ಆಳ್ವಾಸ್‌ ಸ್ವಾಯತ್ತ ಕಾಲೇಜ್‌: ವಿಶ್ವ ಕಾವ್ಯ ದಿನಾಚರಣೆ

KannadaprabhaNewsNetwork |  
Published : Mar 21, 2025, 12:30 AM IST
32 | Kannada Prabha

ಸಾರಾಂಶ

ಮೂಡುಬಿದಿರೆ ವಿದ್ಯಾಗಿರಿಯ ಆಳ್ವಾಸ್ ಸ್ವಾಯತ್ತ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ಇಂಗ್ಲಿಷ್ ವಿಭಾಗದ ಗ್ಲಿಸನ್ ಸಂಘದ ವತಿಯಿಂದ ವಿಶ್ವ ಕಾವ್ಯ ದಿನ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಇಲ್ಲಿನ ಆಳ್ವಾಸ್ ಸ್ವಾಯತ್ತ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ಇಂಗ್ಲಿಷ್ ವಿಭಾಗದ ಗ್ಲಿಸನ್ ಸಂಘದ ವತಿಯಿಂದ ವಿಶ್ವ ಕಾವ್ಯ ದಿನ ಆಚರಿಸಲಾಯಿತು.

ಉಡುಪಿ ಶ್ರೀ ಅದಮಾರು ಮಠದ ಶಿಕ್ಷಣ ಸಮೂಹಗಳ ಉಪ ಆಡಳಿತಾಧಿಕಾರಿ ಪುಂಡರಿಕಾಕ್ಷ ಕೊಡಂಚ ಮಾತನಾಡಿ, ಕಾವ್ಯವು ನಮ್ಮ ಸಂಸ್ಕೃತಿಯ ಮಹತ್ವಪೂರ್ಣ ಅಂಗ. ಆ ಮೂಲಕ ನಮ್ಮ ಭಾವನೆ ಹಾಗೂ ಅನುಭವಗಳನ್ನು ವ್ಯಕ್ತಪಡಿಸಲು ಸಹಕಾರಿಯಾಗಿದೆ. ಕಾವ್ಯ ದಿನ ಆಚರಿಸುವುದರ ಮೂಲಕ ಮಹಾನ್ ಕವಿಗಳ ಕೊಡುಗೆಗಳನ್ನು ಗೌರವಿಸುವುದರ ಜೊತೆಗೆ ಹೊಸ ಬರಹಗಾರರಿಗೆ ಪ್ರೇರಣೆಯಾಗಲು ಸಹಾಯ ಮಾಡುತ್ತದೆ ಎಂದರು.

ತಾರ್ಕಿಕವಾಗಿ ಯೋಚಿಸಿ ಮತ್ತು ಸಾಮಾನ್ಯ ಜ್ಞಾನವನ್ನು ಬಳಸಿದರೆ ಯಾರೂ ಬದುಕಿನಲ್ಲಿ ಪ್ರಮಾದವನ್ನೆಸಗಲಾರರು. ತಾರ್ಕಿಕ ಯೋಚನೆಯುಳ್ಳ ವ್ಯಕ್ತಿಗೆ ಅವಕಾಶಗಳು ವಿಫುಲವಾಗಿರುತ್ತವೆ ಎಂದರು. ಸುಂದರವಾದ ಭೂಮಿಯನ್ನು ಉಳಿಸಬೇಕು. ಅದು ನಮ್ಮ ಆಸೆಗಳನ್ನು ಪೂರೈಸ ಬಲ್ಲದೇ ಹೊರತು, ನಮ್ಮ ದುರಾಸೆಯನ್ನಲ್ಲ ಎಂದರು.

ನಂತರ ಗ್ಲಿಸನ್ ಸಂಘದ ವತಿಯಿಂದ ಆಯೋಜಿಸಲಾದ ಕಾವ್ಯ ವಾಚನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಿಎಸ್ಸಿಯ ಮೇಘಾ ಡಿವಿ ಪ್ರಥಮ ಸ್ಥಾನ ಪಡೆದರೆ, ಎಫ್‌ಎನ್ಡಿಯ ಪ್ರೇರಣಾ ಜೈನ್ ದ್ವಿತೀಯ, ಬಿಎಯ ಸಮೀಕ್ಷಾ ರಾವ್ ತೃತೀಯ ಸ್ಥಾನ ಪಡೆದರು.

ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಚಾರ್ಯ ಡಾ. ಕುರಿಯನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ, ಮಾನವಿಕ ವಿಭಾಗದ ಮುಖ್ಯಸ್ಥೆ ಸಂಧ್ಯಾ ಕೆ.ಎಸ್, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಮಚೇಂದ್ರ ಬೆಲ್ಕಿ, ಗ್ಲಿಸನ್ ವೇದಿಕೆಯ ಸಂಯೋಜಕ ಹರ್ಷಿಣಿ ಪಿಂಟೋ ಹಾಗೂ ಸುಮಂತ್ ಇದ್ದರು.

ಶ್ರಾವ್ಯ ಶೆಟ್ಟಿ ಸ್ವಾಗತಿಸಿದರು. ದಿಶಾ ಕೋಟ್ಯಾನ್ ವಂದಿಸಿದರು. ಸಮೀಕ್ಷಾ ರಾವ್ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದ 13 ಜಿಲ್ಲೆಗಳಲ್ಲಿ ಬೇಸಿಗೆ ಮಳೆ
ಕನ್ನಡಿಗ ಅಮರೇಶ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