ಆಚರಣೆಗಳು ಬೇರೆಯಾದರೂ ಮಾನವ ಕಲ್ಯಾಣವೇ ಧರ್ಮದ ಗುರಿ

KannadaprabhaNewsNetwork | Published : Jun 28, 2024 12:51 AM

ಸಾರಾಂಶ

ಧರ್ಮದ ಆಚರಣೆಗಳು ಬೇರೆ ಬೇರೆಯಾದರೂ ಎಲ್ಲ ಧರ್ಮಗಳ ಗುರಿ ಮಾನವ ಕಲ್ಯಾಣವೇ ಆಗಿದೆ. ರೇಣುಕಾಚಾರ್ಯರು ಜಾತಿ, ಮತ, ಪಂಥವನ್ನು ಮೀರಿ ಸಾಮಾಜದ ಸ್ವಾಸ್ಥ್ಯವನ್ನು ಕಾಪಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಭಾರತ ದೇಶದಲ್ಲಿ ಹಲವು ಧರ್ಮಗಳ ಆಚರಣೆ ಬೇರೆ ಆಗಿದ್ದರೂ ಸಹಾ ಎಲ್ಲ ಧರ್ಮಗಳ ಗುರಿ ಒಂದೇ ಅದು ಮಾನವ ಧರ್ಮಕ್ಕೆ ಮತ್ತು ಕಲ್ಯಾಣ ಬಯಸುವುದೇ ಆಗಿದೆ ಎಂದು ಬಾಳೆ ಹೊನ್ನುರ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಆರ್ಶೀವಚನ ನೀಡಿದರು.

ಪಟ್ಟಣದ ಹಾರಕೂಡ ಚೆನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಸಮಾರಂಭದ ನಿಮಿತ್ತ ನಡೆದ ಧಾರ್ಮಿಕಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ವೀರಶೈವ ಧರ್ಮ ಸಕಲ ಜೀವಾತ್ಮನಿಗೆ ಲೇಸನ್ನೇ ಬಯಸಿದೆ. ವೀರಶೈವ ಧರ್ಮ ಸಿದ್ಧಾಂತವು ಇಡೀ ಮಾನವ ಕುಲಕ್ಕೆ ಬೆಳಕನ್ನು ನೀಡಿದೆ. ಧರ್ಮದ ಪಾಲನೆಯಿಂದ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಧರ್ಮದ ಆಚರಣೆಗಳು ಬೇರೆ ಬೇರೆಯಾದರೂ ಎಲ್ಲ ಧರ್ಮಗಳ ಗುರಿ ಮಾನವ ಕಲ್ಯಾಣವೇ ಆಗಿದೆ. ರೇಣುಕಾಚಾರ್ಯರು ಜಾತಿ, ಮತ, ಪಂಥವನ್ನು ಮೀರಿ ಸಾಮಾಜದ ಸ್ವಾಸ್ಥ್ಯವನ್ನು ಕಾಪಾಡಿದ್ದಾರೆ ಎಂದು ಹೇಳಿದರು.

ವೀರಶೈವ ಧರ್ಮ ಪಾರಂಪರಿಕ ಇತಿಹಾಸವನ್ನು ಬಹುದೊಡ್ಡದಾಗಿ ನೀಡಿದೆ. ಪಂಚಪೀಠಗಳ ಇತಿಹಾಸ ಪರಂಪರೆಯನ್ನು ಪ್ರಾಚೀನವಾಗಿವೆ ಪೃಥ್ವಿ, ವಾಯು, ಆಕಾಶ, ಪಂಚ ತತ್ವಗಳಿಗೆ ಅಧಿನಾಯಕ ಆದಿಗುರು ರೇಣುಕಾಚಾರ್ಯರು. ಪಂಚಾ ಚಾರ್‍ಯರ ವೀರಶೈವ ಪರಿಪಾಲನೆ ಇಷ್ಟಲಿಂಗ ಮಹಾಪೂಜೆ ತಿಳಿಸಿದೆ. ವೀರಶೈವ ಲಿಂಗಾಯತ ಬಹಳಷ್ಟು ಜನರ ಕೊರಳಿನಲ್ಲಿ ಇಷ್ಟಲಿಂಗ ಇಲ್ಲ. ಹಣೆಯಲ್ಲಿ ವಿಭೂತಿ ಇಲ್ಲ ಶಿವಮಂತ್ರ ಜಪಿಸುತ್ತಿಲ್ಲ ಎಲ್ಲವೂ ಮಾಯಾವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ವೀರಶೈವ ಧರ್ಮವು ಮಾನವ ಧರ್ಮಕ್ಕೆ ಜಯವಾಗಲಿ ಎಂದು ಸಾರುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ರೇವಣಸಿದ್ದ ದೇವಾಲಯವು ಅತ್ಯಂತ ಮಹಿಮೆ ಕ್ಷೇತ್ರಗಳಾಗಿವೆ. ರಂಭಾಪುರಿ ಪೀಠದ ಹಸಿರು ಧ್ವಜವು ಶಾಂತಿ ಸಮೃದ್ಧಿ ಸಂಕೇತವಾಗಿದೆ. ರೈತರ ಬಾಳು ಉಜ್ವಲವಾಗಬೇಕು ಭೂಮಿಯಲ್ಲಿ ಫಸಲು ಹೆಚ್ಚಾಗಬೇಕು ಎಂದು ರಂಭಾಪುರಿ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ನುಡಿದರು.

ಧಾರ್ಮಿಕ ಸಭೆಯಲ್ಲಿ ಭರತನೂರ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ನಿಡಗುಂದಾ ಕರುಣೇಶ್ವರ ಸ್ವಾಮೀಜಿ, ಡಾ. ಬಸವಲಿಂಗ ಅವಧೂತರು ಆಶೀರ್ವಚನ ನೀಡಿದರು.

ವೇದಿಕೆಯಲ್ಲಿ ಚಂದನಕೇರಾ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಐನಾಪೂರ ಪಂಪಾಪತಿ ದೇವರು, ಹೊಸಳ್ಳಿ ಸಿದ್ದಲಿಂಗ ಶಿವಾಚಾರ್ಯರು, ಗೌತಮ ಪಾಟೀಲ, ಸಂತೋಷ ಗಡಂತಿ, ಉಮಾಪಾಟೀಲ, ಜಗನ್ನಾಥ ಸೇರಿಕಾರ, ನಂದಿಕುಮಾರ ಪಾಟೀಲ, ಅಲ್ಲಮಪ್ರಭು ಹುಲಿ, ನಾಗರಾಜ ಮಲಕೂಡ, ರಾಜಶೇಖರ ಮಜ್ಜಗಿ, ಸುಭಾಷ ಸೀಳಿನ, ಅಜೀತ ಪಾಟೀಲ, ಗುಂಡಯ್ಯ ಸ್ವಾಮಿ ಶರಣಪ್ಪ ಹಲಚೇರಿ, ಶಂಕರ ಅಲ್ಲಾಪೂರ, ಇನ್ನಿತರಿದ್ದರು.

Share this article