ಆ.1,2ರಂದು ‘ಆಳ್ವಾಸ್‌ ಪ್ರಗತಿ’ ಬೃಹತ್‌ ಉದ್ಯೋಗ ಮೇಳ

KannadaprabhaNewsNetwork |  
Published : Jun 23, 2025, 11:48 PM IST
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಡಾ.ಎಂ. ಮೋಹನ್‌ ಆಳ್ವ. | Kannada Prabha

ಸಾರಾಂಶ

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ವತಿಯಿಂದ 15ನೇ ಆವೃತ್ತಿಯ ಬೃಹತ್‌ ಉದ್ಯೋಗ ಮೇಳ ‘ಆಳ್ವಾಸ್‌ ಪ್ರಗತಿ’ ಆ.1, 2ರಂದು ಮೂಡುಬಿದಿರೆ ವಿದ್ಯಾಗಿರಿಯ ಆಳ್ವಾಸ್‌ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ್‌ ಆಳ್ವ ತಿಳಿಸಿದ್ದಾರೆ.

300ಕ್ಕೂ ಅಧಿಕ ಕಂಪನಿಗಳು ಭಾಗಿ ನಿರೀಕ್ಷೆ, ಎಲ್ಲ ಪದವೀಧರರಿಗೆ ಉದ್ಯೋಗ ಅವಕಾಶ: ಡಾ.ಆಳ್ವಕನ್ನಡಪ್ರಭ ವಾರ್ತೆ ಮಂಗಳೂರು

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ವತಿಯಿಂದ 15ನೇ ಆವೃತ್ತಿಯ ಬೃಹತ್‌ ಉದ್ಯೋಗ ಮೇಳ ‘ಆಳ್ವಾಸ್‌ ಪ್ರಗತಿ’ ಆ.1, 2ರಂದು ಮೂಡುಬಿದಿರೆ ವಿದ್ಯಾಗಿರಿಯ ಆಳ್ವಾಸ್‌ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ್‌ ಆಳ್ವ ತಿಳಿಸಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈವರೆಗೆ 80 ಕಂಪನಿಗಳು ನೋಂದಾಯಿಸಿಕೊಂಡಿದ್ದು, ಹೆಚ್ಚುವರಿಯಾಗಿ 130 ಕಂಪನಿಗಳು ಪಾಲ್ಗೊಳ್ಳುವ ಭರವಸೆ ನೀಡಿವೆ. ಒಟ್ಟು 300 ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಬ್ಯಾಂಕಿಂಗ್‌ ಮತ್ತು ಹಣಕಾಸು, ಐಟಿ, ಐಟಿಎಸ್‌, ಮ್ಯಾನುಫ್ಯಾಕ್ಚರಿಂಗ್‌, ಹೆಲ್ತ್‌ಕೇರ್‌ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆಟೋಮೊಬೈಲ್‌, ಹಾಸ್ಪಿಟಾಲಿಟಿ, ಟೆಲಿಕಾಂ, ಮಾಧ್ಯಮ, ಶಿಕ್ಷಣ ಮತ್ತು ಎನ್‌ಜಿಒಗಳನ್ನು ಪ್ರತಿನಿಧಿಸುವ ಉನ್ನತ ಕಂಪನಿಗಳು ಆಳ್ವಾಸ್‌ ಪ್ರಗತಿಯಲ್ಲಿ ನೇಮಕಾತಿ ನಡೆಸಲಿವೆ. ಪದವಿ ಮತ್ತು ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್‌, ಎಂಜಿನಿಯರಿಂಗ್‌, ಕಲಾ, ವಾಣಿಜ್ಯ ಹಾಗೂ ಮ್ಯಾನೇಜ್‌ಮೆಂಟ್‌, ಬೇಸಿಕ್‌ ಸೈನ್ಸ್‌, ನರ್ಸಿಂಗ್‌, ಐಟಿಐ, ಡಿಪ್ಲೊಮಾ, ಪಿಯುಸಿ ಎಸ್‌ಎಸ್‌ಎಲ್‌ಸಿ ಹಾಗೂ ಇತರ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿವೆ ಎಂದು ಹೇಳಿದರು.

