ಕನ್ನಡಪ್ರಭ ವಾರ್ತೆ ಬೀಳಗಿ
ಇಲ್ಲಿನ ಬೀಳಗಿ ಕ್ರಾಸ್ ಬಳಿ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಾರ ವಿಜಯಪುರ ಜಿಲ್ಲೆ ಕೋಲ್ಹಾರ ಪಟ್ಟಣಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪಾಲ್ಗೊಂಡಿದ್ದ ಸಭೆಯಲ್ಲಿ ಸಚಿವರಾದ ಶಿವಾನಂದ ಪಾಟೀಲ ಅವರು ಹಿರಿಯ ನೀರಾವರಿ ತಜ್ಞರ ಪ್ರಕಾರ ಆಲಮಟ್ಟಿ ಜಲಾಶಯವನ್ನು 519.6 ದಿಂದ 520.6 ಮೀಟರ್‌ಗೆ ಎತ್ತರಿಸುವುದಕ್ಕೆ ಯಾವುದೇ ಕಾನೂನು ತೊಡಕು ಉಂಟಾಗಲ್ಲ ಎಂದು ತಿಳಿಸಿದ್ದಾರೆ ಎಂದಿದ್ದರು. ಅದಕ್ಕೆ ಡಿಸಿಎಂ ಅವರು ಅಧ್ಯಯನ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳೋಣ ಎಂದು ತಿಳಿಸಿದ್ದರು. ಈ ಮಾತಿನಿಂದ ಕೃಷ್ಣಾ ಮೆಲ್ದಂಡೆ ಯೋಜನೆಯ ಬಾಧಿತ ಸಂತ್ರಸ್ತರು ಆತಂಕದಲ್ಲಿದ್ದಾರೆ. ಬಿಜೆಪಿ ಸರ್ಕಾರ ಅವಧಿಯಲ್ಲಿ ಜಲಾಶಯ ಎತ್ತರವನ್ನು 522 ಮೀಟರ್‌ವರೆಗೆ ಹೆಚ್ಚಿಸುವ ಯೋಜನೆ ಹಾಕಿದಾಗ ವಿರೋಧ ಮಾಡಿದ್ದವರು ಇಂದು ಕೇವಲ ಒಂದು ಮೀಟರ್ ಎತ್ತರಿಸುವ ವಿಚಾರ ಹೇಗೆ ಮಾಡುತ್ತಾರೆ, ಬೆಳಗಾವಿ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯನವರು ಆಲಮಟ್ಟಿ ಜಲಾಶಯ ಎತ್ತರ 524.256 ಮೀಟರ್‌ಗೆ ಹೆಚ್ಚಿಸಿ ಅದಕ್ಕೆ ಬೇಕಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ನೀಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಈಗ ಅದೇ ಸರ್ಕಾರದವರು ಕೇವಲ ಒಂದು ಮೀಟರ್ ಎತ್ತರಿಸುವ ಬಗ್ಗೆ ಮಾತನಾಡುವುದು ಸರಿಯಲ್ಲ, ಕೇವಲ ಒಂದು ಮೀಟರ್ ಹೆಚ್ಚಳ ಮಾಡುವುದು ಎಂದರೆ ಹೇಗೆ ? ಮತ್ತೆ ಭೂಸ್ವಾಧೀನ ಯಾವ ರೀತಿ ಆಗುವುದು ಮತ್ತು ಭೂಮಿ ಪರಿಹಾರ ಹೇಗೆ ನೀಡಲಾಗುವುದು ಎನ್ನುವುದನ್ನು ತಿಳಿಸದೇ ಸಿಎಂ ಅವರೇ ನೀಡಿದ ಭರವಸೆಯನ್ನು ಧಿಕ್ಕರಿಸಿ ಈ ರೀತಿಯಾಗಿ ಹೇಳಿಕೆ ನೀಡಿ ಈ ಯೋಜನೆ ಹಂತ ಹಂತವಾಗಿ ಮಾಡುವ ಕೆಲಸಕ್ಕೆ ಸಚಿವರು ಮುಂದಾಗಿದ್ದಾರೆ ಎಂದು ಅವರ ಹೇಳಿಕೆಯಿಂದ ತಿಳಿಯುತ್ತಿದೆ. ಇದರಿಂದ ಸಂತ್ರಸ್ತರಲ್ಲಿ ಆತಂಕ ಹೆಚ್ಚಾಗಿದೆ. ಅಲ್ಲದೆ ಯೋಜನೆ ವಿಳಂಬ ಮಾಡುವ ತಂತ್ರಕ್ಕೆ ದಾರಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಜಲಾಶಯ 524.256 ಮೀಟರ್ ಎತ್ತರಿಸುವ ಸಲುವಾಗಿ ಶೀಘ್ರಗತಿಯಲ್ಲಿ ಸುಪ್ರಿಂ ಕೊರ್ಟ್‌ನಲ್ಲಿನ ಪ್ರಕರಣಕ್ಕೆ ಬೇಕಿರುವ ಎಲ್ಲ ಅಗತ್ಯ ದಾಖಲೆ ನೀಡಿ ಜಲಾಶಯ ಎತ್ತರಕ್ಕೆ ಆಗಬೇಕಿರುವ ಭೂಸ್ವಾಧೀನ, ಗ್ರಾಮಗಳ ಸ್ಥಳಾಂತರ ಜತೆಗೆ ಪುನರ್ವಸತಿ ಕೇಂದ್ರಗಳ ಸ್ಥಾಪನೆ ಮಾಡಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಪ್ರತಿ ಎಕರೆ ಒಣ ಬೆಸಾಯ ಭೂಮಿಗೆ ₹40 ಲಕ್ಷ ಮತ್ತು ನೀರಾವರಿ ಭೂಮಿಗೆ ₹50 ಲಕ್ಷ ಪರಿಹಾರ ನೀಡುವ ನಿಟ್ಟಿನಲ್ಲಿ ಸಾಗಬೇಕು ಎಂದು ಆಗ್ರಹಿಸಿದ್ದಾರೆ.