ಕನ್ನಡಪ್ರಭ ವಾರ್ತೆ ಕಾಳಗಿ
12ನೇ ಶತಮಾನದಲ್ಲಿ ಬಸವೇಶ್ವರರು ಸಾರಿದ ಸಮಾನತೆ ತತ್ವದ ತಳಹದಿಯ ಮೆಲೆ ಸವಿಂಧಾನ ರೂಪಿಸಿ ಡಾ.ಬಿ.ಆರ್.ಅಂಬೇಡ್ಕರ್ ರವರು ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಿದ ಬಹು ದೊಡ್ಡ ಹೋರಾಟಗಾರ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಶುಭಾಷ ರಾಠೋಡ ಹೇಳಿದರು.ಕಾಳಗಿ ಪಟ್ಟಣದ ನೀಲಕಂಠೇಶ್ವರ ಮಂಗಲ ಮಂಟಪದಲ್ಲಿ ಹಮ್ಮಿಕೊಂಡ 134ನೇ ಡಾ.ಬಿಆರ್.ಅಂಬೇಡ್ಕರ್ ರವರ ಜಯಂತ್ಯುತ್ಸವ ನಿಮಿತ್ತ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಭೀಮ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಜಯಂತಿ ಆಚರಣೆ ಮಾಡುವುದಲ್ಲದೆ ಬಾಬ ಸಾಹೇಬರ ಚಿಂತನೆಯನ್ನು ಭಾರತದ ಪ್ರತಿಯೊಬ್ಬ ಪ್ರಜೆಯು ತಮ್ಮ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂವಿಧಾನ ಭಾರತ ದೇಶದ ಬಹುದೊಡ್ಡ ಕೊಡುಗೆ ಆ ಗ್ರಂಥಕ್ಕೆ ದಕ್ಕೆ ತರಲು ಯಾರಿಂದಲೂ ಸಾಧ್ಯವಿಲ್ಲ, ಪ್ರತಿಯೊಂದು ಪ್ರಜೆಗೆ ಅವಿಸ್ಮರಣೀಯ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ದೇವರ ಗುರುಪೀಠದ ಮರುಳಶಂಕರ ಸ್ವಾಮೀಜಿ, ಚಿಂಚೋಳಿ ಶಾಸಕ ಡಾ.ಅವಿನಾಶ್ ಜಾಧವ, ಮಾಜಿ ಜಿಪಂ ಅಧ್ಯಕ್ಷ ಭೀಮರಾವ ಟಿಟಿ ಮಾತನಾಡಿದರು. ಗಂಗಾಧರ ಕಾಡಬೂಳ, ನಾಗರಾಜ ಚಿನ್ನ, ರೇವಣಸಿದ್ದ ಮಳಗಿ, ಮಲ್ಲಪ್ಪಹೊಸಮನಿ, ಜಯಪ್ರಕಾಶ ಕಮಕನೂರ, ಕಲ್ಯಾಣರಾವ ಡೊಣ್ಣೂರ, ತಹಸೀಲ್ದಾರ ಘಮಾವತಿ ರಾಠೋಡ, ಇಒ ಬಸಲಿಂಗಪ್ಪ ಡಿಗ್ಗಿ, ಸಿಒ ಪಂಕಜಾ ರಾವೂರ, ಶಂಕರ ಹೊರೂರ, ಅನೀಲ ತೆಂಗಳಿ, ಮಹೇಂದ್ರ ಪೂಜಾರಿ, ಅಮರ ಗವಾರ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಡೊಣ್ಣೂರ, ಅವಿನಾಶ್ ಕೊಡದೂರ, ಮನೋಜ ಕೊಟನೂರ, ಗುರುನಂದೇಶ ಕೊಣಿನ, ಖತಲಪ್ಪ ಅಂಕನ, ಮಲ್ಲಿಕಾರ್ಜುನ ವಕೀಲ, ನಾಗರಾಜ ಬೇವಿನಕರ, ರತನ ಕನ್ನಡಗಿ, ಭತರ ಬುಳ್ಳಾ, ಪರಮೇಶ್ವರ ಕಟ್ಟಿಮನಿ, ರಾಜೇಂದ್ರಬಾಬು, ಅಮರ ಗೊಟುರ, ಹಣಮಂತ ಕುಡಳಿ, ಮಂಜು ದಂಡಿನ, ದಿನೇಶ ಮೋಘ ವೇದಿಕೆಯಲ್ಲಿದ್ದರು. ನಾಗರಾಜ ಸಜ್ಜನ ನಿರೂಪಿಸಿದರು. ಗುರುನಂದೇಶ ಕೋಣಿನ ಸ್ವಾಗತಿಸಿ, ಶಂಕರ ಹೇರೂರ ವಂದಿಸಿದರು.
-------------ಕೋಟ್.......
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ನಮಗೆಲ್ಲ ನಿಜವಾದ ದೇವರು. ಅವರು ನೀಡಿರುವ ಬಲಿಷ್ಠ ಸವಿಂಧಾನದಿಂದಲೇ ನಾನು ಶಾಸಕನಾಗಿದ್ದೇನೆ. ನಾನೊಬ್ಬ ಬಿಜಪಿ ಶಾಸಕನಾಗಿ ಹೇಳುವೆ ,ಸೂರ್ಯ ಚಂದ್ರ ಇರುವವರೆಗೆ ಈ ಸವಿಂಧಾನ ಇರುತ್ತದೆ ಇದನ್ನು ಬಲಾಯಿಸುವ ಶಕ್ತಿ ಯಾರಿಗೂ ಇಲ್ಲಡಾ.ಅವಿನಾಶ ಜಾಧವ, ಚಿಂಚೋಳಿ ಶಾಸಕ
-------------------ಕಾಳಗಿ ಪಟ್ಟಣದ ನೀಲಕಂಠೇಶ್ವರ ಮಂಗಲ ಮಂಟಪದಲ್ಲಿ ಏರ್ಪಡಿಸಿದ್ದ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಭೀಮ ಸಂಕಲ್ಪ ಸಮಾವೇಶ ಕಾರ್ಯಕ್ರಮವನ್ನು ಶುಭಾಷ ರಾಠೋಡ ಉದ್ಘಾಟಿಸಿದರು.