ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಹೆಗ್ಗವಾಡಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನದ ಹರವೆ ಹೋಬಳಿ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅ.24 ಮತ್ತು 25ರಂದು ಚಾಮರಾಜನಗರ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ನಡೆಯಲಿದ್ದು, ಪ್ರಚಾರ ಸಮಿತಿ ವತಿಯಿಂದ ಪ್ರತಿ ಹೋಬಳಿಯ ಗ್ರಾಮಗಳಲ್ಲೂ ಪ್ರಚಾರ ಮಾಡಿ ವಿಶೇಷವಾಗಿ ಧಮ್ಮ ಪಯಣ ಕಾರ್ಯಕ್ರಮವನ್ನು ಕೂಡ ಅಯೋಜನೆ ಮಾಡಿದ್ದು ಪ್ರತಿಹಳ್ಳಿಗೂ ಸಂಚರಿಸಲಿದೆ. ಧಮ್ಮ ಪ್ರಯಣವನ್ನು ಗ್ರಾಮಸ್ಥರು ಶಿಸ್ತಿನಿಂದ ಅದ್ಧೂರಿಯಾಗಿ ಬರಮಾಡಿ ಕೊಳ್ಳಬೇಕು ಎಂದು ಮನವಿ ಮಾಡಿದರು.ನಮ್ಮ ತಂದೆ ಧ್ರುವನಾರಾಯಣ್ ಅವರ ದೂರದೃಷ್ಠಿಯಿಂದ ಚಾಮರಾಜನಗರ ಜಿಲ್ಲೆಯಲ್ಲಿ ನಳಂದ ವಿಶ್ವವಿದ್ಯಾಲಯ ನಿರ್ಮಾಣಗೊಂಡಿದ್ದು, ಕಾರ್ಯರೂಪಕ್ಕೆ ಬಂದಿದೆ. ಸುತ್ತುಗೋಡೆ ಸೇರಿದಂತೆ ಹೆಚ್ಚಿನ ಕೆಲಸಗಳು ಆಗಬೇಕಿದೆ. ನಾವು, ಬಂತೇಜಿ, ಸಚಿವರಾದ ಪುಟ್ಟರಂಗಶೆಟ್ಟರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೆವು. ಮತ್ತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಲ್ಲಿ ಮನವಿ ಮಾಡಲಾಗುವುದು ಎಂದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಎಲ್ಲ ಸಮಿತಿಗಳು ಅಚ್ಚುಗಟ್ಟಾಗಿ.. ಕೆಲಸ ನಿರ್ವಹಿಸುವ ಮೂಲಕ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನವನ್ನು ಬಹಳ ಅರ್ಥಪೂರ್ಣವಾಗಿ ಯಶಸ್ವಿಗೊಳಿಸಬೇಕು ಎಂದರು.
ಮಧುಸೂದನ್ ಮಾತನಾಡಿ, ಹರವೆ ಹೋಬಳಿ ಗ್ರಾಮಗಳ ಗ್ರಾಮಸ್ಥರು ಧಮ್ಮ ಪಯಣ ಜಾಗೃತಿ ಜಾಥವನ್ನು ಬಹಳ ಅದ್ಧೂರಿಯಿಂದ ಸ್ವಾಗತಿಸಿ ಬರಮಾಡಿಕೊಳ್ಳಬೇಕು ಎಂದರು.
ಕೆರೆಹಳ್ಳಿ ಮಹದೇವಸ್ವಾಮಿ, ಮುಕ್ಕಡಹಳ್ಳಿ ಪುಟ್ಟ ಅರಸ್, ಸಾಹಿತಿ ಬಸವಣ್ಣ ಮಾತನಾಡಿದರು. ಸಭೆಯಲ್ಲಿ ಹೆಗ್ಗವಾಡಿ ಕೆಂಪರಾಜು, ಕೆರೆಹಳ್ಳಿ ರಾಜ್ ಕುಮಾರ್, ಅಜಯ್‌ಶಂಭು, ನಿವೃತ್ತ ಶಿಕ್ಷಕ ಲಾಲಿಂಗಸ್ವಾಮಿ,ಹೊಸಹಳ್ಳಿ ಜಯಪ್ರಕಾಶ್, ಗೋಪಿ, ಕೆ.ರೇವಣ್ಣ, ಹೊಸಹಳ್ಳಿ ಶಿವರಾಜ್ , ಹೆಗ್ಗವಾಡಿ ನಂದೀಶ್, ಹೊಸಹಳ್ಳಿ ಅವಿನ್ ಕುಮಾರ್ ಇತರರು ಭಾಗವಹಿಸಿದ್ದರು.