ಬಸವಕಲ್ಯಾಣ ಕ್ಷೇತ್ರದ ಕೊಹಿನೂರ ಗ್ರಾಮದಲ್ಲಿ ಮಾಜಿ ಎಂಎಲ್ಸಿ ವಿಜಯಸಿಂಗ್ ಅವರು ಶಿವಭಕ್ತ ಬೇಡರ ಕಣ್ಣಪ್ಪ ಹಾಗೂ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಬಸವಕಲ್ಯಾಣ: ಬಸವಕಲ್ಯಾಣ ಕ್ಷೇತ್ರದ ಕೊಹಿನೂರ ಗ್ರಾಮದಲ್ಲಿ ಮಾಜಿ ಎಂಎಲ್ಸಿ ವಿಜಯಸಿಂಗ್ ಅವರು ಶಿವಭಕ್ತ ಬೇಡರ ಕಣ್ಣಪ್ಪ ಹಾಗೂ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಭಕ್ತ ಕಣ್ಣಪ್ಪ ಮತ್ತು ಮಹರ್ಷಿ ವಾಲ್ಮೀಕಿ ಅವರ ಸುಂದರ ಮೂರ್ತಿಗಳನ್ನು ಅನಾವರಣಗೊಳಿಸಿ, ಮಾತನಾಡಿದ ಅವರು, ಭಕ್ತ ಕಣ್ಣಪ್ಪನವರ ಅಚಲ ಭಕ್ತಿ ಮತ್ತು ಮಹರ್ಷಿ ವಾಲ್ಮೀಕಿಯವರ ತಪಸ್ಸು ಇಂದಿನ ಯುವ ಪೀಳಿಗೆಗೆ ದಾರಿದೀಪ. ಇಂತಹ ಮಹಾನ್ ಚೇತನಗಳ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೊಹಿನೂರ ಗ್ರಾಮದ ಅಭಿವೃದ್ಧಿಗೆ ನಾನು ಸದಾ ಬದ್ಧ ಎಂದು ಹೇಳಿದರು.
ಜಗದ್ಗುರು ಡಾ. ಪ್ರಸನ್ನಾನಂದಪುರಿ ಮಹಾಸ್ವಾಮೀಜಿ ಹಾಗೂ ಗೋಣಿರುದ್ರ ಮಹಾಸ್ವಾಮೀಜಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಆನಂದ ಪಾಟೀಲ್, ದೇವಿದಾಸ್ ಗರುಡ, ದೀಲಿಪ್ ಪಾಟೀಲ್, ರತೀಕಾಂತ, ಮಹಾಲಪ್ಪ ಪೂಜಾರಿ, ದಶರಥ ಜಮಾದಾರ, ಶರಣು ಭೂತೆ, ಮನೋಜ ಮಾಶೆಟ್ಟಿ, ಬಸವರಾಜ ಬಿರಾದಾರ ಸೇರಿದಂತೆ ನೂರಾರು ಗ್ರಾಮಸ್ಥರು, ಹಿರಿಯರು, ಯುವಕರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.