ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮಹಿಳೆಯರು ಕರ್ನಾಟಕ ಧಮ್ಮ ಪ್ರಚಾರದಲ್ಲಿ ಮುಂಚೂಣಿಗೆ ಬರುವ ತನಕ ಧಮ್ಮ ಪ್ರಚಾರವಾಗುವುದಿಲ್ಲ ಎಂದು ಕರ್ನಾಟಕದ ಲೇಖಕ, ಚಿಂತಕ ಹಾಗೂ ವಿಮರ್ಶಕ ರಹಮತ್ ತರೀಕೆರೆ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲೂಕಿನ ಯಲಕ್ಕೂರು ಗ್ರಾಮದಲ್ಲಿ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆ ಹಾಗೂ ಯಲಕ್ಕೂರು ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ನಡೆದ 2569ನೇ ಪವಿತ್ರ ವೈಶಾಖ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾವುದೇ ಧರ್ಮ ಮಹಿಳೆಯರಿಂದ ನೆಲಕ್ಕೆ ಬೇರು ಬಿಟ್ಟಿರುತ್ತದೆ. ಮಹಾರಾಷ್ಟ್ರದಲ್ಲಿ ತುಂಬಾ ಸಂಘಟನೆ ಮಾಡಿದ್ದೇನೆ. ಅಲ್ಲಿ ಮಹಿಳೆಯರು ಧಮ್ಮದ ಚಟುವಟಿಕೆಯಲ್ಲಿ ಇದ್ದಾರೆ. ಅಂಬೇಡ್ಕರ್ ಸಂಘದ ಚಟುವಟಿಕೆಯಲ್ಲಿದ್ದಾರೆ. ಮಕ್ಕಳಿಗೆ ಶಿಕ್ಷಣ ಕೊಡಿಸುವ ವಿಚಾರದಲ್ಲಿ ಮತ್ತು ಹೋರಾಟಗಳಲ್ಲೂ ಇದ್ದಾರೆ. ಬರೀ ಧಮ್ಮ ಮಾತ್ರ ಪ್ರಚಾರ ಮಾಡುತ್ತಿಲ್ಲ ಧಮ್ಮ ಪ್ರಚಾರದ ಜೊತೆಗೆ ಅಂಬೇಡ್ಕರ್ ಚಿಂತನೆ ಪ್ರಚಾರ, ಅಸ್ಪಶ್ಯತೆ ವಿರುದ್ಧ ಹೋರಾಟ, ಸಮಾನತೆಗಾಗಿ ಹೋರಾಟ, ವಿದ್ಯಾರ್ಥಿ ನಿಲಯ ಕಟ್ಟಿಸುವುದನ್ನು ಮಹಿಳೆಯರು ಮಾಡಿದ್ದಾರೆ. ಎಂದರು.ಕರ್ನಾಟಕದಲ್ಲೂ ಮಹಿಳೆಯರು ಭಾಗವಹಿಸಬೇಕಿದೆ. ಕರ್ನಾಟಕದಲ್ಲಿ ಬೌದ್ಧ ಧರ್ಮ ಹೇಗೆ ಬೆಳೆಯುತ್ತಿದೆ ಎಂದು ಒಂದು ಮಾದರಿ ಸಮೀಕ್ಷೆ ಮಾಡಿದೆ. ಕರ್ನಾಟಕದಲ್ಲಿ ಬೌದ್ಧ ಧರ್ಮ, ಧಮ್ಮ ಬೇರೂರುವ ಮುಂಚೆ ಬಿರುಕು ಬಿಟ್ಟಿದೆ. ಒಂದು ಕಾಲಕ್ಕೆ ಕರ್ನಾಟಕದಲ್ಲಿ ಧಮ್ಮ ಇತ್ತು. ಅದು ದೊಡ್ಡ ಪ್ರಮಾಣದಲ್ಲಿತ್ತು. ನಶಿಸಿಹೋಗಿದೆ. ಈಗ ಹೊಸದಾಗಿ ಎಲ್ಲ ಊರುಗಳಲ್ಲಿ ಬೌದ್ಧ ಸಮಾಜ, ಧಮ್ಮ ಬರುತ್ತಿದೆ ಎಂದರು. ಗೌತಮ ಯುದ್ಧಕ್ಕೆ ಒಪ್ಪಿಕೊಂಡಿದ್ದರೆ ನಮಗೆ ಬುದ್ಧ ಸಿಗುತ್ತಿರಲಿಲ್ಲ. ಬುದ್ಧನ ಬೆಳಕು ಜಗತ್ತಿಗೆ ಸಿಕ್ಕಿರೊದು ಯುದ್ಧ ವಿರೋಧ ಮಾಡಿದ್ದರಿಂದ ಸಮಾಜದಲ್ಲಿ ಅಸಮಾನತೆ ವಿರುದ್ಧ ಯುದ್ಧವಾಯಿತು. ಹೀಗಾಗಿ ಅಂಬೇಡ್ಕರ್ ಧಮ್ಮವನ್ನು ನಮಗೆ ಕೊಟ್ಟರು. ದಲಿತರಿಗೆ ಕೊಟ್ಟಿದಲ್ಲ. ಇಡೀ ಭಾರತಕ್ಕೆ ಧಮ್ಮಾವನ್ನು ಕೊಟ್ಟಿದ್ದಾರೆ.ಆಗಾಗಿ ಸರ್ವರಿಗೂ ಬುದ್ಧ ಸಿಗಬೇಕು ಎಂದರು. ಕೊಳ್ಳೇಗಾಲ ಜೇತವನ ಬುದ್ಧ ವಿಹಾರದ ಭಂತೆ ಮನೋರತಥೇರಾ ಸಾನ್ನಿಧ್ಯ ವಹಿಸಿದ್ದರು. ಭಾರತೀಯ ಬೌದ್ಧ ಮಹಾಸಭಾದ ಅಧ್ಯಕ್ಷ ಆರ್.ಬಸವರಾಜು ಅಧ್ಯಕ್ಷತೆ ವಹಿಸಿದ್ದರು.
ಡಾ.ಬಿ.ಆರ್.ಕೃಷ್ಣಕುಮಾರ್ ಗೌತಮ ಬುದ್ಧರ ಜನನ, ಜ್ಞಾನೋದಯ ಮತ್ತು ಮಹಾಪರಿನಿಬ್ಬಾಣ ಕುರಿತು ವಿಷಯ ಮಂಡಿಸಿದರು. ಸಿ.ಎನ್.ಉಮೇಶ್‌ಕುದರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಪ್ರಸನ್ನ, ಗ್ರಾಪಂ ಅಧ್ಯಕ್ಷೆ ಸುಶೀಲಮ್ಮ ನಾಗರಾಜು, ಸದಸ್ಯ ವೈ.ಎನ್.ನಾಗರಾಜು, ರಂಗಕರ್ಮಿ ಕೆ.ವೆಂಕಟರಾಜು, ಬಿಎಸ್‌ಐ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕ್ ಯಲಕ್ಕೂರ್, ರಮಾಬಾಯಿ ಫೌಂಡೇಷನ್ ಅಧ್ಯಕ್ಷೆ ಪುಷ್ಪಾಮರಿಸ್ವಾಮಿ, ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ, ಮುಖಂಡ ಸಿ.ಎಂ.ಕೃಷ್ಣಮೂರ್ತಿ, ಸಿದ್ದರಾಜಪ್ಪ ಹಾಗೂ ಬೌದ್ಧ ಉಪಾಸಕ, ಉಪಾಸಕಿಯರು ಭಾಗವಹಿಸಿದ್ದರು.