ಹಲಗೂರು:
ಇಲ್ಲಿನ ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿ ನೂತನ ಕಟ್ಟಡದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ 135ನೇ ಜನ್ಮದಿನದಲ್ಲಿ ಮಾತನಾಡಿ, ಅಂಬೇಡ್ಕರ್ ಬಾಲ್ಯದಿಂದಲೇ ಅಸ್ಪೃಶ್ಯತೆ, ಕೇಳಿರಿಮೆ, ಬಡತನವನ್ನು ಅನುಭವಿಸಿದ್ದರು. ಆದರೆ, ಅವರು ತಾವು ಪಡೆದ ಶಿಕ್ಷಣದ ಮೂಲಕ ಇಡೀ ದೇಶವೇ ಮೆಚ್ಚುವಂತಹ ಸಂವಿಧಾನ ರಚಿಸಿ ಮಹಾನ್ ವ್ಯಕ್ತಿಯಾದರು ಎಂದರು.
ಅಸ್ಪೃಶ್ಯತೆಯ ಆಧಾರದ ಮೇಲೆ ಸಮಾಜದಿಂದ ದೂರ ಉಳಿದಿದ್ದ ಆರ್ಥಿಕವಾಗಿ ಹಿಂದುಳಿದ್ದಿದ್ದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರಿಗೆ ಸಮಾಜದಲ್ಲಿ ಸಮಾನತೆ ತಂದುಕೊಡುವ ನಿಟ್ಟಿನಲ್ಲಿ ಪ್ರವೃತ್ತರಾಗಿದ್ದರು. ನಾವುಗಳು ಅವರ ಆದರ್ಶ, ತತ್ವಗಳನ್ನು ಮೈಗೂಡಿಸಿಕೊಂಡು ಅವರ ಮಾರ್ಗದರ್ಶನದಲ್ಲಿ ಸಂವಿಧಾನವನ್ನು ತಿಳಿದು ನಡೆಯಬೇಕು ಎಂದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಆಲಂಗೂರ್ ಮಂಜುನಾಥ್, ಹಲಗೂರು ಅಂಬೇಡ್ಕರ್ ಸಂಘದ ಕಾರ್ಯದರ್ಶಿ ಟಿ.ಎಚ್.ಸ್ವಾಮಿ ಮಾತನಾಡಿ, ಅಂಬೇಡ್ಕರ್ ಕುರಿತು ಮಾತನಾಡಿದರು. ಇದೇ ವೇಳೆ ಸಂಘದಿಂದ ವಿವಿಧ ಗ್ರಾಮಗಳಲ್ಲಿ ಇರುವ 15 ಜನ ಹಿರಿಯ ನಾಗರಿಕರು ಹಾಗೂ ನೂರು ವರ್ಷ ತುಂಬಿರುವ ಐದು ಜನ ಶತಾಯುಶಷಿಗಳಾದ ಮಾದಯ್ಯ, ಮಾದಮ್ಮ, ಜಯಮ್ಮ, ಚಿಕ್ಕಹೊನ್ನಯ್ಯ, ಪುಟ್ಟ ಮಾದಯ್ಯ ಸೇರಿದಂತೆ 20 ಜನರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.