ಎಂಬಿಎ, ಎಂ.ಕಾಂ, ಬಿ.ಕಾಂ, ಬಿಬಿಎ, ಬಿಎಸ್ಸಿ, ಬಿಎ, ಬಿಸಿಎ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ ಹೈದರಬಾದ್‌ನ ಫ್ಯಾಕ್ಟ್ಸೆಟ್‌ ಸಂಸ್ಥೆ, ಪ್ರತಿಷ್ಠಿತ ಬ್ಯಾಂಕ್‌ಗಳಾದ ಕೋಟಕ್‌ ಮಹೀಂದ್ರಾ, ಎಚ್‌ಡಿಎಫ್‌ಸಿ, ಆ್ಯಕ್ಸಿಸ್‌, ಐಸಿಐಸಿಐ ಹಾಗೂ ಇನ್ನಿತರ ಸಂಸ್ಥೆಗಳು ಬಹು ಅವಕಾಶಗಳನ್ನು ನೀಡಲಿವೆ. ಉತ್ಪಾದನಾ ವಲಯದಲ್ಲಿ ಕಿರ್ಲೋಸ್ಕರ್‌ ಟೊಯೋಟಾ ಟೆಕ್ಸ್‌ಟೈಲ್‌ ಮೆಷಿನರಿ, ಟೋಯೊಟಾ ಇಂಡಸ್ಟ್ರೀಸ್‌ ಇಂಜಿನ್‌ ಇಂಡಿಯಾ, ಎಜಾಕ್ಸ್‌ ಎಂಜಿನಿಯರಿಂಗ್‌ ಲಿಮಿಟೆಡ್‌, ಏಸ್‌ ಡಿಸೈನ​ರ್ಸ್ ಮುಂತಾದ ಕಂಪೆನಿಗಳು ಭಾಗವಹಿಸಲಿವೆ. ಐಟಿ ಹಾಗೂ ಐಟಿಇಎಸ್‌ ವಲಯದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌, ಯುನಿಫೈಸಿಎಕ್ಸ್‌, 24/7ಎಐ, ಕಾನ್ಸೆಂಟ್ರಿಕ್ಸ್‌, ವಿನ್‌ಮ್ಯಾನ್‌ ಸಾಫ್ಟ್‌ವೇರ್‌ ಕಂಪೆನಿಗಳು ಯಾವುದೇ ಹಿನ್ನೆಲೆಯ ಪದವೀಧರರನ್ನು ನೇಮಿಸಿಕೊಳ್ಳಲಿವೆ. ಮಾರಾಟ ವಲಯದಲ್ಲಿ ಕೋಡ್‌ ಯಂಗ್‌ ಕಲ್ಟ್‌ಫಿಟ್‌, ಬಿಗ್‌ ಬಾಸ್ಕೆಟ್‌ ಮುಂತಾದ ಕಂಪೆನಿಗಳು ಪದವೀಧರರಿಗೆ ಉದ್ಯೋಗ ನೀಡಲಿವೆ. ಮೈನಿ ಪ್ರಿಸಿಷನ್ಸ್‌, ಬುಹ್ಲರ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌, ಕಂಪೆನಿಗಳು ಸೇರಿದಂತೆ ಮೆಕ್ಯಾನಿಕಲ್‌ ಎಂಜಿನಿಯರ್‌ಗಳಿಗೆ 50ಕ್ಕೂ ಹೆಚ್ಚಿನ ಕಂಪನಿಗಳು ಉದ್ಯೋಗಾವಕಾಶ ನೀಡಲಿವೆ. ಟಾಟಾ ಎಲೆಕ್ಟ್ರೋನಿಕ್ಸ್‌ ಮಹಿಳಾ ಮೆಕ್ಯಾನಿಕಲ್‌ ಪದವೀಧರರಿಗೆ ಉದ್ಯೋಗ ನೀಡಲಿದೆ. ಬೆಂಗಳೂರಿನ ಆ್ಯಂಥಮ್‌ ಬಯೋ, ಹೈದರಾಬಾದ್‌ನ ಎಂಎಸ್‌ಎನ್‌ ಲ್ಯಾಬೋರೇಟರೀಸ್‌ ಹಾಗೂ ಹಿಟಿರೋ ಲ್ಯಾಬ್ಸ್‌ ಎಂಎಸ್ಸಿ ಹಾಗೂ ಬಿಎಸ್ಸಿ ಪದವೀಧರರಿಗೆ ಉದ್ಯೋಗ ಕಲ್ಪಿಸಲಿವೆ ಎಂದು ಮೋಹನ್‌ ಆಳ್ವ ವಿವರಿಸಿದರು.

