ತೆರವು ಜಾಗದಲ್ಲಿ ಅಂಗಡಿ ಇಟ್ಟುಕೊಳ್ಳಲು ಅವಕಾಶ ನೀಡಿ

KannadaprabhaNewsNetwork |  
Published : Apr 22, 2026, 02:30 AM IST
21ಕೆಕೆಆರ್2:ಕುಕನೂರು ಪಟ್ಟಣದ ಹಳೆ ನಾಡ ಕಾರ್ಯಲಯ ಮುಂಭಾಗದಲ್ಲಿ ಇತ್ತಿಚ್ಚೇಗೆ ಅಂಗಡಿ ತೆರೆವುಗೊಳಿಸಲಾಗಿದ್ದು, ಅದೇ ಜಾಗದಲ್ಲಿ ಚಿಕ್ಕದಾಗಿ ಅಂಗಡಿ ಇಟ್ಟು ಕೊಡುಲು ಅವಕಾಶ ಮಾಡಿಕೊಡಬೇಕು ಎಂದು ತೆರವುಗೊಳಿಸಿದ ಅಂಗಡಿಕಾರರು ಪಪಂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. | Kannada Prabha

ಸಾರಾಂಶ

ಇದ್ದ ಜಾಗದಲ್ಲಿ ಸ್ವಲ್ಪ ಜಾಗದಲ್ಲಿ ಅಂಗಡಿ ಇಟ್ಟು ಕೊಂಡು ಜೀವನ ನಡೆಸಲು ಅನುಕೂಲ ಆಗುತ್ತದೆ.

ಕುಕನೂರು: ಪಟ್ಟಣದ ಹಳೆ ನಾಡ ಕಾರ್ಯಾಲಯ ಮುಂಭಾಗದಲ್ಲಿ ಇತ್ತೀಚೆಗೆ ಅಂಗಡಿ ತೆರವುಗೊಳಿಸಲಾಗಿದ್ದು, ಅದೇ ಜಾಗದಲ್ಲಿ ಚಿಕ್ಕ ಅಂಗಡಿ ಇಡಲು ಅವಕಾಶ ಮಾಡಿಕೊಡಬೇಕು ಎಂದು ಅಂಗಡಿಕಾರರು ಪಪಂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಅಂಗಡಿಕಾರ ಈಶಯ್ಯ ಶಿರೂರಮಠ ಮಾತನಾಡಿ, ಪಪಂ ವ್ಯಾಪ್ತಿಯಲ್ಲಿ ಬರುವ ಕುಕನೂರರಿಂದ ಯಲಬುರ್ಗಾ ರಸ್ತೆಯಲ್ಲಿ ಹಳೆ ನಾಡ ಕಾರ್ಯಾಲಯ ಮುಂಭಾಗದಲ್ಲಿ ಸುಮಾರು ವರ್ಷಗಳಿಂದಲೂ 21 ಅಂಗಡಿಕಾರರು ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದೇವೆ. ಆದರೆ ನಾಲ್ಕೈದು ದಿನಗಳ ಹಿಂದೆ ಅಂಗಡಿಗಳ ತೆರವು ಕಾರ್ಯ ಮಾಡಿದ್ದೀರಿ, ಆದರೆ ಅಂಗಡಿ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದ ಅಂಗಡಿಕಾರರ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಪಪಂ ಅಧಿಕಾರಿಗಳ ಮಾತಿಗೆ ಮಣಿದು ನಾವು ಅಂಗಡಿ ತೆರವು ಕಾರ್ಯ ಮಾಡಿಕೊಂಡಿದ್ದೇವೆ. ಆದರೆ ನಮಗೆ ನಾವಿದ್ದ ಜಾಗದಲ್ಲಿಯೇ ಸ್ವಲ್ಪ ಜಾಗಾವಕಾಶ ಮಾಡಿಕೊಟ್ಟು ಅಂಗಡಿ ನಡೆಸಲು ಅನುಕೂಲ ಮಾಡಿಕೊಡಬೇಕು.ಇದ್ದ ಜಾಗದಲ್ಲಿ ಸ್ವಲ್ಪ ಜಾಗದಲ್ಲಿ ಅಂಗಡಿ ಇಟ್ಟು ಕೊಂಡು ಜೀವನ ನಡೆಸಲು ಅನುಕೂಲ ಆಗುತ್ತದೆ. ಅಂಗಡಿ ತೆರವು ಕಾರ್ಯ ಆಗಿದ್ದರಿಂದ ನಮಗೆ ಜೀವನ ನಡೆಸುವದಕ್ಕೆ ಕಷ್ಟವಾಗುತ್ತಿದೆ ಎಂದರು.

ಯಲಬುರ್ಗಾ ಪಟ್ಟಣದಲ್ಲಿ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಮುಂದೆ ಯಾವ ರೀತಿ ಅಂಗಡಿ ಇಟ್ಟುಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ, ಅದೆ ಪ್ರಕಾರ ನಮಗೂ ಇದ್ದ ಸ್ಥಳದಲ್ಲಿ ಅಂಗಡಿ ಮಾಡುವುದಕ್ಕೆ ಪರವಾನಗಿ ನೀಡಬೇಕು. ಮೊದಲಿದ್ದ ಜಾಗದಲ್ಲಿ ಜಾಗ ಕೊಟ್ಟು ಜೀವನ ನಡೆಸುವದಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಂಗಡಿಕಾರರಾದ ಪ್ರವೀಣದಾಸ, ಜೆ.ಕೆ ಟೈಲರ್, ರಾಜಾಸಾಬ್, ಬಸವರೆಡ್ಡಿ, ಪವಿತ್ರಾ, ಪ್ರವೀಣ, ಸಿಕಾಂದರ್, ನವೀನ, ಸಂಗಯ್ಯ ದ್ಯಾಂಪೂರು, ಹುಸೇನಸಾಬ್, ಮಹೆಬೂಬಸಾಬ್ ಗುಡಿಹಿಂದಲ್, ಸಿಕಾಂದರ್, ಸುಭಾಷ ಸದರಿ, ವಿರಾಜ್ ಹಡಪದ, ಹುಸೆನಬಾಷಾ ಕೊಪ್ಪದ, ಮಂಜುನಾಥ ಮಾಲಗಿತ್ತಿ, ಶಿವಪ್ಪ, ಮುತ್ತಪ್ಪ ಸಂಗನಾಳ, ವೀರಯ್ಯ ಬಂಡಿ, ಶೇಖಪ್ಪ ದ್ಯಾಂಪೂರು, ಮದರಷಾ ಮಕಾಂದರ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೋಷ ತಿದ್ದಿಕೊಂಡು ನಡೆಯುವಂತಾಗಲಿ: ಮಾಧವಾನಂದಭಾರತೀ ಸ್ವಾಮಿಗಳು
ವಿಜೃಂಭಣೆಯ ಉಜ್ಜಯನಿ ಮರಳುಸಿದ್ದೇಶ್ವರ ಮಹಾರಥೋತ್ಸವ