ಗ್ರಾಮೀಣರ ಆರೋಗ್ಯ ಸುಧಾರಣೆಗೆ ಸದಾ ಬದ್ಧ: ಶಶಿಧರ್‌

KannadaprabhaNewsNetwork |  
Published : Feb 07, 2024, 01:47 AM IST
ಗ್ರಾಮೀಣರ ಆರೋಗ್ಯ ಸುಧಾರಣೆಗೆ ಬದ್ದವಾಗಿರುವ ನಮ್ಮ ಆರೋಗ್ಯ ಕೇಂದ್ರಗಳು : ಸಿ.ಬಿ. ಶಶಿಧರ್ | Kannada Prabha

ಸಾರಾಂಶ

ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಉಚಿತ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ನಮ್ಮ ಆರೋಗ್ಯ ಕೇಂದ್ರಗಳು ಪೂರಕವಾಗಿವೆ ಎಂದು ,ಜನಸ್ಪಂದನ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಟೂಡಾ ಶಶಿಧರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಉಚಿತ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ನಮ್ಮ ಆರೋಗ್ಯ ಕೇಂದ್ರಗಳು ಪೂರಕವಾಗಿದ್ದು, ಈ ಹಿನ್ನೆಲೆ ನಮ್ಮ ಆರೋಗ್ಯ ಕೇಂದ್ರದ ಪ್ರಥಮ ವರ್ಷ ಪೂರೈಸಿರುವುದು ನನಗೆ ಬಹಳ ಹೆಮ್ಮೆಯಿದೆ ಎಂದು ನಮ್ಮ ಆರೋಗ್ಯ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಹಾಗೂ ಜನಸ್ಪಂದನ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಟೂಡಾ ಶಶಿಧರ್ ತಿಳಿಸಿದರು.

ತಾಲೂಕಿನ ಕೆ.ಬಿ.ಕ್ರಾಸ್ ಮತ್ತು ಹಾಲ್ಕುರಿಕೆ ಗ್ರಾಮಗಳಲ್ಲಿರುವ ನಮ್ಮ ಆರೋಗ್ಯ ಕೇಂದ್ರದ ವಾರ್ಷಿಕ ಸಂಭ್ರಮಾಚರಣೆ ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಮಹಿಳೆಯರಿಗೆ ಉಚಿತ ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವ ನಿಟ್ಟಿನಲ್ಲಿ ನಮ್ಮ ಆರೋಗ್ಯ ಕೇಂದ್ರಗಳು ತನ್ನದೇಯಾದ ವಿಶೇಷತೆ ಹೊಂದಿದ್ದು, ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವುದು ನಮ್ಮ ಸಂಸ್ಥೆಯ ಸೇವಾಪರತೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ. ಆರೋಗ್ಯ ಸಖಿಯರು ಮಹಿಳೆಯರ ಮನೆ ಮನೆಗೂ ಭೇಟಿ ನೀಡಿ, ಉಚಿತ ಆರೋಗ್ಯ ಸಲಹೆಗಳು ಮತ್ತು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಉಚಿತವಾಗಿ ಬಿಪಿ ಮತ್ತು ರಕ್ತ ತಪಾಸಣೆ ಹಾಗೂ ಇನ್ನಿತರ ವೈದ್ಯಕೀಯ ನೆರವು ಸಹ ದೊರೆಯುತ್ತಿದೆ. ವೈದ್ಯಕೀಯ ಸೌಲಭ್ಯಗಳ ತಂತ್ರಜ್ಞಾನ, ಅನುಭವಿ ವೈದ್ಯರಿಂದ ಆಪ್ತ ಸಮಾಲೋಚನೆ, ಆಧುನಿಕ ಪ್ರಾಥಮಿಕ ಚಿಕಿತ್ಸಾ ವಿಧಾನಗಳು, ಟೆಲಿಮೆಡಿಸನ್ ಜೊತೆಗೆ ಸಂಪರ್ಕ ಹೊಂದಿದ್ದು, ಜನಸಮೂಹದೊಂದಿಗೆ ಸಕ್ರಿಯ ಸಹಭಾಗಿತ್ವ ಹೊಂದಿದೆ. ಹತ್ತು ಮಂದಿ ಆರೋಗ್ಯ ಸಖಿಯರನ್ನು ವಿಶೇಷವಾಗಿ ನೇಮಿಸಿಕೊಳ್ಳಲಾಗಿದೆ. ೧೨೦೦ಕ್ಕಿಂತ ಹೆಚ್ಚಿನ ರೋಗಿಗಳು ನಮ್ಮ ಆರೋಗ್ಯ ಕೇಂದ್ರದ ಸೇವೆಗಳ ಫಲಾನುಭವಿಗಳಾಗಿದ್ದಾರೆ. ಸಂಸ್ಥೆಯ ಎಲ್ಲಾ ಸಿಬ್ಬಂದಿ ಆರೋಗ್ಯ ಜಾಗೃತಿಗಾಗಿ ಸದಾ ಕ್ರಿಯಾಶೀಲವಾಗಿ ಶ್ರಮಿಸುತ್ತಿದ್ದಾರೆ. ತಿಪಟೂರು ಗ್ರಾಮೀಣ ಸಮುದಾಯದೊಂದಿಗೆ ತನ್ನದೇಯಾದ ಅಸ್ತಿತ್ವ ಸೃಷ್ಟಿಸಿಕೊಂಡಿದ್ದು, ಖಾಸಗಿ ವಲಯದ ನಮ್ಮ ಆರೋಗ್ಯ ಕೇಂದ್ರವು ಯಶಸ್ವಿ ಆರೋಗ್ಯ ಶಿಬಿರಗಳನ್ನು ನಡೆಸುತ್ತಾ, ಒಂದು ವರ್ಷದ ಗುರುತರವಾದ ಹೆಜ್ಜೆಗಳನ್ನಿಡುತ್ತಾ ‘ಗುಣಮಟ್ಟದ ಆರೋಗ್ಯದ ರಕ್ಷಣೆ-ನಮ್ಮ ಹೊಣೆ’ ಎಂಬ ಧ್ಯೇಯದೊಂದಿಗೆ ತಿಪಟೂರಿನಲ್ಲಿ ತನ್ನದೇ ಆದ ಅಸ್ಮಿತೆ ಹೊಂದಿದೆ ಎಂದರು.

