ಕನ್ನಡಪ್ರಭ ವಾರ್ತೆ ಮಂಗಳೂರು
ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಐಟಿ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿವೆ. ಕರ್ನಾಟಕದವರು ಮಾತ್ರವಲ್ಲ ಹೊರ ರಾಜ್ಯದವರೂ ಭಾಗವಹಿಸಬಹುದು. ಕಳೆದ 13 ಆಳ್ವಾಸ್ ಪ್ರಗತಿ ಹಾಗೂ ಉದ್ಯೋಗ ಮೇಳಗಳಲ್ಲಿ ಒಟ್ಟು 31,896 ಮಂದಿಗೆ ಉದ್ಯೋಗಾವಕಾಶ ನೀಡಲಾಗಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ತನ್ನ ಸಿಎಸ್‌ಆರ್ ಚಟುವಟಿಕೆಯಡಿ ಉದ್ಯೋಗ ಮೇಳವನ್ನು ಉಚಿತವಾಗಿಯೇ ಆಯೋಜಿಸಿದ್ದು, ನೇಮಕಾತಿ ನಡೆಸುವ ಕಂಪನಿಗಳಿಗೂ ಇದು ಉಚಿತವಾಗಿದೆ ಎಂದರು.
ಜೂ.7ರಂದು ಬೆಳಗ್ಗೆ 9.30ಕ್ಕೆ ಎಂಆರ್‌ಜಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಶೆಟ್ಟಿ ಉದ್ಘಾಟಿಸಲಿದ್ದು, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸುವರು. ಅವಿಭಜಿತ ದ.ಕ.ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಭಾಗವಹಿಸುವರು. ಈ ಸಂದರ್ಭ ಗ್ಲೋಟೆಕ್ ಟೆಕ್ನಾಲಜೀಸ್ ಅಧ್ಯಕ್ಷೆ ವಿದ್ಯಾ ರವಿಚಂದ್ರನ್, ನೀವಿಯಸ್ ಸೊಲ್ಯೂಷನ್ಸ್ ಸಿಇಒ ಸುಯೋಗ್ ಶೆಟ್ಟಿ, ಇಜಿ ಇಂಡಿಯಾ ಲಿ. ಸಿಇಒ ಆನಂದ್ ಫರ್ನಾಂಡಿಸ್, ಬಿಪಿಎಂ ಆಪರೇಷನ್ಸ್ ಇನ್ಫೋಸಿಸ್ ಮುಖ್ಯಸ್ಥ ಲಲಿತ್ ರೈ, ರೋಬೋ ಸಾಫ್ಟ್ ಸಂಸ್ಥಾಪಕ ರೋಹಿತ್ ಭಟ್, ಜುಗೊ ಸ್ಟುಡಿಯೋಸ್ ಲಿ. ಉಪಾಧ್ಯಕ್ಷ ಅಭಿಜಿತ್ ಶೆಟ್ಟಿ ಇವರನ್ನು ಸನ್ಮಾನಿಸಲಾಗುವುದು ಎಂದರು.ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಎಂಜಿನಿಯರಿಂಗ್, ಕಲೆ, ವಾಣಿಜ್ಯ ಮತ್ತು ನಿರ್ವಹಣೆ, ವಿಜ್ಞಾನ, ನರ್ಸಿಂಗ್ ಜತೆಗೆ ಐಟಿಐ, ಡಿಪ್ಲೊಮಾ, ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ, ಇತರೆ ಅರ್ಹ ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಅಂತಿಮ ಸೆಮಿಸ್ಟರ್ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಅನುಭವಿ ವಿದ್ಯಾರ್ಥಿಗಳೂ ಈ ಅವಕಾಶ ಬಳಸಿಕೊಳ್ಳಬಹುದಾಗಿದೆ ಎಂದರು.ಎಲ್ಲೆಲ್ಲಿ ಉದ್ಯೋಗಾವಕಾಶ?:
ಆಳ್ವಾಸ್ ಪ್ರಗತಿ ೨೦೨೪ರ ಸವಿವರ ಮಾಹಿತಿಗಾಗಿ ವೆಬ್‌ಸೈಟ್-www.alvaspragati.com ಗೆ ಭೇಟಿ ನೀಡಬಹುದು. ಆಳ್ವಾಸ್ ಪ್ರಗತಿಯ ಎರಡು ದಿನಗಳೂ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆಳ್ವಾಸ್ ಪ್ರತಿಷ್ಠಾನದ ತರಬೇತಿ ಮತ್ತು ನಿಯೋಜನೆ ಮುಖ್ಯಸ್ಥ ಸುಶಾಂತ್ ಅನಿಲ್ ಲೋಬೋ, ಆಳ್ವಾಸ್ ಕಾಲೇಜು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ಆಳ್ವಾಸ್ ಪ್ರಗತಿಯ ಉತ್ಪಾದನಾ ವಲಯ ಮುಖ್ಯಸ್ಥ ಡಾ.ಕುಮಾರಸ್ವಾಮಿ ಇದ್ದರು. ಬಾಕ್ಸ್‌ಗಳು---
http://alvaspragati.com/CandidateRegistrationPageಐಟಿಐ, ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಮತ್ತು ಅದಕ್ಕಿಂತ ಕಡಿಮೆ ವಿದ್ಯಾರ್ಹತೆಯ ಅಭ್ಯರ್ಥಿಗಳನ್ನು ಹೊರತು ಪಡಿಸಿ, ಎಲ್ಲರಿಗೂ ನೋಂದಣಿ ಕಡ್ಡಾಯವಾಗಿದೆ. ಆಳ್ವಾಸ್ ಪ್ರಗತಿ ೨೦೨೪ರ ನೋಂದಣಿ ಮತ್ತು ಪಾಲ್ಗೊಳ್ಳುವ ಕಂಪೆನಿಗಳ ಮಾಹಿತಿ ಹಾಗೂ ವಿವರಕ್ಕಾಗಿ www.alvaspragati.com ಭೇಟಿ ನೀಡಬಹುದು.