ಬೈಕ್‌ ಕಳವು ವಿಚಾರಕ್ಕೆ ಗಲಾಟೆ ಸ್ನೇಹಿತನ ಹತ್ಯೆಗೈದ ಮೂವರ ಸೆರೆ

KannadaprabhaNewsNetwork |  
Published : Nov 26, 2026, 04:00 AM IST
ಹೂವುಗಳ ನಡುವೆ ಕುಳಿತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವ ಮಹಿಳೆಯರು. | Kannada Prabha

ಸಾರಾಂಶ

ಬೈಕ್‌ ಕಳ್ಳತನ ವಿಚಾರಕ್ಕೆ ಜಗಳವಾಗಿ ಸ್ನೇಹಿತನನ್ನೇ ಹೊಡೆದು ಹತ್ಯೆಗೈದಿದ್ದ ಮೂವರು ಆರೋಪಿಗಳನ್ನು ಡಿ.ಜೆ.ಹಳ್ಳಿ ಪೊಲೀಸ್‌ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೈಕ್‌ ಕಳ್ಳತನ ವಿಚಾರಕ್ಕೆ ಜಗಳವಾಗಿ ಸ್ನೇಹಿತನನ್ನೇ ಹೊಡೆದು ಹತ್ಯೆಗೈದಿದ್ದ ಮೂವರು ಆರೋಪಿಗಳನ್ನು ಡಿ.ಜೆ.ಹಳ್ಳಿ ಪೊಲೀಸ್‌ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಹೆಣ್ಣೂರುಬಂಡೆ ನಿವಾಸಿ ಆ್ಯಂಬರ್‌ (24) ಕೊಲೆಯಾದವನು. ಕೃತ್ಯ ಎಸಗಿದ ಆತನ ಸ್ನೇಹಿತರಾದ ಜುನೈದ್‌, ಯೂನಸ್ ಸೇರಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ನ.20 ರಂದು ಡಿ.ಜೆ.ಹಳ್ಳಿಯಲ್ಲಿ ಈ ಘಟನೆ ನಡೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆ್ಯಂಬರ್ ಮತ್ತು ಆರೋಪಿಗಳು ಪರಸ್ಪರ ಸ್ನೇಹಿತರಾಗಿದ್ದು, ಡಿ.ಜೆ.ಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸವಾಗಿದ್ದರು. ಎಲ್ಲರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಆ್ಯಂಬರ್‌ ಬೈಕ್ ಕಳ್ಳತನ ಮಾಡಿ ಜೈಲು ಸೇರಿದ್ದು, ನಂತರ ಬಿಡುಗಡೆಯಾಗಿದ್ದ. ಬಳಿಕ ಬೇರೆ ಕೆಲಸ ಮಾಡಿಕೊಂಡಿದ್ದ. ಆದರೆ, ಬೈಕ್‌ ಕಳ್ಳತನ ವಿಚಾರಕ್ಕೆ ಆ್ಯಂಬರ್ ಹಾಗೂ ಆರೋಪಿಗಳ ನಡುವೆ ನ.20 ರಂದು ಗಲಾಟೆಯಾಗಿತ್ತು. ಆಗ ಆರೋಪಿಗಳು ಕೈಯಿಂದ ಆ್ಯಂಬರ್ ಹೊಟ್ಟೆ, ಬೆನ್ನು ಮುಖಕ್ಕೆ ಹೊಡೆದಿದ್ದರು. ಆತನಿಗೆ ಚಿಕಿತ್ಸೆ ಕೊಡಿಸಿದ ಮನೆಗೆ ಬಂದು ಊಟ ಮಾಡಿ ಎಲ್ಲರೂ ಮಲಗಿದ್ದರು.

ನ.22 ರ ಬೆಳಗ್ಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ನೇಹಿತರೇ ಓಆರ್‌ಎಸ್‌ ಕುಡಿಸಿ ಮಲಗಿಸಿದ್ದರು. ನಂತರ ಎಲ್ಲರೂ ಕೆಲಸಕ್ಕೆ ಹೋಗಿದ್ದರು. ತಡರಾತ್ರಿ ಬರುವಷ್ಟರಲ್ಲಿ ಆ್ಯಂಬರ್ ಮೃತಪಟ್ಟಿದ್ದ. ಇದರಿಂದ ಗಾಬರಿಗೊಂಡ ಅವರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ದೃಢಪಡಿಸಿದ್ದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ವರದಿಯಲ್ಲಿ ಆಂತರಿಕ ರಕ್ತಸ್ರಾವದಿಂದ ಯುವಕ ಮೃತಪಟ್ಟಿದ್ದಾನೆ ಎಂಬುದು ಗೊತ್ತಾಗಿತ್ತು. ನಂತರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ಹಲ್ಲೆ ನಡೆಸಿರುವುದನ್ನು ಬಾಯ್ಬಿಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ಕಮಹಾದೇವಿ ವಿಶ್ವವಿದ್ಯಾಲಯ ಇತರ ವಿಶ್ವವಿದ್ಯಾಲಯಗಳಿಗೆ ಮಾದರಿ
ಪದವಿ ಕಾಲೇಜು ಸ್ಥಾಪನೆಗೆ ₹೪ ಕೋಟಿ ಸಿಎಸ್‌ಆರ್ ನೆರವು