ನಗರದ ರಾಮಸಮುದ್ರ ಕ್ರಿಸ್ತರಾಜ ಬಾಲರ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿಗಳಿಂದ ಗುರುಗಳಿಗೆ ನಮನ, ಸಿಆರ್‌ಬಿಪಿಗೆ ವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭಾನುವಾರ ಅರ್ಥಪೂರ್ಣವಾಗಿ ನಡೆಯಿತು.
- ಗುರುಗಳಿಗೆ ವಂದಿಸಿ, ಸನ್ಮಾನಿಸಿ ಸತ್ಕಾರ್ಯ
---
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ರಾಮಸಮುದ್ರ ಕ್ರಿಸ್ತರಾಜ ಬಾಲರ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿಗಳಿಂದ ಗುರುಗಳಿಗೆ ನಮನ, ಸಿಆರ್‌ಬಿಪಿಗೆ ವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭಾನುವಾರ ಅರ್ಥಪೂರ್ಣವಾಗಿ ನಡೆಯಿತು.23 ವರ್ಷಗಳ ಬಳಿಕ ವಿದ್ಯಾರ್ಥಿಗಳ ಸಮಾಗಮ, ಹಳೇ ದಿನಗಳ ಮೆಲುಕು, ಶಾಲಾ ಕ್ಷಣಗಳ ಸ್ಮರಣೆಯು ಭಾವ ಸ್ಪರ್ಶಿ ಕ್ಷಣಗಳಿಗೆ ಸಾಕ್ಷಿಯಾಯಿತು. 2003-04ನೇ ಸಾಲಿನ ಹತ್ತನೇ ತರಗತಿಯ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಸಂಭ್ರಮದಲ್ಲಿ ಮಿಂದೆದ್ದರು.ಶಾಲೆಗಳಲ್ಲಿ ವಿದ್ಯಾಭ್ಯಾಸ ಕಲಿತ ಅಂದಿನ ವಿದ್ಯಾರ್ಥಿಗಳು ಇದೀಗ ವಿವಿಧ ವೃತ್ತಿಯಲ್ಲಿ ಜೀವನವನ್ನು ಕಟ್ಟಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ತಮಗೆ ಅಕ್ಷರ ಕಲಿಸಿದ ಗುರುಗಳಿಗೆ ಗೌರವ ಸಲ್ಲಿಸಲು ಇಂದು ಸಮ್ಮಿಲನಗೊಂಡಿದ್ದರು.
ವಿವಿಧ ವಿಷಯಗಳ ಶಿಕ್ಷಕರಿಗೆ ಸನ್ಮಾನಿಸಿ ಕಲಿಕಾ ಋಣ ತೀರಿಸುವ ಕೆಲಸ ಮಾಡಿದರು. ಜತೆಗೆ, ಹಳೇ ಸಹಪಾಠಿಗಳೊಂದಿಗೆ ಹರಟೆ ಹೊಡೆದು ಶಾಲಾ ಜೀವನದ ಚಟುವಟಿಕೆಗಳನ್ನು ಸ್ಮರಿಸಿಕೊಂಡರು.ಗುರುಗಳಿಗೆ ಗೌರವ ಸಮರ್ಪಣೆ:
ನಿವೃತ್ತ ಮುಖ್ಯ ಶಿಕ್ಷಕರಾದ ಸುಜಯ್ ಕುಮಾರ್, ಸಹ ಶಿಕ್ಷಕರಾದ ಎನ್.ಎಸ್. ಪುಟ್ಟೀರಪ್ಪ, ಆರ್.ಪಿ. ನಿರಂಜನ್, ನಿರ್ಮಲ ಮೇರಿ, ಎಲೆಜಬಲ್ ಮರ್ಸಿ, ನಾಗರಾಜು, ಫ್ರಾನ್ಸಿಸ್ ಬಾಬು, ನರಸಿಂಹಯ್ಯ, ಫಿಲೋಮಿನ, ಚಿನ್ನಯ್ಯ, ಲೂರ್ದ್ ಮೇರಿ, ನಟರಾಜು, ಯೋಸೆಫ್, ಜೋಸೆಫ್, ಸಿಂದಿಯಾ, ಶಿವನಂಜಯ್ಯ, ಮೂರ್ತಿ, ಲಕ್ಷ್ಮಯ್ಯ, ಸೆಲ್ವಮೇರಿ, ತೆರೆಸಾ ಪುಷ್ಪ, ಶಾಂತಿ, ಮೇರಿ ಸಿಬ್ಬಂದಿಗಳಾದ. ಡ್ಯಾನಿಯಲ್, ನಾಗರಾಜು, ದೊರೆ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.ಬ್ರದರ್ ಜಾನ್ ಪೀಟರ್, ಬ್ರದರ್ ಚಾರ್ಲ್ಸ್ ಅವರು ಕಾರ್ಯಕ್ರಮ ಉದ್ಘಾಟಿಸಿ ಎಲ್ಲಾ ವಿದ್ಯಾರ್ಥಿಗಳು ಶುಭ ಕೋರಿದರು.ನಿವೃತ್ತ ಮುಖ್ಯ ಶಿಕ್ಷಕ ಜೋಸೆಫ್ ರಾಜು ಮಾತನಾಡಿ, ನಮ್ಮನ್ನು ಕರೆದು ಗುರುವಂದನಾ ಕಾರ್ಯಕ್ರಮ ಆಯೋಜಿಸಿರುವುದು ತುಂಬಾ ಸಂತಸದಾಯಕವಾಗಿದೆ. ಇದು ಗುರುಗಳ ಮೇಲೆ ವಿದ್ಯಾರ್ಥಿಗಳು ಇಟ್ಟಿರುವ ಪ್ರೀತಿ, ವಿಶ್ವಾಸ, ಗೌರವ, ಬಾಂಧವ್ಯವಾಗಿದೆ. ಒಂದು ಸಂದರ್ಭದಲ್ಲಿ ನಾವು ನಿಮಗೆ ಗುರುಗಳಾಗಿ ಹಿತವಚನ ಹೇಳುತಿದ್ದೇವು. ಮಾನವೀಯ ಮೌಲ್ಯಗಳನ್ನು ನಿಮಗೆ ಬೋಧಿಸಿದ್ದೆವು. ಆ ಮಾನವೀಯ ಮೌಲ್ಯಗಳ ಜೊತೆ ನೀವು ಬದುಕನ್ನು ಸಾಗಿಸುತ್ತಿದ್ದೀರಿ. ನಿಜವಾಗಲೂ ಇದು ಬಹಳ ಸಂತಸದಾಯಕವಾದದ್ದು ಎಂದು ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕ ಸುಜಯ್ ಕುಮಾರ್ ಮಾತನಾಡಿ, ನೀವು ಶಾಲೆಯಲ್ಲಿ ಓದುವಾಗ ನಿಮ್ಮೊಂದಿಗೆ ನಿಷ್ಠುರವಾಗಿ ನಡೆದುಕೊಂಡಿದ್ದೇನು. ಆ ಫಲವನ್ನು ನಿಮ್ಮಲ್ಲಿ ನಾವಿಂದು ಕಾಣುತ್ತಿದ್ದೇನೆ ಎಂದರು.ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.---29ಸಿಎಚ್‌ಎನ್51
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.