ಭಾರತದ ಶ್ರೇಷ್ಠ ನಕ್ಷತ್ರ ಅಂಬೇಡ್ಕರ್‌: ಶಾಸಕ ಮನಗೂಳಿ

KannadaprabhaNewsNetwork |  
Published : Apr 15, 2025, 01:00 AM IST
ಮನಗೂಳೀ | Kannada Prabha

ಸಾರಾಂಶ

ವಿಜಯಪುರ ವಾರ್ತೆ ಸಿಂದಗಿ: ಅಂಬೇಡ್ಕರ್ ಅವರ ತತ್ವಶಾಸ್ತ್ರ ಇಂದಿಗೂ ಪ್ರಸ್ತುತವಾಗಿದೆ. ಭಾರತದ ಸಾಮಾಜಿಕ-ಸಾಂಸ್ಕೃತಿಕ ವ್ಯವಸ್ಥೆಯನ್ನು ರೂಪಿಸುವಲ್ಲಿ ಬಾಬಾಸಾಹೇಬ್ ಅವರ ಪಾತ್ರವಿಲ್ಲದಿದ್ದರೆ, ಹಳೆಯ ಮತ್ತು ಪುರಾತನ ನಂಬಿಕೆಗಳಿಂದ ದೇಶ ಪ್ರಗತಿ ಸಾಧಿಸುವುದು ಅಸಾಧ್ಯವಾಗಿತ್ತು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ವಿಜಯಪುರ ವಾರ್ತೆ ಸಿಂದಗಿ

ಅಂಬೇಡ್ಕರ್ ಅವರ ತತ್ವಶಾಸ್ತ್ರ ಇಂದಿಗೂ ಪ್ರಸ್ತುತವಾಗಿದೆ. ಭಾರತದ ಸಾಮಾಜಿಕ-ಸಾಂಸ್ಕೃತಿಕ ವ್ಯವಸ್ಥೆಯನ್ನು ರೂಪಿಸುವಲ್ಲಿ ಬಾಬಾಸಾಹೇಬ್ ಅವರ ಪಾತ್ರವಿಲ್ಲದಿದ್ದರೆ, ಹಳೆಯ ಮತ್ತು ಪುರಾತನ ನಂಬಿಕೆಗಳಿಂದ ದೇಶ ಪ್ರಗತಿ ಸಾಧಿಸುವುದು ಅಸಾಧ್ಯವಾಗಿತ್ತು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಬಸ್ ನಿಲ್ದಾಣ ಬಳಿಯ ಡಾ.ಅಂಬೇಡ್ಕರ್ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ಡಾ.ಅಂಬೇಡ್ಕರ್ ಅವರು ಈ ದೇಶದ ಅಸ್ಮಿತೆ. ಭಾರತದ ಭವ್ಯ ಭವಿಷ್ಯಕ್ಕಾಗಿ ತಮ್ಮ ಇಡೀ ಬದುಕನ್ನು ಸಮರ್ಪಣೆ ಮಾಡಿದ ದೊಡ್ಡ ರತ್ನ. ಸಂವಿಧಾನವನ್ನು ರಚನೆ ಮಾಡುವ ಮೂಲಕ ಸರ್ವ ಸಮುದಾಯಗಳಿಗೂ ನ್ಯಾಯ ನೀಡಿದ ಆದರ್ಶ ವ್ಯಕ್ತಿ ಎಂದರು.

ಬುದ್ಧ ವಿಹಾರದ ಬಂತೇಜಿ ಸಂಘಪಾಲ್ ಮಾತನಾಡಿ, ಡಾ.ಅಂಬೇಡ್ಕರ್ ಕೊಡುಗೆಯನ್ನು ಈ ದೇಶ ಯಾವತ್ತು ಮರೆಯಬಾರದು. ದೇಶದ ಭವಿಷ್ಯತ್ತಿಗಾಗಿ ಅನೇಕ ಕನಸುಗಳನ್ನು ಕಂಡು ಅವುಗಳನ್ನ ಸಾಕಾರ ಮಾಡಿದವರಲ್ಲಿ ಡಾ.ಅಂಬೇಡ್ಕರ್ ಅವರು ಅಗ್ರಗಣ್ಯರು. ಬುದ್ಧನ ಅನುಯಾಯಿಯಾಗಿ ಬುದ್ಧ ತತ್ವಗಳನ್ನ ಜಗತ್ತಿಗೆ ಸಾರಿದವರು. ಸೂರ್ಯ ಚಂದ್ರ ಇರುವರೆಗೆ ಅವರ ಹೆಸರು ಅಜರಾಮರವಾಗಿರಲಿಗೆ ಎಂದು ಹೇಳಿದರು.ಈ ವೇಳೆ ತಹಸೀಲ್ದಾರ್ ಪ್ರದೀಪ್ ಕುಮಾರ್ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ್ ಯಡ್ರಾಮಿ, ರಾಜಶೇಖರ್ ಕೂಚಬಾಳ, ಮಹಾನಂದ ಬೊಮ್ಮಣ್ಣಿ, ಶರಣು ಸಿಂಧೆ, ಪರಶುರಾಮ್ ಕಾಂಬಳೆ, ನೂರ ಅಹ್ಮದ್ ಅತ್ತಾರ್ ಸೇರಿ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೂರಾರು ಮಹಿಳೆಯರಿಂದ ಬುದ್ಧ ಮಂತ್ರ ಪಠಣ ನೆರವೇರಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''