ತಿಪಟೂರು: ತಾಲೂಕಿನ ಕುಪ್ಪಾಳು ಗ್ರಾಪಂ ವತಿಯಿಂದ ಕರಡಿ ಶೆಟ್ಟಿಹಳ್ಳಿ ಮಾರ್ಗವಾಗಿ ಆಗಮಿಸಿದ ಸಂವಿಧಾನ ಜಾಗೃತಿ ರಥವನ್ನು ಪುಷ್ಪಾರ್ಚನೆ ಮಾಡುವ ಮೂಲಕ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮಹಿಳೆಯರ ಪೂರ್ಣಕುಂಭ ಸ್ವಾಗತದಿಂದ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.
ಗ್ರಾಪಂ ಮಾಜಿ ಅಧ್ಯಕ್ಷ ಬಳ್ಳೆಕಟ್ಟೆ ಮಹೇಶ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್‌ರವರ ಜೀವನ ಇಡೀ ಜಗತ್ತಿಗೆ ಆದರ್ಶಪ್ರಾಯವಾದುದು. ಅವರ ಸಂವಿಧಾನದ ವಿಧಿ ವಿಧಾನಗಳು ಸರ್ವರಿಗೂ ಪ್ರೇರಕವಾಗಿದ್ದು, ಅವುಗಳನ್ನು ನಾವೆಲ್ಲರೂ ಅಳವಡಿಸಿಕೊಂಡಾಗ ಮಾತ್ರ ಅಂಬೇಡ್ಕರ್ ಆಶಯ ಈಡೇರಲಿದೆ ಎಂದರು.ಮತ್ತೋರ್ವ ಮಾಜಿ ಅಧ್ಯಕ್ಷ ಡಾ. ಎಸ್.ಕೆ. ಷಡಕ್ಷರಿ ಮಾತನಾಡಿ, ಭವ್ಯ ಭಾರತ ಬೃಹತ್ ಸಂವಿಧಾನದ ನಿರ್ಮಾಣಕ್ಕೆ ಅಂಬೇಡ್ಕರ್ ಅತಿ ಹೆಚ್ಚಿನ ಶ್ರಮ ವಹಿಸಿದ್ದಾರೆ, ಅವರ ಸಂವಿಧಾನ ಜಾಥಾ ನಡೆಸುತ್ತಿರುವ ಸರ್ಕಾರಕ್ಕೆ ಹಾಗೂ ದಲಿತ ಮುಖಂಡರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಅನಿತಾ ಷಡಕ್ಷರಿ, ನೋಡಲ್ ಅಧಿಕಾರಿ ಡಾ. ನಂದೀಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತ್ರಿವೇಣಿ, ಹಿರಿಯ ದಲಿತ ಮುಖಂಡ ಶೆಟ್ಟಿಹಳ್ಳಿ ಚಿಕ್ಕಣ್ಣ, ಕುಪ್ಪಾಳು ರಂಗಸ್ವಾಮಿ, ಜಿಪಂ ಮಾಜಿ ಸದಸ್ಯ ಶಾಂತಪ್ಪ, ಮುಖ್ಯ ಶಿಕ್ಷಕ ಪಟ್ಟಾಭಿರಾಮು, ಶಿಕ್ಷಕ ಉದಯ್, ಪಿಡಿಒ ಪ್ರಸನ್ನಾತ್ಮ, ಗ್ರಾಪಂ ಸದಸ್ಯರಾದ ದರ್ಶನ್, ಯೋಗೀಶ್, ವಸಂತ್ ಕುಮಾರ್, ಉಪಾಧ್ಯಕ್ಷೆ ಗಾಯತ್ರಿ, ಗ್ರಂಥಪಾಲಕ ಬಳ್ಳೆಕಟ್ಟೆ ಶಂಕರಪ್ಪ, ದಲಿತ ಮುಖಂಡರಾದ ವೆಂಕಟಶ್, ಶಂಕರಯ್ಯ, ಪ್ರಭಾಕರ್, ಮಹೇಶ್, ರಂಗಸ್ವಾಮಿ, ಕೆಂಪಮ್ಮ, ಚಂದ್ರಶೇಖರ್, ಕೆಂಪಣ್ಣ, ಮೋಹನ್, ಸುರೇಶ್, ನಾಗರಾಜು, ಮೇಲ್ವಿಚಾರಕಿ ಜಲಜಾಕ್ಷಮ್ಮ ಸೇರಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ದಲಿತ ಮುಖಂಡರು, ಗ್ರಾಮಸ್ಥರು, ಶಾಲಾ ಮಕ್ಕಳು ಭಾಗವಹಿಸಿದ್ದರು.ಶಾಲಾ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು.