ಶ್ರೀ ಪ್ರಸನ್ನ ವೀರಭದ್ರೇಶ್ವರ ಸ್ವಾಮಿ ಅದ್ಧೂರಿ ರಥೋತ್ಸವ

KannadaprabhaNewsNetwork |  
Published : Feb 27, 2026, 01:30 AM IST
ಸಂಪನ್ನಗೊಂಡ ಶ್ರೀ ಪ್ರಸನ್ನ ವೀರಭದ್ರಶ್ವೇರ ಸ್ವಾಮಿ ರಥೋತ್ಸವ | Kannada Prabha

ಸಾರಾಂಶ

ರಥೋತ್ಸವ ನಿಮಿತ್ತ ಕಳೆದ 3 ದಿನಗಳಿಂದ ಶ್ರೀ ದೇವಸ್ಥಾನದಲ್ಲಿ ವಿಶೇಷ ಕೈಂಕರ್ಯ ಜರುಗಿದವು. ಜಿಲ್ಲೆಯಲ್ಲೇ ಅತಿ ಎತ್ತರದ ರಥೋತ್ಸವಗಳಲ್ಲಿ ಒಂದಾದ ಕೇರಳಾಪುರ ಶ್ರೀ ವೀರಭದ್ರೇಶ್ವೇರ ರಥೋತ್ಸವಕ್ಕೆ ಹೂವಿನ ಅಲಂಕಾರ ವಿಶೇಷ ಮೆರುಗನ್ನು ನೀಡಿತು. ಹೂವಿನ ಸೇವಾರ್ಥಕರಾದ ಕೆ. ಎಮ್ ರಾಜೇಶ್ವರಿ ವಿರೂಪಾಕ್ಷ, ಉಮಾಶಂಕರ, ಸ್ಮಿತಾ ಮತ್ತು ಕುಟುಂಬವರ್ಗದವರಿಂದ ಏರ್ಪಡಿಸಿದ್ದ ಹೂವಿನ ಅಲಂಕಾರ ಸೇವೆ ರಥೋತ್ಸವದ ಮೆರುಗನ್ನು ಹೆಚ್ಚಿಸಿತು.

ಕನ್ನಡಪ್ರಭ ವಾರ್ತೆ ಬಸವಾಪಟ್ಟಣ

ಇಲ್ಲಿಗೆ ಸಮೀಪದ ಕೇರಳಾಪುರ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವವು ಭಕ್ತಿ, ಸಡಗರ ಹಾಗೂ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ರಥೋತ್ಸವ ನಿಮಿತ್ತ ಕಳೆದ 3 ದಿನಗಳಿಂದ ಶ್ರೀ ದೇವಸ್ಥಾನದಲ್ಲಿ ವಿಶೇಷ ಕೈಂಕರ್ಯ ಜರುಗಿದವು. ಜಿಲ್ಲೆಯಲ್ಲೇ ಅತಿ ಎತ್ತರದ ರಥೋತ್ಸವಗಳಲ್ಲಿ ಒಂದಾದ ಕೇರಳಾಪುರ ಶ್ರೀ ವೀರಭದ್ರೇಶ್ವೇರ ರಥೋತ್ಸವಕ್ಕೆ ಹೂವಿನ ಅಲಂಕಾರ ವಿಶೇಷ ಮೆರುಗನ್ನು ನೀಡಿತು. ಹೂವಿನ ಸೇವಾರ್ಥಕರಾದ ಕೆ. ಎಮ್ ರಾಜೇಶ್ವರಿ ವಿರೂಪಾಕ್ಷ, ಉಮಾಶಂಕರ, ಸ್ಮಿತಾ ಮತ್ತು ಕುಟುಂಬವರ್ಗದವರಿಂದ ಏರ್ಪಡಿಸಿದ್ದ ಹೂವಿನ ಅಲಂಕಾರ ಸೇವೆ ರಥೋತ್ಸವದ ಮೆರುಗನ್ನು ಹೆಚ್ಚಿಸಿತು. ಕೆ. ಆರ್‌ ನಗರ, ಹೊಳೆನರಸೀಪುರ, ಅರಕಲಗೂಡು, ಪಿರಿಯಾಪಟ್ಟಣ ಅಲ್ಲದೆ ಬೇರೆ ಬೇರೆ ಜಿಲ್ಲೆಗಳಿಂದ ಸಾವಿರ ಸಂಖ್ಯೆಯಲ್ಲಿ ಭಕ್ತರು ಶ್ರೀಗಳ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಅರ್ಚಕರ ವರ್ಗ ಭಕ್ತಾದಿಗಳು ವಿವಿಧ ಸೇವೆಗಳನ್ನು ಸಲ್ಲಿಸಿದರು. ಅರಕಲಗೂಡು ತಾಲೂಕು ಶಾಸಕರಾದ ಎ ಮಂಜು, ಮಾಜಿ ಶಾಸಕರಾದ ಎ.ಟಿ ರಾಮಸ್ವಾಮಿ, ಅರಕಲಗೂಡು ತಾಲೂಕು ತಹಸೀಲ್ದಾರ್ ಸೌಮ್ಯ, ಕೇರಳಾಪುರ ಭಕ್ತಸಮೂಹ ರಥೋತ್ಸವದಲ್ಲಿ ಪಾಲ್ಗೊಂಡರು. ದೇವಸ್ಥಾನ ಬಳಿಯಿಂದ ರಥವನ್ನು ಎಳೆದು ನಂತರ 3 ರಸ್ತೆಗಳ ಮೂಲಕ ಸಾಗಿ ಸ್ವಸ್ಥಾನಕ್ಕೆ ತರಲಾಯಿತು. ಮಂಗಳವಾದ್ಯ ಜಯಘೋಷಗಳು ಮೊಳಗಿದವು. ಪ್ರತಿ ಮನೆಯ ಮುಂದೆ ಪೂಜಾ ಕಾರ್ಯ ನೇರವೇರಿಸಲಾಯಿತು. ಭಕ್ತರು ಹಣ್ಣು-ದವನ ತೂರಿ ಪೂಜ್ಯ ಭಾವನೆ ಹೊಂದಿದರು.

ರಥೋತ್ಸವದಲ್ಲಿ ಶ್ರೀ ವೀರಭದ್ರಶ್ವೇರ ಚಾರಿಟಬಲ್ ಟ್ರಸ್ಟ್‌ನ ಉಮಾಶಂಕರ್, ವಿನಯ್ ಸುರೇಶ್, ಮಹದೇವ್ ಕರೀಗೌಡ, ಕೀರಣ್ , ಶಿವು ಮಧು, ಮಹದೇವ್ ಇನ್ನು ಹಲವಾರು ಹಾಜರಿದ್ದರು. ಕೊಣನೂರು ಪೊಲೀಸ್ ಸಿಬ್ಬಂದಿ ವರ್ಗ ಭದ್ರತೆ ಒದಗಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ಕಾಮಗಾರಿಗೆ ಭೂಮಿಪೂಜೆ
ಜಿಲ್ಲೆಯ ರೈಲ್ವೆ, ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ವಿ,ಸೋಮಣ್ಣ