ಎಲ್ಲರೂ ಅಕ್ಷರ ಕಲಿತಾಗ ಅಭ್ಯುದಯ ಸಾಧ್ಯ

KannadaprabhaNewsNetwork |  
Published : Apr 15, 2026, 01:30 AM IST
ಮಧುಗಿರಿಯಲ್ಲಿ  ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಡಾ.ಬಾಬೂ ಜಗಜೀವನ್ ಮಾರ್ ಅವರ ಜಯಂತ್ಗೆ ಪಾವಗೃ ವೃತ್ತದ ಬಳಿ ಇರುವ ಅಂಬೇಡ್ಕರ್ ಪುತ್ಥಳಿಗೆ ಎಂಎಲ್ಸಿ ಆರ್.ರಾಜೇಂದ್ರ ಚನಾನೆ ನೀಡಿದರು.  | Kannada Prabha

ಸಾರಾಂಶ

ಸಮಾಜದ ಎಲ್ಲ ವರ್ಗದವರು ಅಕ್ಷರ ಕಲಿತಾಗ ಅಭ್ಯುದಯ ಸಾಧ್ಯ ಎಂದು ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಸಮಾಜದ ಎಲ್ಲ ವರ್ಗದವರು ಅಕ್ಷರ ಕಲಿತಾಗ ಅಭ್ಯುದಯ ಸಾಧ್ಯ ಎಂದು ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಅಭಿಪ್ರಾಯಪಟ್ಟರು. ಇಲ್ಲಿನ ಕನ್ನಡ ಭವನದಲ್ಲಿ ಮಂಗಳವಾರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ರವರ 135ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬೂ ಜಗಜೀವನ್ ರಾಮ್ ರವರ 119ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರಳ ಬದುಕು ಶ್ರೇಷ್ಠ ಚಿಂತನೆ, ಸಮ ಸಮಾಜದ ನಿರ್ಮಾಣ ಅಂಬೇಡ್ಕರ್ ದ್ದಾಗಿತ್ತು. ಇಬ್ಬರಲ್ಲೂ ಏಕ ರೀತಿಯ ಚಿಂತನೆ ಕಾಣಬಹುದು. ಅರಿವು ಅಕ್ಷರದಿಂದಲೇ ಸಾಧ್ಯ. ಪುಸ್ತಕ ಓದುವ ಮೂಲಕ ಜ್ಞಾನ ಸಂಪಾದನೆಗೆ ಅಧಿಕ ಒತ್ತು ಕೊಡುವ ಮೂಲಕ ಸಂವಿಧಾನದ ಆಶಯಗಳನ್ನು ಪಾಲಿಸಬೇಕು ಎಂದರು. ತಹಸೀಲ್ದಾರ್ ಎಚ್.ಶ್ರೀನಿವಾಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಾನ್ ವ್ಯಕ್ತಿಗಳನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೇ ಜಾಗೃತಿಗಾಗಿ ಎಚ್ಚರಗೊಳ್ಳಿ, ಎಲ್ಲರ ಏಳಿಗೆಗೆ ಎಲ್ಲರೂ ಪ್ರಮಾಣಿಕವಾಗಿ ಶ್ರಮಿಸಬೇಕು ಎಂದರು.

