ಕನ್ನಡಪ್ರಭ ವಾರ್ತೆ ಮಂಡ್ಯ
ಈ ಸಂಬಂದ ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ರಾಜಕೀಯವಾಗಿ ಸುದ್ಧಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದೆ. ಅವರು ಡಿ.ಕೆ.ಶಿವಕುಮಾರ್ ಅವರನ್ನು ತೇಜೋವಧೆ ಮಾಡುವಂತೆ ಮಾತನಾಡಿದ್ದಕ್ಕೆ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದ್ದೆ. ಆದರೆ ಕದಬಳ್ಳಿಯ ರಂಗ ಎಂಬಾತ ನನ್ನ ಪಿಎ ನಂಬರ್‌ಗೆ ಕಾಲ್ ಮಾಡಿ ಗೌಡರ ಜೊತೆ ಮಾತನಾಡಬೇಕೆಂದು ಮನವಿ ಮಾಡಿದ್ದ. ಕುಮಾರಸ್ವಾಮಿ ಬಗ್ಗೆ ಮಾತನಾಡಿರುವುದರ ಬಗ್ಗೆ ಆಕ್ಷೇಪಿಸಿ, ನನ್ನನ್ನು ಪ್ರಚೋಧಿಸಲು ಪ್ರಯತ್ನಿಸಿದ್ದ. ಆತನ ವರ್ತನೆ ಗಮನಿಸಿ ನಾನು ಒಂದೆರಡು ಮಾತು ಬೈದು ಫೋನ್ ಇಟ್ಟಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಆತನೊಂದಿಗೆ ೨.೪೨ ನಿಮಿಷ ಅಷ್ಟೇ ಮಾತನಾಡಿದ್ದೆ. ಆದರೆ ಎಐ ತಂತ್ರಜ್ಞಾನ ಬಳಸಿ ಇಲ್ಲ ಸಲ್ಲದ ಮಾತುಕತೆ ನಡೆದಿದೆ ಎಂದು ೨೦ ನಿಮಿಷಗಳ ಆಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ನನ್ನ ತೇಜೋವಧೆಗೆ ಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.ನಾನು ಯಾವ ನಾಯಕರ ಬಗ್ಗೆಯೂ ಹಗುರವಾಗಿ ಮಾತನಾಡಿಲ್ಲ. ಇದೊಂದು ಸೃಷ್ಟಿ ಮಾಡಿರುವುದೇ ಹೊರತು ಸತ್ಯವಾದುದಲ್ಲ. ಈ ಬಗ್ಗೆ ನನ್ನ ಕಾನೂನು ಸಲಹಾ ತಂಡದ ಜೊತೆ ಚರ್ಚಿಸಿ ಸೈಬರ್ ಠಾಣೆಗೆ ದೂರು ನೀಡಿ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ನನ್ನ ಹೇಳಿಕೆಯಲ್ಲದಿದ್ದರೂ ಈ ಬೆಳವಣಿಗೆಯಿಂದ ಅಂಬರೀಶ್ ಅಭಿಮಾನಿಗಳಿಗೆ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.