ಅಂಬೇಡ್ಕರ್ ಸಾಮಾಜಿಕ ಚಿಂತನೆ ಎಲ್ಲರಿಗೂ ಪ್ರೇರಣೆ

KannadaprabhaNewsNetwork |  
Published : Apr 19, 2026, 02:00 AM IST
ಪೊಟೋ೧೫ಸಿಪಿಟಿ೩: ತಾಲೂಕಿನ ತಟ್ಟೆಕೆರೆ ಗ್ರಾಮದ ದಿ ಆಪಲ್ ಶಾಲೆ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೫ನೇ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. | Kannada Prabha

ಸಾರಾಂಶ

ಚನ್ನಪಟ್ಟಣ: ದೀನ ದಲಿತರು ನೂರಾರು ವರ್ಷಗಳಿಂದ ಅನುಭವಿಸುತ್ತಿದ್ದ ಶೋಷಣೆಯ ಬದುಕಿಗೆ ಅಂತ್ಯ ಹಾಡಲು ಪಣ ತೊಟ್ಟು, ಅವರಿಗೆ ಸ್ವಾಭಿಮಾನದ ಜೀವನದ ದಾರಿ ತೋರಿದ ಮಹಾನ್ ಚೇತನ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಎಂದು ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ವಿಜಯ್ ರಾಂಪುರ ಹೇಳಿದರು

ಚನ್ನಪಟ್ಟಣ: ದೀನ ದಲಿತರು ನೂರಾರು ವರ್ಷಗಳಿಂದ ಅನುಭವಿಸುತ್ತಿದ್ದ ಶೋಷಣೆಯ ಬದುಕಿಗೆ ಅಂತ್ಯ ಹಾಡಲು ಪಣ ತೊಟ್ಟು, ಅವರಿಗೆ ಸ್ವಾಭಿಮಾನದ ಜೀವನದ ದಾರಿ ತೋರಿದ ಮಹಾನ್ ಚೇತನ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಎಂದು ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ವಿಜಯ್ ರಾಂಪುರ ಹೇಳಿದರು.

ತಾಲೂಕಿನ ತಟ್ಟೆಕೆರೆ ಗ್ರಾಮದ ದಿ ಆ್ಯಪಲ್ ಶಾಲೆ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ೧೩೫ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿ ವ್ಯವಸ್ಥೆಯಿಂದ ನಿಕೃಷ್ಟ ಜೀವನ ನಡೆಸುತ್ತಿದ್ದ ಸಮಾಜಕ್ಕೆ ಅಂಬೇಡ್ಕರ್ ಸಂವಿಧಾನದ ಮೂಲಕ ಪರಿಣಾಮಕಾರಿ ಪರಿಹಾರ ನೀಡಿದರು. ಅವರ ಸಾಮಾಜಿಕ ಚಿಂತನೆಗಳು, ನಾಗರಿಕ ಸಮಾಜದಲ್ಲಿನ ದೌರ್ಬಲ್ಯಗಳನ್ನು ಮೆಟ್ಟಿ ನಿಂತು, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾಗಿವೆ ಎಂದು ಹೇಳಿದರು.

ಪ್ರಾಂಶುಪಾಲರಾದ ನಿರ್ಮಲ ಕ್ರೂಜ್ ಮಾತನಾಡಿ, ಜಗತ್ತಿನ ಶ್ರೇಷ್ಠ ವಿದ್ವಾಂಸ ಡಾ. ಅಂಬೇಡ್ಕರ್ ಅನ್ಯಾಯದ ವಿರುದ್ಧ ಧೈರ್ಯವಾಗಿ ಹೋರಾಡಿ, ಶೋಷಿತ ಸಮುದಾಯದ ಗಟ್ಟಿ ಧ್ವನಿಯಾಗಿ ಹೊರಹೊಮ್ಮಿದರು ಹಾಗೂ ಭಾರತ ದೇಶಕ್ಕೆ ವಿಶೇಷ ಸಂವಿಧಾನ ರಚಿಸಿಕೊಡುವ ಮೂಲಕ ಜಾಗತಿಕ ಮನ್ನಣೆ ದೊರಕಿಸಿಕೊಟ್ಟರು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಸೌಮ್ಯ, ಅಂಬರೀಶ್ ಸಿ.ಎಂ., ದೈಹಿಕ ಶಿಕ್ಷಣ ಶಿಕ್ಷಕ ಈಶ್ವರಪ್ಪ, ಶಿಕ್ಷಕಿಯರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಹಿರಿಯ ಜಾನಪದ ಗಾಯಕ ಚೌ.ಪು. ಸ್ವಾಮಿ, ಡಾ. ಅಂಬೇಡ್ಕರ್ ಅವರ ಕ್ರಾಂತಿ ಗೀತೆಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

(ಪ್ಯಾನಲ್‌ನಲ್ಲಿ ಒಂದೇ ಫೋಟೋ ಬಳಸಿ)

ಪೊಟೋ೧೫ಸಿಪಿಟಿ೩: ಚನ್ನಪಟ್ಟಣ ತಾಲೂಕಿನ ತಟ್ಟೆಕೆರೆ ಗ್ರಾಮದ ದಿ ಆ್ಯಪಲ್ ಶಾಲೆ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ೧೩೫ನೇ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ವಿಜಯ್ ರಾಂಪುರ, ಆಡಳಿತಾಧಿಕಾರಿ ಸೌಮ್ಯಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿ ಹೆಚ್ಚು ಅಂಕ ಪಡೆದ 10 ಬಡ ಮಕ್ಕಳಿಗೆ ಸ್ಕಾಲರ್ ಶಿಪ್: ಆದರ್ಶ ಗೌಡ
25 ರಿಂದ ಮೇ 6ರವರೆಗೆ ಮದ್ದೂರು ಉತ್ಸವ ಅದ್ಧೂರಿ ಆಚರಣೆ