ಮುಖ್ಯ ಭಾಷಣಕಾರ ವಕೀಲರಾದ ಐ.ಡಿ.ಹಳ್ಳಿ ನರಸಿಂಹಮೂರ್ತಿ ಮಾತನಾಡಿ,ಅಂಬೇಡ್ಕರ್ ಆದರ್ಶಗಳನ್ನು ಆಚರಣೆಗೆ ತನ್ನಿ ಅಂಧ ಆರಾಧನೆ ನಿಲ್ಲಿಸಿ ಎಂದರು. ಮತ್ತೊಬ್ಬ ಮುಖ್ಯ ಭಾಷಣಕಾರ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ರಂಗಧಾಮಯ್ಯ ಮಾತನಾಡಿ, ಮಹಾನ್ ಚೇತನಗಳಾದ ಅಂಬೇಡ್ಕರ್ , ಬಾಬೂಜಿ ವಿಶ್ವವಿಶಾಲ ಸಾಗರ ,ಅವರ ಪರಿಶ್ರಮದಿಂದ ನಾವು ದಡದಲ್ಲಿ ನಿಂತು ಆನಂದ ಅನುಭವಿಸುತ್ತಿದ್ದೇವೆ. ಅಂಬೇಡ್ಕರ್ ತಳ ಸಮುದಾಯಗಳ ಜನರಿಗೆ ಮತದಾನದ ಹಕ್ಕನ್ನು ಕಲ್ಪಿಸಿದರು. ಆ ಪವಿತ್ರ ಕಾರ್ಯವನ್ನು ಅಮಿಷಗಳಿಗೆ ಮಾರಿಕೊಳ್ಳದಿರಿ. ದೇಗುಲ ಸುತ್ತದೆ ಅಕ್ಷರ ಸುತ್ತಿ, ಜ್ಞಾನ ಬೆಳಸಿ ಜನ ಮನ್ನಣೆ ಗಳಿಸಿ ಕಡು ಬಡತನದಲ್ಲೂ ಸುಮಾರು 40 ಪದವಿಗಳನ್ನು ಪಡೆದ ಅಂಬೇಡ್ಕರ್ ಇತರರಿಗೆ ಆದರ್ಶವಾಗಬೇಕು. ಕೇವಲ ಆರಾಧಿಸಿದರೆ ಸಾಲದು ಅವರು ನಂಬಿದ್ದ ಜೀವನ ಮೌಲ್ಯಗಳನ್ನು ಆಚರಣೆಗೆ ತನ್ನಿ ಎಂದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣಾಧಿಕಾರಿ ದಿನೇಶ್ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಂಗಪ್ಪ,ಡಿಡಿಪಿಐ ಮಾಧವರೆಡ್ಡಿ, ಬಿಇಒ ಕೆ.ಎನ್‌.ಹನುಮಂತರಾಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ತಾಪಂ ಎಡಿ ಧನಂಜಯ್,ಅಕ್ಷರ ದಾಸೋಹದ ಅಧಿಕಾರಿ ಚಿತ್ತಯ್ಯ, ಸಿಆರ್ ಪಿ ರಮೇಶ್, ಸಿಡಿಪಿಒ ಕುಮಾರನಾಯ್ಕ್, ತಾ.ವೈದ್ಯಾಧಿಕಾರಿ ಡಾ.ಆನಂದ್, ರಜಾಲಿ,ಸುನೀಲ್ ,ಬಿಸಿಎಂ ಇಲಾಖೆ ಸಹಾಯಕ ನಿರ್ದೇಶಕ ಜಯರಾಮ್, ನಾ.ಮಹಾಲಿಂಗೇಶ್, ಜೀವಿಕ ಸಂಘಟನೆ ಮಂಜುನಾಥ್, ಹಾಸ್ಟೆಲ್ ಮೇಲ್ವಿಚಾರಕರಾದ ಚಿಕ್ಕರಂಗಯ್ಯ ಚಂದ್ರಶೇಖರ ರೆಡ್ಡಿ, ದಲಿತ ಸಾಹಿತ್ಯ ಪರಿಷತ್‌, ಅಧ್ಯಕ್ಷ ಡಾ.ಮಹರಾಜು, ದಲಿತ ಮುಖಂಡರಾದ ದೊಡ್ಡಹೊಸಹಳ್ಳಿ ನರಸಿಂಹಮೂರ್ತಿ, ಹನುಮಂತರಾಜು, ಸಿದ್ದಾಪುರ ಸಂಜೀವಯ್ಯ, ನೇರಳೇಕೆರೆ ಬಿ.ರಂಗನಾಥ್, ಹೊಸಕೆರೆ ಗೋವಿಂದರಾಜು, ಸರ್ವಜ್ಞ ವೇದಿಕೆ ಅಧ್ಯಕ್ಷ ವೆಂಕಟರಮಣಪ್ಪ ಇತರರಿದ್ದರು. ಚಂದ್ರಶೇಖರರೆಡ್ಡಿ ಸ್ವಾಗತಿಸಿ ಪಿ.ರಮೇಶ್ ನಿರೂಪಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಮೆ ಹೆಸರಲ್ಲಿ ರಾಜಕೀಯ ಸರಿಯಲ್ಲ: ಶಾಸಕ ಬಾಲಕೃಷ್ಣ
ಮನೆ ಮುಂದೆಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