ಆರೆಸ್ಸೆಸ್‌ಗೆ 100: ನಾಳೆ ಹಿಂದೂ ಸಮಾಜೋತ್ಸವ: ಸುಧಾಕರ್

KannadaprabhaNewsNetwork |  
Published : Jan 30, 2026, 01:30 AM IST
ಜಯಪುರದ ಪತ್ರಿಕಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಹಾಗೂ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ  | Kannada Prabha

ಸಾರಾಂಶ

ರಾಷ್ಟ್ರೀಯ ಸ್ವಯಂಸೇವಕ ಸಂಘವು ಪ್ರಾರಂಭವಾಗಿ ೧೦೦ ವರ್ಷ ಕಳೆದಿದ್ದು ಶತಮಾನೋತ್ಸವದ ಅಂಗವಾಗಿ ರಾಷ್ಟ್ರಾದ್ಯಂತ ೨,೫೦,೦೦೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ಹಿಂದೂ ಸಮಾಜೋತ್ಸವ ಆಯೋಜನೆ ಮಾಡಿದ್ದು, ಕೊಪ್ಪ ತಾಲೂಕು ಹಿಂದು ಸಮಾಜೋತ್ಸವ ಆಯೋಜನ ಸಮಿತಿಯಿಂದ ಮೇಗುಂದಾ ಹೋಬಳಿ ಕೇಂದ್ರ ಸ್ಥಾನ ಜಯಪುರದಲ್ಲಿ ಫೆಬ್ರುವರಿ 1ರಂದು ವಿಜೃಂಭಣೆಯಿಂದ ನಡೆಸಲಾಗುವುದು ಎಂದು ಮೇಗುಂದಾ ಹೋಬಳಿ ಆಯೋಜನ ಸಮಿತಿಯ ಸಂಯೋಜಕ ಸುಧಾಕರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊಪ್ಪ

ರಾಷ್ಟ್ರೀಯ ಸ್ವಯಂಸೇವಕ ಸಂಘವು ಪ್ರಾರಂಭವಾಗಿ ೧೦೦ ವರ್ಷ ಕಳೆದಿದ್ದು ಶತಮಾನೋತ್ಸವದ ಅಂಗವಾಗಿ ರಾಷ್ಟ್ರಾದ್ಯಂತ ೨,೫೦,೦೦೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ಹಿಂದೂ ಸಮಾಜೋತ್ಸವ ಆಯೋಜನೆ ಮಾಡಿದ್ದು, ಕೊಪ್ಪ ತಾಲೂಕು ಹಿಂದು ಸಮಾಜೋತ್ಸವ ಆಯೋಜನ ಸಮಿತಿಯಿಂದ ಮೇಗುಂದಾ ಹೋಬಳಿ ಕೇಂದ್ರ ಸ್ಥಾನ ಜಯಪುರದಲ್ಲಿ ಫೆಬ್ರುವರಿ 1ರಂದು ವಿಜೃಂಭಣೆಯಿಂದ ನಡೆಸಲಾಗುವುದು ಎಂದು ಮೇಗುಂದಾ ಹೋಬಳಿ ಆಯೋಜನ ಸಮಿತಿಯ ಸಂಯೋಜಕ ಸುಧಾಕರ್ ತಿಳಿಸಿದರು.

ಜಯಪುರದ ಪತ್ರಿಕಾ ಕಚೇರಿಯಲ್ಲಿ ಮಾಧ್ಯಮಗೋಷ್ಠಿ, ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿ, ನಮ್ಮೆಲ್ಲ ಹಿಂದುಗಳ ಹೆಮ್ಮೆಯ ಕಾರ್ಯಕ್ರಮ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ನೂರಾರು ಕಾರ್ಯಕರ್ತರು ಒಂದು ತಿಂಗಳಿಗೂ ಅಧಿಕ ದಿನಗಳಿಂದ ಕಾರ್ಯಕ್ರಮ ಯಶಸ್ವಿಗಾಗಿ ಶ್ರಮಿಸುತ್ತಿದ್ದಾರೆ. ಭಾನುವಾರ ಬೆಳಿಗ್ಗೆ ೯.೩೦ಕ್ಕೆ ಸರಿಯಾಗಿ ಜಯಪುರ ವರ್ತೆಕಲ್ ಮಹಾಗಣಪತಿ ದೇವಸ್ಥಾನದಿಂದ ೫೦೦ಕ್ಕೂ ಹೆಚ್ಚು ಮಾತೆಯರ ಪೂರ್ಣಕುಂಭ, ದೇಶಕ್ಕಾಗಿ ದುಡಿದ ಹಾಗೂ ಪ್ರಾಣ ತ್ಯಾಗ ಮಾಡಿದ ಮಹಾಪುರುಷರ ಸ್ತಬ್ಧ ಚಿತ್ರಗಳು, ಚಂಡೆವಾದನ, ಭಜನಾ ಕುಣಿತ ಹಾಗೂ ವಿವಿಧ ಕಲಾತಂಡಗಳ ಮುಖಾಂತರ ಶೋಭಾಯಾತ್ರೆಯು ಜಯಪುರದ ಮುಖ್ಯ ನಗರದಲ್ಲಿ ಸಾಗಿ ನಂತರ ಮಕ್ಕಿಕೊಪ್ಪದ ಜಯ ಪೂಜಾರಿಯವರ ಗದ್ದೆಯಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ಸಾನ್ನಿಧ್ಯವನ್ನು ಹರಿಹರಪುರದ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ವಹಿಸಿಕೊಳ್ಳಲಿದ್ದು, ದಿಕ್ಸೂಚಿ ಭಾಷಣವನ್ನು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ನಡೆಸಿಕೊಡಲಿದ್ದಾರೆ. ಆಗಮಿಸಿರುವ ಎಲ್ಲಾ ಸಮಾಜ ಬಾಂಧವರಿಗೆ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದರು.

ಜಯಪುರ ಮಂಡಲದ ಸಂಚಾಲಕ ಚಂದ್ರಶೇಖರ್ ಮಳಿಗೆ, ತಾಲೂಕು ಸಮಿತಿಯ ಉಪಾಧ್ಯಕ್ಷ ರಂಗನಾಥ್ ರಾಂಪಲ್, ಸಹಸಂಯೋಜಕರಾದ ಬೋಜ ಶೆಟ್ಟಿ, ಹೋಬಳಿ ಸಹಸಂಯೋಜಕ ಗಜೇಂದ್ರ, ಪ್ರಚಾರ ಸಮಿತಿಯ ಮುಖ್ಯಸ್ಥರಾದ ಜಯಂತಿ ನಾಗರಾಜ್, ಮಂಡಲ ಸಮಿತಿಯ ಸದಸ್ಯರಾದ ಪ್ರಭಾಕರ್, ಅನಂತ ಹೆಬ್ಬಾರ್, ಮಹಿಳಾ ಸಮಿತಿಯ ಮುಖ್ಯಸ್ಥರಾದ ಸುನಿತಾ ಶ್ರೀನಿವಾಸ್, ಮಂಡಲ ಸಹಸಂಯೋಜಕ ಸಂತೋಷ್, ಸದಸ್ಯರಾದ ಶೇಖರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನಿತ ಪಿಯು ಕಾಲೇಜು ನಿವೃತ್ತರ ಗಳಿಕೆ ರಜೆಗೆ 30 ಕೋಟಿ ರು.
ಮೇಲ್ಮನೆಗೆ ಪತ್ರಕರ್ತರ ಕರೆತರಲು ಎಂಎಲ್‌ಸಿ ಆಫರ್‌!