ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಹಿಂದಿ ಭವನದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಆಯೋಜಿಸಿದ್ದ ಅಖಿಲ ಕರ್ನಾಟಕ ರಾಜ್ಯ ಮಟ್ಟದ ಕವಲುದಾರಿ ಕವನ ಸಂಕಲನ ಬಿಡುಗಡೆ ಹಾಗೂ 31ನೇ ರಾಜ್ಯ ಮಟ್ಟದ ಕವಿಕಾವ್ಯ ಮೇಳ, ವಿವಿಧ ಕ್ಷೇತ್ರದ ಗಣ್ಯರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಆಧುನಿಕ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಹಿತಿಗಳು ಹೊರಬರಬೇಕಿದೆ. ಸಮಾಜ ತಿದ್ದುವ, ರಾಜಕಾರಣಿಗಳು, ದುಷ್ಟತನ ಮನಸಿಗರನ್ನು ಎಚ್ಚರಿಸಿ ಕಾವ್ಯ, ಕವಿತೆ, ಕವನಗಳು ಅತ್ಯಗತ್ಯವಿದೆ ಎಂದರು.ಸಾಹಿತಿ ಆರ್.ಎಸ್.ಚಂದ್ರಶೇಖರ್ ಮಾತನಾಡಿ, ಕನ್ನಡಭಾಷೆ ಬೆಳೆವಣಿಗೆಗೆ ಸಾಹಿತ್ಯ ಮತ್ತು ಸಾಹಿತಿಗಳ ಕೊಡುಗೆ ಅಪಾರ. ಗೋಕಾಕ್ ಚಳವಳಿಯಿಂದ ಕನ್ನಡ ಭಾಷೆಗೆ ಮತ್ತಷ್ಟು ಶಕ್ತಿ ಮತ್ತು ಸಾಮರ್ಥ್ಯದ ಅರಿವು ಹೆಚ್ಚಾಯಿತು. ಭಾಷೆ ವೃದ್ದಿಗೆ ಗಣ್ಯವ್ಯಕ್ತಿಗಳ ಮಾತುಗಾರಿಗೆಯೂ ಪ್ರಭಾವ ಬೀರುತ್ತದೆ. ಡಾ.ರಾಜ್ ಕುಮಾರ್ ಅವರಂತಹ ಮೇರುನಟರ ಮಾತುಗಾರಿಗೆ ಮಹತ್ವವನ್ನು ಹೆಚ್ಚಿಸುತ್ತದೆ ಎಂದು ಸ್ಮರಿಸಿದರು.
ಬಾಲ ಪುರಸ್ಕಾರ ಪ್ರಶಸ್ತಿಗೆ ಅರ್ಜಿ ಆಹ್ವಾನಮಂಡ್ಯ: 2025ನೇ ಸಾಲಿನ ರಾಷ್ಟ್ರೀಯ ಪ್ರಧಾನ ಮಂತ್ರಿ ಬಾಲಪುರಸ್ಕಾರ ಪ್ರಶಸ್ತಿಗಾಗಿ ರಾಷ್ಟ್ರಾದ್ಯಂತ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜಿಲ್ಲೆಯಲ್ಲಿ ಧೈರ್ಯ ಮತ್ತು ಸಾಹಸದಿಂದ ಇತರರನ್ನು ರಕ್ಷಿಸಿದ ಹಾಗೂ ಕ್ರೀಡೆ, ಸಮಾಜ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ ಪರಿಸರ ಸಂರಕ್ಷಣೆ, ಕಲೆ ಮತ್ತು ಸಂಸ್ಕೃತಿ ಮತ್ತು ನೂತನ ಆವಿಷ್ಕಾರಗಳನ್ನು ಮಾಡಿ ಉತ್ತಮ ಸಾಧನೆ ಮಾಡಿದ 5 ವರ್ಷ ಮೇಲ್ಪಟ್ಟ ಹಾಗೂ 18 ವರ್ಷದೊಳಗಿರುವ ಮಕ್ಕಳನ್ನು ಗುರುತಿಸಿ ಜುಲೈ 31 ರೊಳಗೆ ಅರ್ಜಿಯನ್ನು ಆನ್‌ಲೈನ್ Website: National Awards Portal https://awards.gov.in ಮೂಲಕ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂ. ಸಂ: 08232-223222 ಸಂಪರ್ಕಿಸಬಹುದು ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.ಅಂಧ ಗಂಡು ಮಕ್ಕಳ ದಾಖಲಾತಿಗೆ ಅವಕಾಶಮಂಡ್ಯ: ಮೈಸೂರಿನ ಬಂಬು ಬಜಾರ್‌ನ ತಿಲಕ್ ನಗರದ ಸರ್ಕಾರಿ ಅಂಧ ಮಕ್ಕಳ ಪಾಠ ಶಾಲೆಯಲ್ಲಿ ಶೇ. 40% ಕ್ಕಿಂತ ಹೆಚ್ಚು ದೃಷ್ಟಿ ದೋಷವುಳ್ಳ (ಅಂಧರು) 6 ವರ್ಷದಿಂದ ಹತ್ತು ವರ್ಷ ವಯೋಮಿತಿಯ ಗಂಡು ಮಕ್ಕಳನ್ನು 1ನೇ ತರಗತಿಯಿಂದ 10ನೇ ತರಗತಿಗೆ ದಾಖಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 0821-2297496/ಮೊ-9481441453 ಅನ್ನು ಸಂಪರ್ಕಿಸಬಹುದು ಎಂದು ಮಂಡ್ಯ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.