ಮಂಡ್ಯ: ಅಭಿಮಾನಿಗಳ ಹೃದಯದಲ್ಲಿ ನಟ ಡಾ.ಅಂಬರೀಶ್ ಅವರು ಅಜರಾಮರರಾಗಿದ್ದಾರೆ ಎಂದು ಡಾ.ಅಂಬರೀಶ್ ಸಂಬಂಧಿ, ಚಿತ್ರನಟ ಧರ್ಮ ಹೇಳಿದರು.
ಅಂಬರೀಶ್ ನಮ್ಮ ಜೀವಕ್ಕೆ ಜೀವವಾಗಿದ್ದು, ಅಭಿಮಾನಿಗಳ ಹೃದಯದಲ್ಲಿ ಅಮರರಾಗಿರುವ ಅಂಬರೀಶ್ ಅವರು ನಮ್ಮನ್ನು ಅಗಲಿದ್ದಾರೆ ಎಂಬುದು ನಂಬಲು ಸಾಧ್ಯವಿಲ್ಲ, ಅಂಬರೀಶ್ ಅವರನ್ನು ಗ್ರಾಮದ ಅಭಿಮಾನಿಗಳು ಸ್ಮರಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಅಂಬಿ ಅಭಿಮಾನಿಯಾಗಿರುವ ವಿನಯ್ ಅವರು ಮುಂದಿನ ದಿನಗಳಲ್ಲಿ ಬಹು ಎತ್ತರಕ್ಕೆ ಬೆಳೆಯಲಿ. ಜನತೆಯ ಆಶೀರ್ವಾದ ಲಭಿಸಲಿ. ನಾವು ಅವರ ಬೆಂಬಲಕ್ಕೆ ಇರುತ್ತೇವೆ ಎಂದು ಹೇಳಿದರು.ಬಳಿಕ ಮಾತನಾಡಿದ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್, ಡಾ.ಅಂಬರೀಶ್ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವರು ನಾವು. ಧರ್ಮ ಅವರು ಥೇಟ್ ಅಂಬರೀಶ್ ಅವರನ್ನೇ ಹೋಲುತ್ತಾರೆ. ಅಂಬರೀಶ್ ಅವರು ಬಂದಂತೆ ಆಗಿದೆ. ಅಣಬರೀಶ್ ಅವರು ಅಭಿಮಾನಿಗಳ ಆರಾಧ್ಯ ದೈವ, ಅಭಿಮಾನಿಗಳ ಅಭಿಮಾನಿಯಾಗಿದ್ದಾರೆ ಎಂದು ನುಡಿದರು.