ಬಸವೇಶ್ವರ ವೃತ್ತದ ಬಳಿ ಸಿದ್ಧಗಂಗಾ ಡಾ.ಶಿವಕುಮಾರ ಮಹಾಸ್ವಾಮೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ವೀರಶೈವ ಲಿಂಗಾಯತ ಸಮಾಜದ ಮುಖಂಡರು, ನಂತರ ಪುಷ್ಪಾರ್ಚನೆ ನೆರವೇರಿಸಿ ಸಾವಿರಾರು ಮಂದಿಗೆ ಉಪಾಹಾರ ವಿತರಿಸಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ನಡುವೆ ಹಾದು ಹೋಗುವ ಮೈಸೂರು- ಊಟಿ ಹೆದ್ದಾರಿಯ ಬಸವೇಶ್ವರ ವೃತ್ತದಲ್ಲಿ ಗುರುಮಲ್ಲೇಶ್ವರ ಯುವ ಬಳಗ ಹಾಗೂ ಸಿದ್ಧಗಂಗಾ ಮಠದ ಭಕ್ತರು ಹಾಗೂ ಸಮಾಜದ ಮುಖಂಡರು ಸಿದ್ಧಗಂಗಾ ಮಠದ ಲಿಂಗೈಕ್ಯ, ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಡಾ.ಶಿವಕುಮಾರ ಮಹಾಸ್ವಾಮೀಜಿಯವರ ದಾಸೋಹ ದಿನವನ್ನು ಆಚರಿಸಿದರು.ಬಸವೇಶ್ವರ ವೃತ್ತದ ಬಳಿ ಸಿದ್ಧಗಂಗಾ ಡಾ.ಶಿವಕುಮಾರ ಮಹಾಸ್ವಾಮೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ವೀರಶೈವ ಲಿಂಗಾಯತ ಸಮಾಜದ ಮುಖಂಡರು, ನಂತರ ಪುಷ್ಪಾರ್ಚನೆ ನೆರವೇರಿಸಿ ಸಾವಿರಾರು ಮಂದಿಗೆ ಉಪಾಹಾರ ವಿತರಿಸಿದರು.
ಮೂಡುಗೂರು ಮಠದ ಶ್ರೀಗಳು, ಕಬ್ಬಹಳ್ಳಿ ಮಠದ ಶ್ರೀಗಳು, ಬೊಮ್ಮನಳ್ಳಿಮಠದ ಶ್ರೀಗಳು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲಪುರ ನಂದೀಶ್, ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್, ಎಪಿಎಂಸಿ ಅಧ್ಯಕ್ಷ ಆರ್.ಎಸ್.ನಾಗರಾಜು, ಹಾಪ್ ಕಾಮ್ಸ್ ಅಧ್ಯಕ್ಷ ಎಂ.ನಾಗೇಶ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚನ್ನಮಲ್ಲೀಪುರ ಬಸವಣ್ಣ, ಚಾಮುಲ್ ಮಾಜಿ ನಿರ್ದೇಶಕ ಕನ್ನೇಗಾಲಸ್ವಾಮಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್, ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಕೆ.ಸಿ.ಮಧು, ಯುವ ಮುಖಂಡರಾದ ಪ್ರಣಯ್, ಕಲ್ಲಹಳ್ಳಿ ಮಹೇಶ್, ಸುನೀಲ್ ಮೂಡ್ಲು, ಎಸ್.ಗುರುಪ್ರಸಾದ್, ಪಾನು, ಶಿವಪುರ ಮಂಜ, ಶಭರೀಶ್, ಮಹದೇವಸ್ವಾಮಿ, ಚೌಡಹಳ್ಳಿ ನಂದೀಶ್, ಶಿವಕುಮಾರ್ ಶಿಂಡನಪುರ, ಹಂಗಳಪುರ ರೇವಣ್ಣ, ಬಲಚವಾಡಿ ಸುಬ್ಬು, ಅಂಕಹಳ್ಳಿ ಮಹೇಂದ್ರ, ಅಭಿಷೇಕ್, ಅರ್ಜುನ್, ಸಂತು, ದೇವರಹಳ್ಳಿ ಪ್ರಕಾಶ್, ನಂಜುಂಡಸ್ವಾಮಿ ಸೇರಿದಂತೆ ನೂರಾರು ಮಂದಿ ಇದ್ದರು.ಗಮನ ಸೆಳೆದ ಭಜನೆ:
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ನಿರ್ದೇಶಕ ಬೆಟ್ಟದಮಾದಹಳ್ಳಿ ಮಹದೇವಸ್ವಾಮಿ ತಂಡ ನಡೆಸಿಕೊಟ್ಟ ಭಜನೆಯು ನೆರೆದಿದ್ದವರ ಗಮನ ಸೆಳೆಯಿತು.ತಹಸೀಲ್ದಾರ್ ಭೇಟಿ:
ಸಿದ್ಧಗಂಗಾ ಶ್ರೀಗಳ ದಾಸೋಹ ಕಾರ್ಯಕ್ರಮ ಸ್ಥಳಕ್ಕೆ ತಹಸೀಲ್ದಾರ್ ಎಂ.ಎಸ್.ತನ್ಮಯ್, ಚಾಮುಲ್ ನಿರ್ದೇಶಕ ಎಂ.ಪಿ.ಸುನೀಲ್, ಬಿಜೆಪಿ ಮಂಡಲ ಅಧ್ಯಕ್ಷ ಸಿ.ಮಹದೇವಪ್ರಸಾದ್ ಭೇಟಿ ನೀಡಿ ಶ್ರೀಗಳಿಗೆ ಪುಷ್ಪಾರ್ಚನೆ ಮಾಡಿದರು.