ಅಕ್ಷರ ಜಾತ್ರೆಯಲ್ಲಿ ಆರಕ್ಷಕರಿಗೂ ಅವಕಾಶ ನೀಡಿ: ಮೌಲಾಲಿ ಆಲಗೂರ

KannadaprabhaNewsNetwork |  
Published : Apr 01, 2026, 03:00 AM IST
ವಅಲಿಕಅರ | Kannada Prabha

ಸಾರಾಂಶ

ಪಟ್ಟಣದಲ್ಲಿ ಏ.27, ಏ.28 ರಂದು ನಡೆಯುವ 21ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಆರಕ್ಷಕ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಕವಿಗೋಷ್ಠಿ, ವಿಚಾರಗೋಷ್ಠಿ, ಉಪನ್ಯಾಸ, ಸಂಗೀತ, ಜನಪದ, ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕು. ಈ ಮೂಲಕ ಪೊಲೀಸರ ವಿವಿಧ ಕಲೆಗೆ ಪ್ರೋತ್ಸಾಹ ನೀಡಬೇಕು ಎಂದು ಮೌಲಾಲಿ ಆಲಗೂರ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸಿಂದಗಿ

ಪಟ್ಟಣದಲ್ಲಿ ಏ.27, ಏ.28 ರಂದು ನಡೆಯುವ 21ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಆರಕ್ಷಕ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಕವಿಗೋಷ್ಠಿ, ವಿಚಾರಗೋಷ್ಠಿ, ಉಪನ್ಯಾಸ, ಸಂಗೀತ, ಜನಪದ, ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕು. ಈ ಮೂಲಕ ಪೊಲೀಸರ ವಿವಿಧ ಕಲೆಗೆ ಪ್ರೋತ್ಸಾಹ ನೀಡಬೇಕು ಎಂದು ಮೌಲಾಲಿ ಆಲಗೂರ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ ಅವರು, ಬಿಡುವಿಲ್ಲದ ಕರ್ತವ್ಯದ ನಡುವೆಯೂ ಜಿಲ್ಲೆಯ ನೂರಾರು ಆರಕ್ಷಕ ಅಧಿಕಾರಿ ಮತ್ತು ಸಿಬ್ಬಂದಿ, ಕಥೆ, ಕಾವ್ಯ, ಕಾದಂಬರಿ ಒಳಗೊಂಡ ಸಾಹಿತ್ಯ, ಸಂಗೀತ, ಪ್ರವಚನ, ಜನಪದ, ನೃತ್ಯ, ನಟನೆ ಸೇರಿದಂತೆ ಹಲವು ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ತಮ್ಮ ಬಿಡುವಿನ ಅವಧಿಯನ್ನು ಕಲಾ ಆರಾಧನೆಗೆ ಅರ್ಪಿಸಿದ್ದಾರೆ. ಆದರೆ, ಅವರಿಗೆ ಸೂಕ್ತ ವೇದಿಕೆ ಇಲ್ಲದೆ ಕಲೆಗೆ ಬೆಲೆ ಸಿಗದಂತಾಗಿದೆ. ಆದ್ದರಿಂದ ಏಪ್ರಿಲ್ ಕೊನೆಯ ವಾರದಲ್ಲಿ ಜರುಗುವ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಆರಕ್ಷಕರಿಗೆ ಅವಕಾಶ ನೀಡಿ ಅವರ ಕಲೆ ಇಮ್ಮಡಿಗೊಳಿಸಬೇಕು. ಜಿಲ್ಲೆಯ ಐದು ಜನ ಅಧಿಕಾರಿ ಮತ್ತು ಸಿಬ್ಬಂದಿ ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತರಾಗಿದ್ದಾರೆ. ಅವರಿಗೆ ವೇದಿಕೆಯಲ್ಲಿ ಗೌರವಿಸಬೇಕು. ಹಂಸಕವಿ ನಾಮದ ಬೀದರ ಜಿಲ್ಲೆ ಹೆಡ್‌ಕಾನ್ಸ್‌ಟೇಬಲ್ ಹಣಮಂತರಾಯ ವಲ್ಲೆಪುರ ಇವರನ್ನು ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿ ಪೊಲೀಸರ ಸಾಹಿತ್ಯ ಕೃಷಿಯನ್ನು ಪ್ರೋತ್ಸಾಹಿಸಿದ್ದರು. ಅದೇ ರೀತಿ ನಮ್ಮ ಜಿಲ್ಲೆಯೂ ಕೂಡ ಅಕ್ಷರ ಜಾತ್ರೆಯಲ್ಲಿ ಆರಕ್ಷಕರು ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಲು ಅವಕಾಶ ನೀಡಿ, ಪ್ರೋತ್ಸಾಹಿಸಬೇಕು. ವಿಜಯಪುರ ಮಕ್ಕಳ ಸಾಹಿತ್ಯದ ತವರು ಎಂದೇ ಖ್ಯಾತಿ ಹೊಂದಿದೆ ಅದಕ್ಕಾಗಿ ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎಂದು ಕೋರಿದರು.ಸಾಹಿತ್ಯ ಆಸಕ್ತರ ಪಟ್ಟಿ ನೀಡಿದರೇ ಜಿಲ್ಲಾ ಕಾಯ೯ಕಾರಣಿ ಸಮಿತಿಯಲ್ಲಿ ನಿಣ೯ಯ: ವಾಲಿಕಾರ

