಜೊತೆಗೆ ಕಾಡಾನೆಗಳ ದಾಳಿಯಿಂದ ಮೃತ ಪಟ್ಟ ರೈತ ಕುಟುಂಬಕ್ಕೆ 1 ಕೋಟಿ ಹಾಗೂ ಬೆಳೆ ನಾಶವಾದರೆ 10 ಲಕ್ಷ ಪರಿಹಾರ ಪ್ರತಿ ಎಕರೆ ನೀಡುವ ಕಾನೂನು ಬಜೆಟ್‌ನಲ್ಲಿ ಜಾರಿಯಾಗಬೇಕು.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಮಾ. 6ರಂದು ಮಂಡನೆಯಾಗಲಿರುವ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಅನೆಕಾರಿಡಾರ್ ಸ್ಥಾಪನೆಗೆ 10 ಸಾವಿರ ಕೋಟಿ ಅನುದಾನ ಮೀಸಲು ಇಟ್ಟು ಅನೆ ದಾಳಿಯಿಂದ ರೈತ ಮೃತಪಟ್ಟರೆ 1 ಕೋಟಿ, ಬೆಳೆ ನಾಶವಾದರೆ 25 ಲಕ್ಷ ಪರಿಹಾರ ನೀಡುವ ಕಾನೂನು ಜಾರಿ ಮಾಡಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. ನಗರದ ಹೊರವಲಯದ ಅರಣ್ಯ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರಗಳು ಜನಪತ್ರಿನಿಧಿಗಳು, ಜಿಲ್ಲಾಡಳಿತ, ತಾಲೂಕು ಆಡಳಿತ, ಆರಣ್ಯ ಅಧಿಕಾರಿಗಳು, ಪ್ರತಿ ವರ್ಷ ಬದಲಾವಣೆ ಆಗುತ್ತಿದೆ ಹೊರತು ಗಡಿಭಾಗದ ಗ್ರಾಮೀಣ ಪ್ರದೇಶದ ಬಡ ರೈತ ಕೂಲಿ ಕಾರ್ಮಿಕರ ಹಣೆಬರಹ ಮಾತ್ರ ಬದಲಾವಣೆಯಾಗುತ್ತಿಲ್ಲ. ಪ್ರತಿ ವರ್ಷ ಹತ್ತಾರು ರೈತರ ಪ್ರಾಣ ಹಾಗೂ ಕೋಟ್ಯಂತರ ರುಪಾಯಿ ಬೆಳೆಗಳನ್ನು ಕಾಡಾನೆಗಳು ಬಲಿಪಡಿಯುತ್ತಿದ್ದರೂ ಸಮಸ್ಯೆಯನ್ನು ಮಾತ್ರ ಗಂಭಿರವಾಗಿ ಪರಿಗಣಿಸುವಲ್ಲಿ ಅರಣ್ಯ ಸಚಿವರು, ಸ್ಥಳೀಯ ಜನಪ್ರತಿನಿಧಿಗಳು, ಸರ್ಕಾರಗಳು, ವಿಫಲವಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಗಡಿಭಾಗದ ಹಳ್ಳಿಗಳ ರೈತರ ಸಮಸ್ಯೆಯನ್ನು ತಾಲೂಕು ಆಡಳಿತ ಗಂಭೀರವಾಗಿ ಪರಿಗಣಿಸದೆ ಅನೆ ದಾಳಿ ಮಾಡಿ ರೈತರ ಪ್ರಾಣ ಬೆಳೆ ನಾಶವಾದಗ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಮಾದ್ಯಮ ಮುಂದೆ ಮೊಸಳೆ ಕಣ್ಣಿರು ಸುರಿಸಿ ಬಿಕ್ಷುಕರ ರೀತಿಯಲ್ಲಿ 5 ಲಕ್ಷ ಹಾಗೂ ಬೆಳೆ ನಷ್ಟಕ್ಕೆ 2.5 ಎಕರೆಗೆ 6,500 ರು.ಗಳನ್ನು ಪರಿಹಾರ ಕೊಟ್ಟ ನಾಪತ್ತೆಯಾಗಿ ಮತ್ತೆ ಗಡಿಭಾಗದ ಸಮಸ್ಯೆ ಜ್ಞಾಪಕಕ್ಕೆ ಬರುವುದು ಚುನಾವಣೆ ಇಲ್ಲವೆ ಸಮಸ್ಯೆ ಆದಾಗ ಮಾತ್ರ ಕಿಡಿಕಾರಿದರು.
ರಾಜ್ಯ ಬಜೆಟ್‌ನಲ್ಲಿ ಅನೆಕಾರಿಡಾರ್ ಸ್ಥಾಪನೆಗೆ 10 ಸಾವಿರ ಕೋಟಿ ಅನುದಾನ ಜೊತೆಗೆ ಕಾಡಾನೆಗಳ ದಾಳಿಯಿಂದ ಮೃತ ಪಟ್ಟ ರೈತ ಕುಟುಂಬಕ್ಕೆ 1 ಕೋಟಿ ಹಾಗೂ ಬೆಳೆ ನಾಶವಾದರೆ 10 ಲಕ್ಷ ಪರಿಹಾರ ಪ್ರತಿ ಎಕರೆ ನೀಡುವ ಕಾನೂನು ಬಜೆಟ್‌ನಲ್ಲಿ ಜಾರಿಯಾಗಬೇಕಂದು ಸರ್ಕಾರವನ್ನು ಒತ್ತಾಯಿಸಿದರು. ಈ ವೇಳೆ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಕಿರಣ್ ಚಾಂದ್ ಪಾಷ, ಸಂತೋಷ, ಅಪ್ಪೋಜಿರಾವ್, ಗೋವಿಂದಪ್ಪ ಲಕ್ಷ್ಮಣ, ಬಾಬಾಜಾನ್, ಅಂಬರೀಶ್ ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣ ಮುನಿರಾಜು ವಿಶ್ವ, ತಿಮ್ಮಣ್ಣ, ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.