ಆಳ್ವಾಸ್‌ನ 46 ವಿದ್ಯಾರ್ಥಿಗಳು ಶೇ. 95ಕ್ಕೂ ಹೆಚ್ಚು, 116 ವಿದ್ಯಾರ್ಥಿಗಳು ಶೇ. 90ಕ್ಕಿಂತ ಅಧಿಕ ಅಂಕದ ಸಾಧನೆ

KannadaprabhaNewsNetwork |  
Published : Apr 17, 2026, 02:45 AM IST
ಪೋಟೋ 14 : ಬಾಲ್ಯವಿವಾಹ ನಡೆಯುತ್ತಿದ್ದ ಕಲ್ಯಾಣ ಮಂಟಪ | Kannada Prabha

ಸಾರಾಂಶ

ಮೂಡುಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಈ ಬಾರಿಯ ಹತ್ತನೇ ತರಗತಿಯ ಫಲಿತಾಂಶ ಪ್ರಕಟಿಸಿದ್ದು, ಸತತ ಆರನೇ ವರ್ಷ ಆಳ್ವಾಸ್ ಶಾಲೆ ಶೇ. 100 ಫಲಿತಾಂಶ ದಾಖಲಿಸಿದೆ.

ಮೂಡುಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಈ ಬಾರಿಯ ಹತ್ತನೇ ತರಗತಿಯ ಫಲಿತಾಂಶ ಪ್ರಕಟಿಸಿದ್ದು, ಸತತ ಆರನೇ ವರ್ಷ ಆಳ್ವಾಸ್ ಶಾಲೆ ಶೇ. 100 ಫಲಿತಾಂಶ ದಾಖಲಿಸಿದೆ.ಆಳ್ವಾಸ್ ಶಾಲೆಯ 46 ವಿದ್ಯಾರ್ಥಿಗಳು ಶೇ. 95ಕ್ಕಿಂತ ಹೆಚ್ಚು ಅಂಕ ಪಡೆಯುವ ಮೂಲಕ ಶ್ರೇಷ್ಠ ಸಾಧನೆ ಮೆರೆದಿದ್ದಾರೆ. ಕರ್ನಾಟಕದ ಒಂದು ಶಾಲೆಯಿಂದ ಶೇ. 95ಕ್ಕಿಂತ ಹೆಚ್ಚು ಅಂಕ ಪಡೆದವರ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆಳ್ವಾಸ್ ಪ್ರಥಮ ಸ್ಥಾನ ಪಡೆದಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದ ಅವರು, ಅನಘಾ ಉಮೇಶ್‌ ರಾವ್ (99.2%), ಪ್ರಮತ್ ಔರಾದ್ಕರ್ (99%), ಆದ್ಯಾ ಭಟ್ (99%), ಅನುರಾಧ (99%), ವಾತ್ಸಲ್ಯ ಎನ್ (98%), ಧನ್ವಿತ್ ಪಿಬಿ (97.2%), ನಮ್ರತಾ (97.2%), ಮನೋಘ್ನ (97%), ಶ್ವೇತಾ (97%), ಶಿವಾನಿ ಜಿ.ಎ. (97%), ವಾಘ್ಮಿ ಪ್ರಶಾಂತ್ (97%), ಅವನಿ ಪಿ. ಶೆಟ್ಟಿ (97%), ವಿಭಾಸ್ (97%), ಯಕ್ಷಿತಾ (96.4%), ಸೃಜನ್ (96.4%), ಗೌತಮ್ (96.4%), ಪ್ರತೀಕ್ಷಾ ಕೆ.ಎಂ. (96.4%), ಸಾನ್ವಿ (96.4%), ಜನಿತ್ (96.2%), ಭಾರ್ಗವ್ (96%), ಜಶ್ಮಿತಾ (96%), ಐಶ್ರೀ ಶೆಟ್ಟಿ (96%), ಆದಿಲ್ (96%), ಧೃತಿ (96%), ನಿಶ್ಚಲ್ (96%), ಹಿತೈಶಿ (96%), ಪ್ರಥಮ್ (96%), ಆದ್ರಿತ್ (95.4%), ಸುಮಿತ್ (95.2%), ಐಶಾನಿ (95.2%), ಭೃತಿ (95%), ಪೂರ್ವಿಕ್ (95%), ತರುಂಜನ್ (95%), ಸಾಯಿದೀಕ್ಷಾ (95%), ಅಂಜನಾತನಯ್ (95%), ಗ್ಲೋರಿ ಪ್ರಕಾಶ್ (95%), ಅಂಜನಿ (95%), ದಿವ್ಯಾ (95%), ಧನ್ಯಾ (95%), ನಿಶಾ (95%), ಅಧ್ವಿತಿ (95%), ಯಶಶ್ವಿ (95%), ಸಂಜನಾ (95%), ಹರ್ಷವರ್ಧನ್ (95%) ರೋಹಿತ್ (95%), ಸಿದ್ಧಾರ್ಥ (95%) ಅಂಕ ಪಡೆಯುವ ಮೂಲಕ ಸಾಧನೆ ಮೆರೆದಿದ್ದಾರೆ.116 ವಿದ್ಯಾರ್ಥಿಗಳು ಶೇ. 90 ಗಿಂತ ಹೆಚ್ಚು ಅಂಕ ಗಳಿಸಿದರೆ, 185 ವಿದ್ಯಾರ್ಥಿಗಳು ಶೇ. 85, ಹಾಗೂ 225 ವಿದ್ಯಾರ್ಥಿಗಳು ಶೇ. 80ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ.

