ಪಾಂಡವಪುರ:
ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಅಪಾರ ಭಕ್ತರು ದೇವರ ದರ್ಶನ ಪಡೆದು ಪೂಜೆ ಪುನಸ್ಕಾರ ಸಲ್ಲಿಸಿ ಪುನೀತರಾದರು.
ಜಾತ್ರೆ ಹಿನ್ನೆಲೆಯಲ್ಲಿ ಶ್ರೀಲಕ್ಷ್ಮೀನಾರಾಯಣಸ್ವಾಮಿ ಉತ್ಸವವು ಮಧ್ಯಾಹ್ನ 12.30ಕ್ಕೆ ಪ್ರಾರಂಭಗೊಂಡು ದೇವಸ್ಥಾನ ಸುತ್ತ ಪ್ರದಕ್ಷಿಣೆ ಹಾಕಿದ ನಂತರ ಮಧ್ಯಾಹ್ನ 1.30ಕ್ಕೆ ಸಮಾಪ್ತಿಗೊಂಡಿತು. ಈ ವೇಳೆ ಯುವಕರು ಉದ್ಘೋಷಗಳನ್ನು ಹಾಕಿದರು.ಉತ್ಸವ ದೇವಸ್ಥಾನಕ್ಕೆ ಬರುತ್ತಿದ್ದಂತೆಯೇ ಮದ್ದಿನ ಬಾಣ, ರಾಮಬಾಣ ಸಿಡಿಸಲಾಯಿತು. ಭಕ್ತರು ಬಾಯಿ ಬೀಗ, ಸಂತಾನಕ್ಕಾಗಿ ಮಕ್ಕಳಾಗದವರು ಒದ್ದೆ ಬಟ್ಟೆಯಲ್ಲಿ ಮುತ್ತೈದೆಯರ ಬಳಿ ಮಡಿಲು ಒಡ್ಡುವುದು ಸೇರಿದಂತೆ ಇತ್ಯಾದಿ ಹರಕೆಗಳನ್ನು ತೀರಿಸಿದರು.
ರಾತ್ರಿಯವರೆಗೂ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಆಗಮಿಸಿ ಶ್ರೀಲಕ್ಷ್ಮೀನಾರಾಯಣಸ್ವಾಮಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ದೇವಸ್ಥಾನದ ಪ್ರಧಾನ ಅರ್ಚಕರು, ದೇವಸ್ಥಾನದ ಜೀಣೋದ್ಧಾರ ಸಮಿತಿ ಅಧ್ಯಕ್ಷರು, ನಿರ್ದೇಶಕರು, ಗ್ರಾಮದ ಮುಖಂಡರು, ಯುವಕರು ಜಾತ್ರಾ ಮಹೋತ್ಸವದ ಯಶಸ್ವಿಗಾಗಿ ಶ್ರಮಿಸಿದರು.
ಮದ್ದೂರು:ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಅಂಗವಾಗಿ ವಿವಿಧ ಶಾಲೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರನ್ನು ಸನ್ಮಾನಿಸಲಾಯಿತು.
ನಂತರ ನಡೆದ ವೇದಿಕೆ ಕಾರ್ಯಕ್ರಮಕ್ಕೆ ಶಾಸಕ ಉದಯ್ ಚಾಲನೆ ನೀಡಿದರು. ಗುರು ಮತ್ತು ಶಿಷ್ಯರು ನಡುವಿನ ಬಾಂಧವ್ಯ ಕುರಿತು ಶಿಕ್ಷಣ ಇಲಾಖೆ ನಿರ್ದೇಶಕರ ಕಚೇರಿ ವಿಶ್ರಾಂತ ವಿಷಯ ಪರಿವೀಕ್ಷಕ ನಂಜರಾಜ ಅರಸು ಪ್ರಧಾನ ಭಾಷಣ ಮಾಡಿದರು. ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ನಿರ್ದೇಶಕಿ ವಿನುತಾ ಉದಯ್, ಸಿಪಾಯಿ ಶ್ರೀನಿವಾಸ್, ಕೆ.ಎಂ.ರವಿ, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಬಿ. ಧನಂಜಯ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೇಮಾವತಿ, ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕಿ ರಾಜೇಶ್ವರಿ ಹಾಗೂ ಶಿಕ್ಷಕರ ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.