ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಮತ್ತು ಆಸ್ಪತ್ರೆಯ ಮಕ್ಕಳ ಆಂಕೊಲಾಜಿ ವಿಭಾಗವು ಮಕ್ಕಳ ಮೂಳೆ ಮಜ್ಜೆ ಕಸಿ ಮತ್ತು ಜೀವಕೋಶ ಚಿಕಿತ್ಸಾ ವಿಭಾಗ, ಹೆಮಟಾಲಜಿ ಮತ್ತು ಇಮ್ಯುನೊಲಾಜಿ (ಬಿಎಚ್ಐಎಂ) ಘಟಕ ಉದ್ಘಾಟಿಸಿ ವಿಶ್ವ ಸಿಕಲ್ ಸೆಲ್ (ಕುಡಗೋಲು ಕೋಶ) ಜಾಗೃತಿ ದಿನವನ್ನು ಆಚರಿಸಿತು.
ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಮತ್ತು ಆಸ್ಪತ್ರೆಯ ಮಕ್ಕಳ ಆಂಕೊಲಾಜಿ ವಿಭಾಗವು ಮಕ್ಕಳ ಮೂಳೆ ಮಜ್ಜೆ ಕಸಿ ಮತ್ತು ಜೀವಕೋಶ ಚಿಕಿತ್ಸಾ ವಿಭಾಗ, ಹೆಮಟಾಲಜಿ ಮತ್ತು ಇಮ್ಯುನೊಲಾಜಿ (ಬಿಎಚ್ಐಎಂ) ಘಟಕ ಉದ್ಘಾಟಿಸಿ ವಿಶ್ವ ಸಿಕಲ್ ಸೆಲ್ (ಕುಡಗೋಲು ಕೋಶ) ಜಾಗೃತಿ ದಿನವನ್ನು ಆಚರಿಸಿತು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಶಾರದಾ ಮಾಧವ ಪೈ ಸ್ಮಾರಕ ಹೊರರೋಗಿ ವಿಭಾಗದಲ್ಲಿ ಬುಧವಾರ ಉದ್ಘಾಟನಾ ಸಮಾರಂಭ ನಡೆಯಿತು.ಈ ಘಟಕವು ಮೂಳೆ ಮಜ್ಜೆಯ ಕಸಿ ಮತ್ತು ಸೆಲ್ಯೂಲಾರ್ ಥೆರಪಿ ಚಿಕಿತ್ಸೆಯಂತಹ ಸುಧಾರಿತ ಚಿಕಿತ್ಸೆಗಳ ಅಗತ್ಯವಿರುವ ಮಕ್ಕಳಿಗೆ ಸಂಕೀರ್ಣ ರಕ್ತ ಶಾಸ್ತ್ರ, ಇಮ್ಯುನೊಲಾಜಿ ಮತ್ತು ಆಂಕೊಲಾಜಿಕಲ್ ಅಸ್ವಸ್ಥತೆಗಳನ್ನು ಹೊಂದಿರುವ ಮಕ್ಕಳಿಗೆ ಸಮಗ್ರ ಆರೈಕೆಯನ್ನು ಒದಗಿಸುತ್ತದೆ.ಈ ಘಟಕ ಉದ್ಘಾಟಿಸಿದ ಮಣಿಪಾಲ ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್, ನಮ್ಮ ಪ್ರದೇಶ ಮತ್ತು ದೇಶದ ನಿರಂತರವಾಗಿ ಹೆಚ್ಚುತ್ತಿರುವ ಆರೋಗ್ಯ ಸೇವಾ ಅಗತ್ಯಗಳನ್ನು ಸಮರ್ಥವಾಗಿ ಪೂರೈಸಲು ಕ್ಲಿನಿಕಲ್ ಪರಿಣತಿ, ಸಂಶೋಧನೆ ಮತ್ತು ಶಿಕ್ಷಣವನ್ನು ಸಮನ್ವಯಗೊಳಿಸುವ ಇಂತಹ ಉನ್ನತಮಟ್ಟದ ವಿಶೇಷ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.ಮಕ್ಕಳ ಆಂಕೊಲಾಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ವಾಸುದೇವ ಭಟ್ ಕೆ ಅವರು ಪ್ರಾಸ್ತಾವಿಕ ಮಾತನಾಡಿದರು.ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ಸಿಓಓ ಡಾ. ಸುಧಾಕರ್ ಕಂಟಿಪುಡಿ, ಕೆಎಂಸಿಯ ಡೀನ್ ಡಾ. ಅನಿಲ್ ಕೆ. ಭಟ್ ಉಪಸ್ಥಿತರಿದ್ದರು. ಘಟಕದ ಉಸ್ತುವಾರಿ ಮತ್ತು ಮಕ್ಕಳ ಆಂಕೊಲಾಜಿ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಅರ್ಚನಾ ಎಂ.ವಿ. ಘಟಕದ ದೃಷ್ಟಿಕೋನವನ್ನು ವಿವರಿಸಿದರು, ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಎಮಿನ್ ರಹಿಮಾನ್ ವಂದಿಸಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸ್ವಾತಿ ಪಿ.ಎಂ. ನಿರೂಪಿಸಿದರು.