ನಮ್ಮ ಆರೋಗ್ಯ ಕೇಂದ್ರದ ಸಿಇಒ ಹಾಗೂ ವ್ಯವಸ್ಥಾಪಕಿ ಡಾ.ಹೇಮಾ ದಿವಾಕರ್, ಗ್ರಾಮೀಣ ಸಮುದಾಯಕ್ಕೆ ಆರೋಗ್ಯ ಸೇವೆಗಳು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ದೊರಕುತ್ತಿರುವುದು ನಮ್ಮ ಆರೋಗ್ಯ ಸಖಿಯರ ಸೇವಾ ಮತ್ತು ಸಮರ್ಪಣಾ ಮನೋಭಾವದಿಂದ ಮಾತ್ರ ಸಾಧ್ಯವಾಗಿದೆ ಎಂದರು.

ಸಹ ಸಂಸ್ಥಾಪಕ ಎಂ.ಜೆ ಶ್ರೀಕಾಂತ್‌ ರವರು, ಗ್ರಾಮ ಸಮುದಾಯದ ಹೆಚ್ಚಿನ ಬೆಂಬಲ ಸಿಗುತ್ತಿರುವುದಕ್ಕೆ ನಾನು ಎಂದಿಗೂ ಆಭಾರಿಯಾಗಿದ್ದೇನೆ. ನಮ್ಮ ಗ್ರಾಮೀಣ ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದೇ ನಮ್ಮ ಮುಂದಿನ ಗುರಿ ಎಂದು ತಿಳಿಸಿದರು.

ಆರೋಗ್ಯ ಕೇಂದ್ರದ ಪ್ರಥಮ ವರ್ಷಾಚರಣೆ ಹಿನ್ನೆಲೆ ವಿಶೇಷ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು. ಡಾ.ಹೇಮಾ ದಿವಾಕರ್ ಹಾಗೂ ನುರಿತ ವೈದ್ಯರ ನೇತೃತ್ವದಲ್ಲಿ ಆರೋಗ್ಯ ಶಿಬಿರದಲ್ಲಿ ಹೆಚ್ಚಾಗಿ ಮಹಿಳೆಯರು ಅಗತ್ಯ ವೈದ್ಯಕೀಯ ಸೇವೆ ಮತ್ತು ಸಮಾಲೋಚನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!