ರಾಜ್ಯದಲ್ಲಿರುವ 150 ಸಿಕಲ್ ಸೆಲ್ ಪ್ರಕರಣಗಳಲ್ಲಿ ಎಚ್.ಡಿ. ಕೋಟೆ ತಾಲೂಕಿನಲ್ಲೇ 72 ಇವೆ

KannadaprabhaNewsNetwork |  
Published : Jun 25, 2025, 01:18 AM IST
55 | Kannada Prabha

ಸಾರಾಂಶ

ಸಿಕೆಲ್ ಸೆಲ್ ಕಾಯಿಲೆಹಲವು ವರ್ಷಗಳಿಂದ ಇತ್ತು, ಆದರೆ 2022 ರಿಂದೀಚೆಗೆ ಸಿಕಲ್ ಸೆಲ್ ಅನಿಮೀಯ ಕಾಯಿಲೆ ತಡೆಗಟ್ಟಲು ಅಭಿಯಾನವನ್ನು ಆರಂಭಿಸಲಾಗಿದೆ.

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ

ರಾಜ್ಯದಲ್ಲಿರುವ 150 ಸಿಕಲ್ ಸೆಲ್ ಪ್ರಕರಣಗಳಲ್ಲಿ ಎಚ್.ಡಿ. ಕೋಟೆ ತಾಲೂಕಿನಲ್ಲೇ 72 ಪ್ರಕರಣಗಳು ಇವೆ ಎಂದು ಸಿಕಲ್ ಸೆಲ್ ನ ಜಿಲ್ಲಾ ನೋಡಲ್ ಅಧಿಕಾರಿ ಡಾ. ಜಯಂತ್ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಅಂಬೇಡ್ಕರ್ ಭವನದದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮತ್ತು ತಾಲೂಕು ಆರೋಗ್ಯ ಕೇಂದ್ರದಿಂದ ನಡೆದ ವಿಶ್ವ ಸಿಕಲ್ ಸೆಲ್ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ 72, ಹುಣಸೂರು ತಾಲೂಕಿನಲ್ಲಿ 15 ಹಾಗೂ ನಂಜನಗೂಡು ತಾಲೂಕಿನಲ್ಲಿ ಮೂರು ಪ್ರಕರಣಗಳು ಕಾಣಿಸಿಕೊಂಡಿದ್ದು, ಇವರಿಗೆ ಸೂಕ್ತ ಚಿಕಿತ್ಸೆಯನ್ನು ಆರೋಗ್ಯ ಇಲಾಖೆಯಿಂದ ನೀಡಲಾಗುತ್ತಿದೆ ಎಂದರು.

ತಜ್ಞ ವೈದ್ಯೆ ದೀಪಾ ಭಟ್ ಮಾತನಾಡಿ, ಸಿಕೆಲ್ ಸೆಲ್ ಕಾಯಿಲೆಹಲವು ವರ್ಷಗಳಿಂದ ಇತ್ತು, ಆದರೆ 2022 ರಿಂದೀಚೆಗೆ ಸಿಕಲ್ ಸೆಲ್ ಅನಿಮೀಯ ಕಾಯಿಲೆ ತಡೆಗಟ್ಟಲು ಅಭಿಯಾನವನ್ನು ಆರಂಭಿಸಲಾಗಿದೆ.

ಈ ಕಾಯಿಲೆಯು ಆದಿವಾಸಿಗಳಲ್ಲಿ ಅಲ್ಲದೇ ಚಾಮರಾಜನಗರದಲ್ಲಿ ವೀರಶೈವ ಸಮಾಜದಲ್ಲಿ, ಎಚ್.ಡಿ. ಕೋಟೆ ತಾಲೂಕಿನ ಹ್ಯಾಂಡ್ ಪೋಸ್ಟ್ ಹಾಗೂ ಉದ್ಬೂರಿನಲ್ಲಿ ಮುಸ್ಲಿಂ ಸಮುದಾಯದವರಿಗೆ ಸಹ ಕಾಣಿಸಿಕೊಂಡಿದೆ ಎಂದರು.

ಮುಂದಿನ ದಿನಗಳಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಸಿಕೆಲ್ ಸೆಲ್ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು, ಒಂದು ವೇಳೆ ಸಿಕಲೆ ಸೆಲ್ ಕಂಡುಬಂದಲ್ಲಿ ಸೂಕ್ತ ಚಿಕಿತ್ಸೆ ದೊರೆಯಲಿದ್ದು, ಅದರ ಪ್ರಯೋಜನೆಯನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.

ಒಂದು ವೇಳೆ ಈ ಕಾಯಿಲೆ ಕಾಣಿಸಿಕೊಂಡರೆ ಶೇ. 40 ರಷ್ಟು ಅಂಗವಿಕಲತೆ ಎಂದು ಗುರುತಿಸಲಾಗುವುದು ಎಂದು ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಟಿ. ರವಿಕುಮಾರ್ ಮಾತನಾಡಿ, ಸಿಕಲ್ ಸೆಲ್ ಅನಿಮಿಯಾವನ್ನು ಗುಣಪಡಿಸಲು ಸಾಧ್ಯವಿಲ್ಲ, ಆದರೆ ಚಿಕಿತ್ಸೆ ಮತ್ತು ನಿರ್ವಹಣೆಯ ಮೂಲಕ ರೋಗ ಲಕ್ಷಣಗಳನ್ನು ನಿಯಂತ್ರಿಸಬಹುದು ಮತ್ತು ಸಮಸ್ಯೆಗಳನ್ನು ತಡೆಯಬಹುದು. ಚಿಕಿತ್ಸೆಗಳಲ್ಲಿ ನೋವು ನಿರ್ವಹಣೆ, ರಕ್ತ ವರ್ಗಾವಣೆ, ಔಷಧಿಗಳು ಮತ್ತು ಕೆಲವೊಮ್ಮೆ ಮೂಳೆ ಮಜ್ಜೆಯ ಕಸಿ ಸೇರಿವೆ. ಸೋಂಕುಗಳನ್ನು ತಡೆಯಲು ಮತ್ತು ನಿರ್ವಹಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಸಮುದಾಯ-ಆಧಾರಿತ ಸಂಸ್ಥೆಗಳು ಮತ್ತು ಆರೋಗ್ಯ ವೃತ್ತಿಪರರ ಬೆಂಬಲವು ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಬಹಳ ಮುಖ್ಯ ಎಂದರು.ತಹಸೀಲ್ದಾರ್ ಶ್ರೀನಿವಾಸ್, ತಾಪಂ ಇಒ ಧರಣೇಶ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಧುಕುಮಾರ್, ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯ ಚಿಕ್ಕಣ್ಣ, ಲ್ಯಾಂಪ್ಸ್ ಅಧ್ಯಕ್ಷ ಕಾಳಕಲ್ಕರ್, ಗ್ರಾಪಂ ಅಧ್ಯಕ್ಷ ಶೈಲೇಂದ್ರ, ಸದಸ್ಯ ಅಯ್ಯಪ್ಪ, ರತ್ನಮ್ಮ, ಬಸವರಾಜು, ಕೆ.ಆರ್. ಆಸ್ಪತ್ರೆಯ ಎಚ್.ಓ.ಡಿ. ಶರತ್, ಟ್ರೈಬಲ್ ಅಧಿಕಾರಿ ಮಹೇಶ್, ನಾಗರಾಜು, ರವಿರಾಜ್ ಇದ್ದರು.

------------------

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