ಕನ್ನಡಪ್ರಭ ವಾರ್ತೆ, ತುಮಕೂರು
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ,ರಾಜ್ಯಮಟ್ಟದ ಬಾಬೂ ಜಗಜೀವನ್ ರಾಂ ಪ್ರಶಸ್ತಿ ಪುರಸ್ಕೃತ ಹೋರಾಟಗಾರರಾದ ನರಸೀಯಪ್ಪ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಇಕ್ಬಾಲ್ ಅಹಮದ್ ಅವರನ್ನು ಗೌರವಿಸಲಾಯಿತು.ಕಾರ್ಯಕ್ರಮ ಕುರಿತು ಮಾತನಾಡಿದ ಮಾಜಿ ಶಾಸಕ ಎಸ್.ಷಪಿ ಅಹಮದ್, ಶಿಕ್ಷಣ, ರಾಜಕೀಯ, ಸಾಮಾಜಿಕ ಸ್ಥಾನಮಾನಗಳಿಂದ ವಂಚಿತವಾದ ಸಮುದಾಯಗಳಿಗೆ ಸಂವಿಧಾನದ ಮೂಲಕ ಸಮಾನತೆಯನ್ನು ಕಲ್ಪಿಸಿದ ಕೀರ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ಎಲ್ಲಾ ವರ್ಗದ ಜನರು ಸಮಾನತೆಯಿಂದ ಬದುಕುವಂತಹ ವಾತಾವರಣವನ್ನು ಕಲ್ಪಿಸಿದ ಕೀರ್ತಿ ಬಾಬಾ ಸಾಹೇಬರಿಗೆ ಸಲ್ಲುತ್ತದೆ ಎಂದರು.ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಅಹಮದ್ ಮಾತನಾಡಿ, ಇಡೀ ವಿಶ್ವವೇ ಇಂದು ಬಾಬಾ ಸಾಹೇಬರ ಜನ್ಮ ದಿನವನ್ನು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ದಿನವನ್ನಾಗಿ ಆಚರಿಸುತ್ತಿದೆ.ಅಸ್ಪಷ್ಯತೆಯ ವಿರುದ್ಧ ಜೀವನದ ಕೊನೆಯ ವರೆಗೂ ಹೋರಾಟ ಮಾಡಿದವರು ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಇತ್ತೀಚಗೆ ನೇಮಕಗೊಂಡಿರುವ ಸಮತಿ ಎಂಬುವವರು ಯಾರು ಎಂದು ಬಹುತೇಕರಿಗೆ ತಿಳಿದಿಲ್ಲ. ಅಲ್ಲದೆ ಅವರು ತುಮಕೂರು ಲೋಕಸಭಾ ಕ್ಷೇತ್ರದವರಲ್ಲ. ಬೆಂಗಳೂರು ಗ್ರಾಮಾಂತರ ಲೋಕಸಭಾದ ನಿವಾಸಿ ಮತ್ತು ಮತದಾರರಾಗಿದ್ದಾರೆ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ನೇಮಕವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಗಮನಕ್ಕಾಗಲಿ, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕಾಗಲಿ ತರದೆ, ನೇರವಾಗಿ ಕೆಪಿಸಿಸಿ ಮಹಿಳಾ ಅಧ್ಯಕ್ಷರಿಂದ ನೇಮಕಾತಿ ಪತ್ರ ಪಡೆದಿರುವುದು ಸರಿಯಲ್ಲ. ಕೂಡಲೇ ಆಗಿರುವ ಪ್ರಮಾದ ಸರಿಪಡಿಸಬೇಕು.ತುಮಕೂರು ಲೋಕಸಭಾ ಕ್ಷೇತ್ರದ ಕಾರ್ಯಕರ್ತರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದರು. ಸಮಾರಂಭದಲ್ಲಿ ಹಿರಿಯ ಮುಖಂಡ ಜಿ.ಎಚ್.ಷಣ್ಮುಗಪ್ಪ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹೇಶ್, ಫಯಾಜ್, ಪ್ರಸನ್ನಕುಮಾರ್, ಶಿವಾಜಿ, ಜಯಮೂರ್ತಿ, ನಿಂಗರಾಜು, ಕುಮಾರಸ್ವಾಮಿ, ಅನಿಕುಮಾರ್, ಧಾರ್ಮಿಕ ಪರಿಷತ್ ಸದಸ್ಯ ಶ್ರೀನಿವಾಸಕುಮಾರ್,ಸಂಜೀವಕುಮಾರ್,ಅಂಬರೀಷ್, ಇರ್ಫಾನ್ ಅಹಮದ್, ನಯಾಜ್ ಅಹಮದ್, ಮಹಬೂಬ್ ಪಾಷ, ಗುರುಪ್ರಸಾದ್, ಸುಜಾತ, ನಾಗಮಣಿ, ವಿಜಯಲಕ್ಷ್ಮೀ, ಸುವರ್ಣಮ್ಮ, ಸೈಯದ್ ದಾದಾಪೀರ್, ಸಿದ್ದಲಿಂಗೇಗೌಡ, ತರುಣೇಶ್, ಪಂಚಾಕ್ಷರಯ್ಯ, ಲಕ್ಷ್ಮಣಯ್ಯ, ಮಂಜುನಾಥ್, ರೇವಣ್ಣಸಿದ್ದಯ್ಯ ಮತ್ತಿತರರು ಪಾಲ್ಗೊಂಡಿದ್ದರು.