ಸನ್ಸೆರಾ ಇಂಜಿನಿಯರಿಂಗ್‌ ಲಿಮಿಟೆಡ್‌, ಸೆರಾಟಿಝಿಟ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌, ಸುಝ್ಲಾನ್‌ ಎನರ್ಜಿ ಲಿಮಿಟೆಡ್‌, ವೋಲ್ವೋ ಗ್ರೂಪ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌, ಮಾಂಡೋವಿ ಮೋಟಾರ್ಸ್‌, ಆಟೋಮ್ಯಾಟ್ರಿಕ್ಸ್‌, ಭಾರತ್‌ ಆಟೋ ಕಾ​ರ್ಸ್ ಮತ್ತು ಇನ್ನೂ ಅನೇಕ ಕಂಪೆನಿಗಳು ಐಟಿಐ ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ ಉದ್ಯೋಗ ನೀಡಲಿವೆ. ನರ್ಸಿಂಗ್‌ ಪದವೀಧರ ಅಭ್ಯರ್ಥಿಗಳಿಗೆ ಅಂತಾರಾಷ್ಟ್ರೀಯ ವೈದ್ಯಕೀಯ ಸಂಸ್ಥೆಗಳಿಗೆ ಅಧೀನ ಹೊಂದಿರುವ ಸಕ್ರಾ ವರ್ಲ್ಡ್‌ ಹಾಸ್ಪಿಟಲ್‌, ಫೋರ್ಟಿಸ್‌ ಹಾಗೂ ಸೈಂಟ್‌ ಜಾನ್ಸ್‌ ಹಾಗೂ ಇನ್ನಿತರ ಪ್ರಮುಖ ಆಸ್ಪತ್ರೆಗಳಾದ ಅಪೊಲೊ ಹೋಮ್‌ ಕೇರ್‌, ಇಂದಿರಾ ಹಾಸ್ಪಿಟಲ್‌, ನೇಟಸ್‌ ಹಾಸ್ಪಿಟಲ್ಸ್‌ ಉದ್ಯೋಗ ನೀಡಲಿವೆ ಎಂದರು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ವ್ಯವಸ್ಥಾಪಕ ಟ್ರಸ್ಟಿ ವಿವೇಕ ಆಳ್ವ, ತರಬೇತಿ ಹಾಗೂ ನೇಮಕಾತಿ ವಿಭಾಗ ಮುಖ್ಯಸ್ಥೆ ರಂಜಿತಾ, ಆಳ್ವಾಸ್‌ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರಸಾದ ಶೆಟ್ಟಿ ಇದ್ದರು.

--------ಉಚಿತ ಆನ್‌ಲೈನ್‌ ನೋಂದಣಿಹೊರ ಜಿಲ್ಲೆಗಳಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ಜುಲೈ 31ರಿಂದ ಕ್ಯಾಂಪಸ್‌ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಐಟಿಐ ಅಭ್ಯರ್ಥಿಗಳಿಗೆ ಬಸ್‌ ಸೌಕರ್ಯವಿದೆ. ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಕಂಪನಿಗಳ ವಿವರ ಹಾಗೂ ನವೀಕೃತ ಮಾಹಿತಿಗಳನ್ನು ಅಧಿಕೃತ ವೆಬ್‌ಸೈಟ್‌ www.alvaspragati.com ನಲ್ಲಿ ಪ್ರಕಟಿಸಲಾಗಿದೆ. ಆಳ್ವಾಸ್‌ ಪ್ರಗತಿಯಲ್ಲಿ ಭಾಗವಹಿಸುವ ಎಲ್ಲ ಅಭ್ಯರ್ಥಿಗಳು ಈ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಉಚಿತ ಆನ್‌ಲೈನ್‌ ನೋಂದಣಿ ಮಾಡಿಕೊಳ್ಳಬೇಕು. ಉದ್ಯೋಗ ನೀಡುವ ಕಂಪೆನಿಗಳ ಮಾಹಿತಿಯೂ ಈ ವೆಬ್‌ಸೈಟ್‌ನಲ್ಲಿ ಇರಲಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂ. 9741440490, 9611750531, 7975223865, ಕಂಪನಿಗಳ ನೊಂದಣಿ ಹಾಗೂ ಇತರ ಮಾಹಿತಿಗೆ ದೂ 9731953123 ಸಂಪರ್ಕಿಸಬಹುದು.ಅಗತ್ಯ ದಾಖಲೆ: 5-10 ಪಾಸ್‌ಪೋರ್ಟ್‌ ಸೈಜ್‌ನ ಭಾವಚಿತ್ರಗಳು, ಸಂಪೂರ್ಣ ಶೈಕ್ಷಣಿಕ ಮಾಹಿತಿಗಳನ್ನೊಳಗೊಂಡ ರೆಸ್ಯೂಮ್‌ (8-10 ಪ್ರತಿಗಳು), ಅಂಕ ಪಟ್ಟಿಗಳು, ಝೆರಾಕ್ಸ್‌ ಪ್ರತಿ, ಆನ್‌ಲೈನ್‌ ರಿಜಿಸ್ಟ್ರೇಶನ್‌ ನಂಬರ್‌, ಐಡಿ ಇರಬೇಕು. ಅಭ್ಯರ್ಥಿಗಳು ಉದ್ಯೋಗ ಮೇಳದಂದು ಬೆಳಗ್ಗೆ 8 ಗಂಟೆಗೆ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಹಾಜರಿರಬೇಕು ಎಂದು ಮೋಹನ ಆಳ್ವ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