ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್) ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದಡಿಯಲ್ಲಿ ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಶ್ರೀ ವಿನಾಯಕ ಎಜುಕೇಷನ್ ಸೊಸೈಟಿ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಆಲ್ಜೈಮರ್ (ಮರೆಗುಳಿತನ) ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಲ್ಜೈಮರ್ ಅಥವಾ ಡಿಮೆನ್ಸಿಯ ಎಂದರೆ ಆಡು ಭಾಷೆಯಲ್ಲಿ ಮರೆಗುಳಿ ಕಾಯಿಲೆ ಎಂದರ್ಥ. ಮರೆಗುಳಿ ಕಾಯಿಲೆಯು ೬೦ ವರ್ಷ ಮೇಲ್ಪಟ್ಟವರಲ್ಲಿ ಕಂಡು ಬರುತ್ತದೆ. ಇದನ್ನು ಇತ್ತೀಚಿನ ಸನ್ನಿವೇಶಳಲ್ಲಿ ಆಹಾರ ಸೇವನೆ, ಹಾವಭಾವ ಚಟುವಟಿಕೆ ರಹಿತ ಜೀವನ ಇತ್ಯಾದಿ ಕಾರಣದಿಂದ ೬೦ ರಿಂದ ೭೦ ವರ್ಷದೊಳಗಿನ ವಯೋವೃದ್ಧರಲ್ಲಿ ಆಲ್ಜೈಮರ್ ಕಾಯಿಲೆ ಕಂಡು ಬರುತ್ತದೆ ಎಂದರು.ವಯಸ್ಸಾದವರಲ್ಲಿ ಚರ್ಮ ಸುಕ್ಕುಗಟ್ಟುವಿಕೆ, ತೊದಲು ಮಾತು, ಜ್ಞಾಪಕ ಶಕ್ತಿ ಕಡಿಮೆಯಾಗುವುದು, ದಾರಿ ತಪ್ಪುವುದು, ನಡವಳಿಕೆಯಲ್ಲಿ ಬದಲಾವಣೆ, ಆಹಾರ ಸೇವನೆ, ಉಡುಪುಗಳನ್ನು ಧರಿಸುವುದು ಗೊತ್ತಾಗದಿರುವುದು, ಹಾಸಿಗೆ ಹಿಡಿಯುವುದು, ಮಾನಸಿಕವಾಗಿ ಕುಗ್ಗುವಿಕೆ ಹಾಗೂ ಮಾನಸಿಕ ಅಸ್ವಸ್ಥತೆಗಳು ಇತ್ಯಾದಿ ಸಮಸ್ಯೆಗಳು ಮರೆಗುಳಿ ಕಾಯಿಲೆಯ ಲಕ್ಷಣಗಳಾಗಿದ್ದು, ಈ ಕಾಯಿಲೆಯಿಂದ ಬೇಗ ಸಾವು ಸಂಭವಿಸುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಮರೆಗುಳಿ ಕಾಯಿಲೆಯನ್ನು ತಡೆಗಟ್ಟಲು ದಿನನಿತ್ಯ ಚಟುವಟಿಕೆಯಿಂದ ಇರಲು ಅವಕಾಶ ಕಲ್ಪಿಸಬೇಕು. ವ್ಯಾಯಾಮ, ಔಷಧ ಸೇವನೆ, ಉತ್ತಮ ಪರಿಸರ ಹಾಗೂ ಆರೈಕೆದಾರರ ಬೆಂಬಲದಿಂದ ವಯಸ್ಸಾದವರ ಆರೋಗ್ಯವನ್ನು ಕಾಪಾಡಬಹುದು. ಅವರಿಗೆ ಸೂಕ್ತ ಔಷದೋಪಚಾರ ಹಾಗೂ ಪುನರ್ ವಸತಿ ಕಲ್ಪಿಸುವುದರಿಂದ ಈ ಖಾಯಿಲೆಯಿಂದ ಪಾರುಮಾಡಬಹುದು ಎಂದು ಡಾ.ಎಸ್.ಚಿದಂಬರ ಅವರು ತಿಳಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಹಾಜರಿದ್ದ ಹಿರಿಯ ನಾಗರಿಕರ ಜೊತೆ ಸಂವಾದ ನಡೆಸಿ ಸಮಸ್ಯೆಗಳನ್ನು ಆಲಿಸಿ ಸಲಹೆ ನೀಡಿದರು.ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಆರ್.ವೆಂಕಟೇಶ್, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್, ಕಾರ್ಯಕ್ರಮ ಸಂಯೋಜಕರಾದ ನಾಗೇಂದ್ರ, ಫಿಜಿಯೋಥೆರಪಿಸ್ಟ್ ಸುಪ್ರೀತ್, ಮನೋರೋಗ ತಜ್ಞೆ ದೀಪಾ, ಸಾನಿಯಾಖಾನಂ, ಯೋಜನಾ ಸಂಯೋಜಕ ನಿಂಗರಾಜು ಕಾರ್ಯಕ್ರಮದಲ್ಲಿ ಇದ್ದರು.