ಅಮರ್ಥ’ ಸಿನಿಮಾ ರಾಜ್ಯಾದ್ಯಂತ ತೆರೆಗೆ

KannadaprabhaNewsNetwork |  
Published : Sep 20, 2026, 04:00 AM IST
‘ಅಮರ್ಥ’ ಸಿನೆಮಾ ಬಿಡುಗಡೆ ಕಾರ್ಯಕ್ರಮ ನಡೆಯಿತು | Kannada Prabha

ಸಾರಾಂಶ

ಪಂಚರಂಗಿ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಮತ್ತು ಗುರು ಹೆಗ್ಡೆ ನಿರ್ಮಿಸಿರುವ ‘ಅಮರ್ಥ’ ಸಿನಿಮಾ ಭಾರತ್ ಮಾಲ್‌ನ ಭಾರತ್ ಸಿನಿಮಾಸ್‌ನಲ್ಲಿ ಬಿಡುಗಡೆಗೊಂಡಿತು.

ಮಂಗಳೂರು: ಪಂಚರಂಗಿ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಮತ್ತು ಗುರು ಹೆಗ್ಡೆ ನಿರ್ಮಿಸಿರುವ ‘ಅಮರ್ಥ’ ಸಿನಿಮಾ ಭಾರತ್ ಮಾಲ್‌ನ ಭಾರತ್ ಸಿನಿಮಾಸ್‌ನಲ್ಲಿ ಬಿಡುಗಡೆಗೊಂಡಿತು. ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಬಳಿಕ ಮಾತನಾಡಿದ ಉದ್ಯಮಿ ನಿರ್ಮಾಪಕ ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ, ಕನ್ನಡದಲ್ಲಿ ಒಂದು ಒಳ್ಳೆಯ ಸಿನಿಮಾ ನಿರ್ಮಿಸ ಬೇಕೆಂದಿದ್ದೆ. ಅದು ಅಮರ್ಥ ಸಿನಿಮಾದ ಮೂಲಕ ಈಡೇರಿದೆ ಎಂದರು. ಉದ್ಯಮಿ ವಕ್ವಾಡಿ ಪ್ರವೀಣ್ ಶೆಟ್ಟಿ ಮಾತನಾಡಿ, ಕನ್ನಡದಲ್ಲಿ ಒಳ್ಳೆಯ ಸದಭಿರುಚಿಯ ಸಿನಿಮಾಗಳು ಬರುತ್ತದೆ. ಇಂತಹ ಸಿನಿಮಾಗಳನ್ನು ಪ್ರೇಕ್ಷಕರು ಪ್ರೋತ್ಸಾಹಿಸ ಬೇಕೆಂದರು. ಉದ್ಯಮಿ ಬರೋಡ ಶಶಿಧರ ಶೆಟ್ಟಿ ಮಾತನಾಡಿ, ಕನ್ಯಾನ ಸದಾಶಿವ ಶೆಟ್ಟಿ ಬ್ಯಾನರ್‌ನಿಂದ ಇನ್ನಷ್ಟು ಸಿನಿಮಾಗಳು ತೆರೆಗೆ ಬರಲಿ ಎಂದರು.

ಪ್ರಮುಖರಾದ ಸತೀಶ್ ಶೆಟ್ಟಿ ಪಟ್ಲ, ಚಿತ್ತರಂಜನ್, ರವೀಂದ್ರನಾಥ ರೈ, ಬಾಲಕೃಷ್ಣ ಶೆಟ್ಟಿ, ಸ್ವರ್ಣಸುಂದರ್, ತಾರಾನಾಥ ಶೆಟ್ಟಿ, ಕೃಷ್ಣ ತಾರೆಮಾರ್, ಡಾ.ಮಮತಾ ಪಿ.ಶೆಟ್ಟಿ, ಮೋಹನ್ ಕೊಪ್ಪಲ, ಬಾಳ ಜಗನ್ನಾಥ ಶೆಟ್ಟಿ ಮತ್ತಿತರರು ಇದ್ದರು. ಸಾಹಿಲ್ ರೈ ನಿರ್ವಹಿಸಿದರು.

ಗುರು ಹೆಗ್ಡೆ ಮತ್ತು ವಿನಯ್ ಪ್ರೀತಂ ನಿರ್ದೇಶನದಲ್ಲಿ ಮೂಡಿಬಂದಿರುವ ಅಮರ್ಥ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ಸರ್ಜಾ, ಮಂಜುಭಾಷಿಣಿ, ನಿರ್ದೇಶಕ ಗುರು ಹೆಗ್ಡೆ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಜಾ ಸೇವಾ ಆಂದೋಲನದಲ್ಲಿ ಅವ್ಯವಸ್ಥೆ
ಮಕ್ಕಳ ಭವಿಷ್ಯ ರೂಪಿಸುವಲ್ಲಿ ಅಂಗನವಾಡಿಗಳ ಕೊಡುಗೆ ಅಪಾರ: ಯಶವಂತರಾಯಗೌಡ