ದೊಡ್ಡಬಳ್ಳಾಪುರ: ಮನುಷ್ಯ ಸಂವೇದನೆಯ ಅಭಿವ್ಯಕ್ತಿ ರಂಗಕಲೆಯ ಅನನ್ಯ ಗುಣವಾಗಿದ್ದು, ನಿತ್ಯ ಬದುಕಿನ ಹಲವು ಸಂವೇದನೆಗಳು ಹಾಗೂ ಭಾವನೆಗಳ ಮಿಳಿತವೇ ನಾಟಕದ ನೈಜ ಸತ್ವವಾಗಿರುತ್ತದೆ ಎಂದು ಪ್ರೆಸಿಡೆನ್ಸಿ ಕಾಲೇಜಿನ ಪ್ರಾಧ್ಯಾಪಕ ಸಿ.ಪೂಜಶ್ರೀ ಹೇಳಿದರು.
ದಿನನಿತ್ಯದ ಬದುಕು ಮತ್ತು ಕಲಿಕೆಯಲ್ಲಿ ರಂಗಭೂಮಿಯ ಮಹತ್ವ ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದ ಅವರು, ರಂಗಕಲೆ ಎಲ್ಲ ವಲಯಗಳನ್ನೂ ಒಳಗೊಂಡ ಸಮಷ್ಠಿ ರೂಪ. ಬದುಕಿನ ಕಲೆ ಎಂದರೂ ತಪ್ಪಾಗಲಾರದು. ಭಾವಾಭಿವ್ಯಕ್ತಿಯ ಜೊತೆಗೆ ಸಾಮಾಜಿಕ ಕಾಳಜಿ ಮತ್ತು ಸಾಂಸ್ಕೃತಿಕ ಸಂವೇದನೆಯನ್ನು ಒಳಗೊಂಡ ಮಾಧ್ಯಮವಾಗಿ ಹೆಗ್ಗಳಿಕೆ ಪಡೆದಿದೆ ಎಂದು ಅಭುಪ್ರಾಯಪಟ್ಟರು.
ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಡಾ.ಟಿ.ಎಚ್.ಲವಕುಮಾರ್, ಪ್ರಸ್ತುತ ವರ್ಷದ ಅಂತಾರಾಷ್ಟ್ರೀಯ ರಂಗಭೂಮಿ ದಿನಾಚರಣೆಯ ರಂಗ ಸಂದೇಶವನ್ನು ಪ್ರಸ್ತುತಪಡಿಸಿದರು. ಯುವಜನತೆಯನ್ನು ಒಳಗೊಂಡ ರಂಗಪರಂಪರೆಯ ಪರಿಕಲ್ಪನೆಯನ್ನು ನಾಟಕ ಅಕಾಡೆಮಿ ಪ್ರಧಾನ ಆದ್ಯತೆಯಾಗಿ ಪರಿಗಣಿಸಿ ಕಾಲೇಜು ವಿದ್ಯಾರ್ಥಿಗಳಲ್ಲಿ ರಂಗ ಚಟುವಟಿಕೆಗಳ ಬಗ್ಗೆ ಆಸಕ್ತಿ ವೃದ್ದಿಸುವ ಕೆಲಸ ಮಾಡುತ್ತಿದೆ ಎಂದರು.ಇದೇ ವೇಳೆ ರಂಗ ಕಲಾವಿದರಾದ ಎನ್.ಆನಂದಮೂರ್ತಿ ಮತ್ತು ಜಿ.ಬಿ.ರಂಜಿತ್ ಅವರನ್ನು ಸನ್ಮಾನಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕೆ.ಎನ್.ಹರ್ಷಿತ, ಡಿ.ಎ.ಮೌಲ್ಯ ಮತ್ತು ಪಿ.ಸಿಂಧು ಅವರಿಗೆ ಬಹುಮಾನ ನೀಡಲಾಯಿತು.
ಶೂದ್ರತಪಸ್ವಿ ನಾಟಕ ಪ್ರದರ್ಶನ:
(ಚೆಂದದ ಒಂದು ಫೋಟೋ ಪ್ಯಾನಲ್ನಲ್ಲೂ ಬಳಸಿ ಸರ್)
27ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ನೇತೃತ್ವದಲ್ಲಿ ವಿಶ್ವ ರಂಗಭೂಮಿ ದಿನದ ಅಂಗವಾಗಿ ನಡೆದ ನಾಟಕ ಪ್ರದರ್ಶನಕ್ಕೆ ಡಾ.ಲವಕುಮಾರ್ ಚಾಲನೆ ನೀಡಿದರು.--
--
27ಕೆಡಿಬಿಪಿ3- ದೊಡ್ಡಬಳ್ಳಾಪುರದ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಕಾಲೇಜಿನಲ್ಲಿ ಪ್ರದರ್ಶನಗೊಂಡ ಶೂದ್ರ ತಪಸ್ವಿ ನಾಟಕದ ದೃಶ್ಯ.