ಸಂಸ್ಕೃತದಲ್ಲಿ 7 ವಿದ್ಯಾರ್ಥಿಗಳು, ಹಿಂದಿಯಲ್ಲಿ 4 ವಿದ್ಯಾರ್ಥಿಗಳು, ಸಮಾಜ ವಿಜ್ಞಾನದಲ್ಲಿ -3, ಕನ್ನಡದಲ್ಲಿ-3, ವಿಜ್ಞಾನ ಹಾಗೂ ಇಂಗ್ಲಿಷ್‌ನಲ್ಲಿ ತಲಾ ಒಬ್ಬ ವಿದ್ಯಾರ್ಥಿ ಶೇ.100 ಅಂಕ ಪಡೆದಿದ್ದಾರೆ. ಇವುಗಳ ಜೊತೆಯಲ್ಲಿ ಐಟಿ ವಿಷಯದಲ್ಲಿ 17 ವಿದ್ಯಾಥಿಗಳು ಶೇ.100 ಅಂಕ ಗಳಿಸಿದ್ದಾರೆ.ವಿಷಯವಾರು ಅಂಕಗಳಲ್ಲಿ 36 ವಿದ್ಯಾರ್ಥಿಗಳು ಶೇ. 10, 69 ವಿದ್ಯಾರ್ಥಿಗಳು ಶೇ. 99 ಅಂಕ, 117 ವಿದ್ಯಾರ್ಥಿಗಳು ಶೇ. 98, 175 ವಿದ್ಯಾರ್ಥಿಗಳು ಶೇ. 97, 255 ವಿದ್ಯಾರ್ಥಿಗಳು ಶೇ. 96, 335 ವಿದ್ಯಾಥಿಗಳು ಶೇ. 95 ಅಂಕ ಗಳಿಸಿದ್ದಾರೆ.

.....ಬಾಕ್ಸ್ಐಟಮ್....

ಜಗತ್ತಿನಾದ್ಯಂತ ಶೇ. 95ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು 2.24 ಶೇಕಡಾವಾರು ಆದರೆ, ಆಳ್ವಾಸ್‌ನಲ್ಲಿ ಶೇ. 10.33 ವಿದ್ಯಾರ್ಥಿಗಳು ಈ ಸಾಧನೆ ಮೆರೆದಿದ್ದಾರೆ. ಅಂತೆಯೇ ರಾಷ್ಟ್ರ ಮಟ್ಟದಲ್ಲಿ ಶೇ. 90ಕ್ಕಿಂತ ಅಧಿಕ ಶೇ. 8.96 ಆದರೆ, ಆಳ್ವಾಸ್‌ನಲ್ಲಿ ಶೇ. 26 ವಿದ್ಯಾರ್ಥಿಗಳು ಈ ಸಾಧನೆ ಮೆರೆದಿದ್ದಾರೆ. ವಿದ್ಯಾರ್ಥಿಗಳಿಗೆ ಪಿಯುಸಿ ಹಾಗೂ ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶಗಳನ್ನು ಒದಗಿಸುವ ಸಲುವಾಗಿ ಆಳ್ವಾಸ್ ಸಿಬಿಎಸ್‌ಇ ಶಾಲೆಯಲ್ಲಿ ಕಠಿಣವಾದ ಸ್ಟಾಂಡರ್ಡ ಮ್ಯಾಥ್ಸ್ ವಿಷಯವನ್ನು ಇತರ ವಿಷಯಗಳೊಂದಿಗೆ ಭೋಧಿಸಲಾಗುತ್ತಿದ್ದು, ಈ ವಿಷಯ ವಿದ್ಯಾರ್ಥಿಗಳಲ್ಲಿ ತಾರ್ಕಿಕ ಚಿಂತನೆ ಮತ್ತು ಸಮಸ್ಯೆ ಪರಿಹಾರ ಸಾಮರ್ಥ್ಯವನ್ನು ಬೆಳೆಸುತ್ತದೆ.ಪತ್ರಿಕಾಗೋಷ್ಠಿಯಲ್ಲಿ ಆಡಳಿತಾಧಿಕಾರಿ ಪ್ರೀತಂಕುದರ್, ಆಳ್ವಾಸ್ ಸಿಬಿಎಸ್ಇ ಶಾಲೆಯ ಮುಖ್ಯಶಿಕ್ಷಕ ಮೊಹಮ್ಮದ್ ಶಫಿ ಶೇಖ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂದೆಯ ಆಡಳಿತದಲ್ಲಿ ರಾಜ್ಯ ಸುಭಿಕ್ಷವಾಗಲಿ
ಐದು ವರ್ಷ ತಂದೆಯೇ ರಾಜ್ಯ ಮುುನ್ನಡೆಸಲಿ