ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಹಾಗೂ ವೇಣುಗೋಪಾಲ ಅವರಿಗೂ ಮನವಿ ಮಾಡಿದ್ದಾಗಿ ತಿಳಿಸಿದರು. ಜಿಲ್ಲೆಯಲ್ಲಿ ಎಲ್ಲರೂ ಕೂಡಿ ರಾಜಕಾರಣ ಮಾಡಬೇಕಾಗುತ್ತದೆ. ಆದರೆ, ಎಂದಾದರೂ ಜಿಲ್ಲೆಯವರು ಕೂಡಿ ಚರ್ಚೆ ಮಾಡಿದ್ದೇವಾ?, ಈಗ ನೀವು ಹೇಳಿದ್ದೀರಿ, ಅದಕ್ಕೆ ಸ್ವಾಗತ ಮಾಡುತ್ತೇನೆ. ಇದಕ್ಕೆ ನಾನು ಸಹಕಾರ ಕೊಡುತ್ತೇನೆ. ಆದರೆ, ಅಂತಿಮ ತೀರ್ಮಾನವನ್ನು ಹೈಕಮಾಂಡ್‌ಗೆ ಬಿಡೋಣ ಎಂದು ಹೇಳಿದರು.ನಮ್ಮ ಮನವಿಯನ್ನು ಬೆಂಗಳೂರು ಹಾಗೂ ದೆಹಲಿಗೆ ತಲುಪಿಸೋಣ. ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಹಾಗೂ ರಾಜ್ಯದಲ್ಲಿ 2028ರಲ್ಲಿ ಮತ್ತೊಮ್ಮೆ ಸರ್ಕಾರ ಬರಬೇಕು. ಇದು ನಮ್ಮ ಗುರಿಯಾಗಬೇಕು. ಮಂತ್ರಿ ಮಂಡಳ ರಚನೆ ಸಿಎಂ ಪರಮಾಧಿಕಾರ. ಸಿಎಂ ಹಾಗೂ ಪಕ್ಷಕ್ಕೆ ಬದ್ಧರಾಗಿದ್ದೇವೆ. ಸಣ್ಣ ಅಧಿಕಾರಕ್ಕೆ ನಮ್ಮ ಮಧ್ಯೆ ಮನಸ್ತಾಪ ಮಾಡಿಕೊಳ್ಳುವುದು ಬೇಡ. ಇಬ್ಬರೂ ಧಾರ್ಮಿಕ ಹಿನ್ನೆಲೆ ಹಾಗೂ ಪಕ್ಷದ ಒಂದೇ ಸಿದ್ಧಾಂತವನ್ನು ಒಪ್ಪಿದವರು ಎಂದರು.
ಸಕ್ಕರೆ ಕಾರ್ಖಾನೆಗಳ ಕುರಿತು ನಿಯೋಗದೊಂದಿಗೆ ತೆರಳಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಇಂದಿಗೂ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಲಾಗಿಲ್ಲ. ಕಾರ್ಖಾನೆಗಳು ಹಾಗೂ ರೈತರಲ್ಲಿ ಸಮನ್ವಯ ಬರಬೇಕಿದೆ. ಸರ್ಕಾರ ಸಹ ಸ್ಪಂದಿಸುವ ಕೆಲಸ ಮಾಡುತ್ತಿದೆ. ಇಂಡಿ ತಾಲೂಕಿನಲ್ಲಿ ರೈತರಿಗೆ ಬೆಳೆ ಹಾನಿ ವಿತರಣೆಗೂ ಕ್ರಮ ವಹಿಸಲಾಗುತ್ತಿದೆ ಎಂದು ಭರವಸೆ ನೀಡಿದರು.ಕಾಂಗ್ರೆಸ್ ಪಕ್ಷದಲ್ಲಿ ಮನಿ ಪವರ್ ಬಗ್ಗೆ ಗೊತ್ತಿಲ್ಲ. ನಮ್ಮ ಪಕ್ಷದಲ್ಲಿ ತತ್ವ ಹಾಗೂ ಸಿದ್ಧಾಂತಕ್ಕೆ ಬೆಲೆ ಇದೆ. ಸಚಿವ ಸಂಪುಟದಲ್ಲಿ ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಹೀಗಾಗಿ, ಸಚಿವ ಸ್ಥಾನಕ್ಕೆ ಸಮಾನವಾದ ನಿಗಮ ಮಂಡಳಿಯಲ್ಲಿ ಅವಕಾಶ ಕೊಡಲಾಗಿದೆ ಎಂದರು.
----------ಕೋಟ್........
2013ರಲ್ಲಿ ಶಿವಾನಂದ ಪಾಟೀಲ ಹಾಗೂ ಸಿ.ಎಸ್.ನಾಡಗೌಡ, ನಾನು ಒಟ್ಟಿಗೆ ಹೋಗಿ, ಶಿವಾನಂದ, ನಾಡಗೌಡ ಇಬ್ಬರಲ್ಲಿ ಒಬ್ಬರಿಗೆ ಸಚಿವರನ್ನಾಗಿ ಮಾಡಿ ಎಂದು ಹೇಳಿದ್ದೆ. ಈಗಲೂ ನಾನಾಗಿ ಸಚಿವ ಸ್ಥಾನವನ್ನು ನೀಡಿ ಎಂದು ಯಾರನ್ನು ಕೇಳಿಲ್ಲ. ರಾಜ್ಯದಲ್ಲಿ 136 ಮತ್ತು ಬೇರೆಡೆಯಿಂದ ಬಂದ 5 ಜನ ಸೇರಿ ಒಟ್ಟು 141 ಜನ ಶಾಸಕರು ಇದ್ದೇವೆ. ನನ್ನ ವಿಷಯದಲ್ಲಿ ಚುನಾವಣಾ ಪೂರ್ವದಲ್ಲಿ ಮಾತುಕೊಟ್ಟಂತೆ ನಡೆಯಬೇಕು ಎಂಬುದು ಅಪೇಕ್ಷೆ ಇದೆ. ಆ ಪ್ರಕಾರ ನಡೆಯಬೇಕು ಎಂದೂ ನಾನು ಹೇಳಲ್ಲ. ನಮ್ಮಲ್ಲಿ ನಡೆದ ಮಾತುಕತೆಗೆ ಬೆಲೆ ಇದಿಯೋ ಇಲ್ಲವೋ? ಎಂಬುದು ಅಷ್ಟೇ ನನ್ನ ನಿಲುವು.- ಯಶವಂತರಾಯಗೌಡ ಪಾಟೀಲ, ಇಂಡಿ ಶಾಸಕ