ಜಿಲ್ಲೆಯ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವರಿಗೆ ಸಾಹಿತ್ಯದಲ್ಲಿ ಆಶಕ್ತಿ ಇರುವರನ್ನು ಗುರುತಿಸಿ ಅವರಿಗೂ ವಿವಿಧ ಗೋಷ್ಠಿಗಳಲ್ಲಿ ಈಗಾಗಲೇ ಅವಕಾಶ ನೀಡುತ್ತ ಬಂದಿದ್ದೇವೆ. ಮತ್ತೇ ಆಸಕ್ತಿಯಿರುವ ಅಥವಾ ಉಳಿದುಕೊಂಡಿರುವ ಜಿಲ್ಲೆಯಲ್ಲಿರುವ ಪೊಲೀಸ್‌ ಇಲಾಖೆಯ ಸಾಹಿತ್ಯ ಆಸಕ್ತಿ ಇರುವವರ ಪಟ್ಟಿ ನೀಡಿದರೇ ಖಂಡಿತ ಅವರನ್ನು ಪರಿಗಣಿಸುತ್ತೇವೆ. ಕನ್ನಡ ಸಾಹಿತ್ಯ ಪರಿಷತ್ತು ಇದು ಎಲ್ಲರ ಸ್ವತ್ತು. ಜನಸಾಮಾನ್ಯರ ಪರಿಷತ್ತು ಇದಾಗಿರುವುದರಿಂದ ಎಲ್ಲರಿಗೂ ಅವಕಾಶವಿದೆ. ಪರಿಷತ್ತಿನೊಂದಿಗೆ ಸಂಪರ್ಕ ಮತ್ತು ಚಟುವಟಿಕೆಗಳಲ್ಲಿ ನಿರಂತ ಭಾಗವಹಿಸಬೇಕು. ಸಾಹಿತ್ಯ ಆಸಕ್ತರ ಪಟ್ಟಿ ನೀಡಿದರೇ ಜಿಲ್ಲಾ ಕಾಯ೯ಕಾರಣಿ ಸಮಿತಿಯಲ್ಲಿ ನಿಣ೯ಯಿಸುತ್ತೇವೆ.

-ಹಾಸಿಂಪೀರ ವಾಲಿಕಾರ, ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಲಿಕೆಯಲ್ಲಿ ಸಗರ ಸೇವಕ ದಿನೇಶ ಪ್ರತಿಭಟನೆ
ಚನ್ನಮ್ಮ ಸಮಾಧಿ ಅಭಿವೃದ್ಧಿಗೆ ಬೃಹತ್‌ ಹೋರಾಟ